Advertisement

ಕಾಂಗ್ರೆಸ್‌ ಕಿತ್ತೂಗೆಯಲು ಪಣ: ಶಾ

03:26 PM Apr 19, 2018 | |

ಹೊಸಕೋಟೆ: ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಕಿತ್ತೂಗೆಯಲು ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನು ಪಣತೊಡಬೇಕು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಹೇಳಿದರು. ಪಟ್ಟಣದಲ್ಲಿ ಏರ್ಪಡಿಸಿದ್ದ ರೋಡ್‌ ಶೋನಲ್ಲಿ ಭಾಗವಹಿಸಿದ ನಂತರ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಕೇಂದ್ರ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡುವ ಮೂಲಕ ಚುನಾವಣೆಯಲ್ಲಿ ಬಿಜೆಪಿ ಯಶಸ್ಸುಗಳಿಸಿ ಯಡಿಯೂರಪ್ಪನವರನ್ನು ಮತ್ತೂಮ್ಮೆ ಮುಖ್ಯಮಂತ್ರಿಯನ್ನಾಗಿಸಲು ಶ್ರಮಿಸ ಬೇಕು. ಕೇವಲ ಭ್ರಷ್ಟಾಚಾರದಲ್ಲಿ ರಾಜ್ಯವನ್ನು ಪ್ರಥಮ ಸ್ಥಾನಕ್ಕೆ ಕೊಂಡೊ  ಯ್ದಿರುವ ಕಾಂಗ್ರೆಸ್‌ ಸರ್ಕಾರದ ಬಗ್ಗೆ ರಾಜ್ಯದಲ್ಲಿ ವಿರೋಧಿ ಅಲೆಯಿದ್ದು ಬಿಜೆಪಿ ಪರವಾಗಿ ಮತದಾರರು ವಿಶ್ವಾಸ ವ್ಯಕ್ತಪಡಿಸುತ್ತಿದ್ದು ಅವಕಾಶವನ್ನು ಸಮರ್ಪ ಕವಾಗಿ ಬಳಸಿಕೊಳ್ಳಬೇಕು ಎಂದರು.

ರಾಜ್ಯ ಸರ್ಕಾರದ ವೈಫ‌ಲ್ಯ ತಿಳಿಸಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮಾತನಾಡಿ, ರಾಜ್ಯದಲ್ಲಿ ಪ್ರಥಮವಾಗಿ ಕೈಗೊಂಡಿರುವ ರೋಡ್‌ಶೋಗೆ ಅಭೂತ ಪೂರ್ವವಾದ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕಾರ್ಯಕರ್ತರಲ್ಲಿ ವಿಶ್ವಾಸ ಹೆಚ್ಚಾಗಿದೆ. ಮನೆ ಮನೆಗೂ ಭೇಟಿ ನೀಡಿ ಮತದಾರರಿಗೆ ರಾಜ್ಯ ಸರ್ಕಾರದ ವೈಫ‌ಲ್ಯ, ಕೇಂದ್ರದ ಸಾಧನೆಗಳನ್ನು ತಿಳಿಸಿ ಬೂತ್‌ ಮಟ್ಟದ ಸಮಿತಿ ಗಳನ್ನು
ಬಲಿಷ್ಠಗೊಳಿಸಬೇಕು ಎಂದರು. 

20ಕ್ಕೆ ನಾಮಪತ್ರ ಸಲ್ಲಿಕೆ: ಬಿಜೆಪಿ ಅಭ್ಯರ್ಥಿ ಶರತ್‌ ಬಚ್ಚೇಗೌಡ ಮಾತನಾಡಿ, ಶಾಸಕರ ದುರಾಡಳಿತದಿಂದ ಬೇಸತ್ತಿರುವ ತಾಲೂಕಿನ ಜನರು ಬಿಜೆಪಿಗೆ ಬೆಂಬಲಿಸುವ ವಿಶ್ವಾಸವಿದೆ. ಇಂದಿನ ರೋಡ್‌ಶೋ ಸೇರಿದಂತೆ ಬಿಜೆಪಿಯ ಎಲ್ಲಾ ಕಾರ್ಯಕ್ರಮಗಳಿಗೂ ಶಾಸಕರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿ ಕೊಂಡು ಅಡ್ಡಿಪಡಿಸುವ ಸಾಧ್ಯತೆಗಳಿದ್ದು ಯಾವುದೇ ತರಹವಾದ ಆಮಿಷಗಳಿಗೆ ಒಳಗಾಗದೆ ಕಾರ್ಯಕರ್ತರು ವಿಚಲಿತರಾ ಗದೆ ಪಕ್ಷದ ಯಶಸ್ಸಿಗೆ ಹುಮ್ಮಸ್ಸು, ಉತ್ಸಾಹ ದಿಂದ ಪಾಲ್ಗೊಳ್ಳ ಬೇಕು.
ಏ.20ರಂದು ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದು ಕಾರ್ಯ ಕರ್ತರು ಪಾಲ್ಗೊಂಡು ಆಶೀರ್ವದಿಸಬೇಕು ಎಂದು ಮನವಿ
ಮಾಡಿದರು. 

ಪ್ರಧಾನಿ ಇಚ್ಛೆ ಸಾರ್ಥಕಗೊಳಿಸಿ: ಮಾಜಿ ಸಚಿವ ಬಿ.ಎನ್‌.ಬಚ್ಚೇಗೌಡ, ತಾಲೂಕಿನಿಂದ ಶರತ್‌ ಬಚ್ಚೇಗೌಡನಂತಹ ಯುವಕ ಒಳಗೊಂಡಂತೆ ಇನ್ನಿತರೆ 7 ಯುವಕರನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೆ ಆಯ್ಕೆ ಮಾಡಿದ್ದಾರೆ. ವಿಶ್ವದಲ್ಲಿಯೇ ಅತಿ ಹೆಚ್ಚಿನ ಶೇ.60ರಷ್ಟು ಯುವಶಕ್ತಿ ಹೊಂದಿರುವ ಹೆಗ್ಗಳಿಕೆಯನ್ನು ಭಾರತ ಹೊಂದಿದ್ದು ಪ್ರಧಾನಿಯವರ ಇಚ್ಛೆ ಯನ್ನು ಸಾರ್ಥಕಗೊಳಿಸಬೇಕು
ಎಂದರು.

Advertisement

ಕೇಂದ್ರ ಸಚಿವ ಸದಾನಂದಗೌಡ ಮತ್ತಿತರರಿದ್ದರು. ತಾಲೂಕಿನ ಸುಮಾರು 10 ಸಾವಿರ ಮುಖಂಡರು, ಕಾರ್ಯಕ ರ್ತರು ರೋಡ್‌ ಶೋನಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next