Advertisement

Congress ಸರಕಾರ ಮೂರು ಗುಂಪಾಗಿ ಸಿಎಂ ಕುರ್ಚಿಗಾಗಿ ಕಿತ್ತಾಡುತ್ತಿದೆ: ಕಾರಜೋಳ

05:42 PM Nov 06, 2023 | Team Udayavani |

ಹೂವಿನಹಡಗಲಿ: ರಾಜ್ಯದಲ್ಲಿ ಬರಗಾಲದಿಂದ ಜನತೆ ಸಂಕಷ್ಟದಲ್ಲಿದ್ದು ರಾಜ್ಯ ಸರಕಾರ ಮೂರು ಗುಂಪಾಗಿ ಸಿ.ಎಂ ಕುರ್ಚಿಗಾಗಿ ಕಿತ್ತಾಡುತ್ತಾ ಜನರ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸೋಮವಾರ ಕಿಡಿ ಕಾರಿದ್ದಾರೆ.

Advertisement

ತಾಲೂಕಿನಲ್ಲಿ ಬರ ಅಧ್ಯಯನ ಕುರಿತು ಆಗಮಿಸಿದ ಸಂದರ್ಭದಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿ” ರಾಜ್ಯದಲ್ಲಿ ಬರ ತೀವ್ರವಾದ ಹಿನ್ನಲೆಯಲ್ಲಿ ರೈತರು ಬೆಳೆದ ಬೆಳೆ ನಷ್ಟವಾಗಿದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಪ್ರತಿ ಹೋಬಳಿ ಮಟ್ಟದಲ್ಲಿಯು ಮೇವು ಬ್ಯಾಂಕ್ ಹಾಗೂ ಗೋಶಾಲೆ ಪ್ರಾರಂಭ ಮಾಡಬೇಕು. ಇಷ್ಟೆಲ್ಲಾ ಇದ್ದಾಗ್ಯೂ ಸಹ ಸಿದ್ದರಾಮಯ್ಯನವರ ಸರಕಾರ ಜನತೆಯನ್ನು ನಿರ್ಲಕ್ಷಿಸಿದೆ.ಕೇಂದ್ರದ ಬರ ತಂಡ ಅಧ್ಯಯನಕ್ಕೆ ಬಂದಾಗ ನಿಜವಾದ ರಾಜ್ಯದ ಪರಿಸ್ಥಿತಿ ತೋರಲು ಸರ್ಕಾರ ವಿಫಲವಾಗಿದೆ.ವಿನಾಃ ಕಾರಣ ಹಣ ನೀಡಿಲ್ಲ ಎಂದು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಎಣ್ಣೆ ಸೀಗೆಕಾಯಿ ಸಂಬಂಧ
ಡಿ.ಕೆ.ಶಿವಕುಮಾರ್ ಮುಖ್ಯ ಮಂತ್ರಿಯಾಗುತ್ತರೆ ಎಂದಾದಲ್ಲಿ ನಾನು ಶಾಸಕರ ಬೆಂಬಲ ಕೊಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿ ಅವರಿಬ್ಬರ ಸಂಬಂಧ ಎಣ್ಣೆ ಸೀಗೆಕಾಯಿ ಸಂಬಂಧ ಎಂದರು.

ನಾವು ರಾಜ್ಯದಲ್ಲಿ ನಮ್ಮ ಪಕ್ಷದಿಂದ ಸುಮಾರು 17 ತಂಡದಲ್ಲಿ ಬರ ಅದ್ಯಾಯನ ಕೈಗೊಂಡು ಮಾಹಿತಿಯನ್ನು ಕೇಂದ್ರಕ್ಕೆ ಕಳಯಹಿಸುತ್ತೇವೆ. ಹಣ ಬಿಡುಗಡೆಗೆ ಕೇಂದ್ರ ಸರ್ಕಾರಕ್ಕೆ ಸರಿಯಾದ ಮಾಹಿತಿ ಬೇಕು ಎಂದರು.

ರಾಜ್ಯದಲ್ಲಿ ಬಿಜೆಪಿಯನ್ನು ಕೇಂದ್ರ ಸರ್ಕಾರ ನಿಲ೮ಕ್ಷ ಮಾಡಿದ್ದಂತೆ ಕಾಣುತ್ತದೆಯಲ್ಲ ಎನ್ಬುವ ಪ್ರಶ್ನೆಗೆ ಉತ್ತರಿಸಿದ ಕಾರಜೋಳ ಎಲ್ಲೋ ಒಂದು ಕಡೆ ಕೆಲವೊಮ್ಮೆ ಅಂಕಿ ಅಂಶಗಳು ತಪ್ಪಾಗುತ್ತವೆ. ಅದನ್ನು ಸರಿಪಡಿಸಿಕೊಳ್ಳಲಾಗುವುದು ಎಂದರು.

Advertisement

ವಿರೋಧ ಪಕ್ಷದ ನಾಯಕರನ್ನು ನೇಮಕ ಮಾಡದಿದ್ದರೆ ಬೆಳಗಾವಿ ಅಧಿವೇಶಕ್ಕೆ ನಿಮ್ಮ ಪಕ್ಷದ ಶಾಸಕರು ಹೋಗುವುದಿಲ್ಲ ಎಂದು ಅಸಮಧಾನ ಹೊರಹಾಕಿದ್ದಾರಲ್ಲ ಎನ್ನುವ ಪ್ರಶ್ನಗೆ ಉತ್ತರಿಸಿ, ಆ ರೀತಿಯ ಅಸಮಧಾನ ನಮ್ಮ ಶಾಸಕರಲ್ಲಿ ಇಲ್ಲ ಪಕ್ಷದ ಎಲ್ಲ ಶಾಸಕರು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತರೆ ಎಂದರು.

ಸಂದರ್ಭದಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ. ಹಡಗಲಿ ಶಾಸಕ ಕೃಷ್ಣನಾಯ್ಕ. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಜಿಲ್ಲಾ ಬಿಜೆಪಿ ಅಧ್ಯಕ್ಷ ಚನ್ನಬಸವನಗೌಡ್. ಮಂಡಲದ ಅಧ್ಯಕ್ಷ ಸಂಜೀವ್ ರಡ್ಡಿ. ಮುಖಂಡರಾದ ಓದೋ ಗಂಗಪ್ಪ. ಎಚ್. ಹನುಮಂತಪ್ಪ.ಪೂಜಪ್ಪ ಈಟಿ ಲಿಂಗರಾಜ್ ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next