Advertisement

ಕಾಂಗ್ರೆಸ್‌ನಿಂದ ಬಿ.ಶಿವರಾಂಗೆ ಟಿಕೆಟ್‌ ನೀಡಲು ಆಗ್ರಹ

02:05 PM Apr 15, 2018 | Team Udayavani |

ಬೇಲೂರು: ಬೇಲೂರು ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕ ದಿ.ವೈ.ಎನ್‌.ರುದ್ರೇಶಗೌಡ ಪತ್ನಿ ಕೀರ್ತನರಿಗೆ ಕಾಂಗ್ರೆಸ್‌ನಿಂದ ಟಿಕೆಟ್‌ ಘೋಷಣೆ ಮಾಡಿರುವ ಹೈಕಮಾಂಡ್‌ ಕ್ರಮ ವಿರೋಧಿಸಿ ಮಾಜಿ ಸಚಿವ ಬಿ.ಶಿವರಾಂ ಬೆಂಬಲಿಗರು ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡುವ ಬೆದರಿಕೆ ಒಡ್ಡಿದ್ದಾರೆ.

Advertisement

ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಶಿವರಾಂ ಬೆಂಬಲಿಗರ ಮುಖಂಡ ಹೆಬ್ಟಾಳು ಕ್ಷೇತ್ರದ ಜಿಪಂ ಸದಸ್ಯ ಮಂಜಪ್ಪ ಮಾತನಾಡಿ, ಕಳೆದ 10 ವರ್ಷಗಳಿಂದ ಶಾಸಕ ವೈ.ಎನ್‌.ರುದ್ರೇಶಗೌಡ ಕಾರ್ಯಕರ್ತರನ್ನು ಕಡೆಗಣಿಸಿದ್ದು ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡುವಲ್ಲಿ ವಿಫ‌ಲಾಗಿದ್ದರು ಎಂದರು.

ಕಳೆದ 2 ವರ್ಷಗಳಿಂದ ಮಾಜಿ ಸಚಿವ ಬಿ.ಶಿವರಾಂ ಬೇಲೂರು ವಿಧಾನ ಸಭಾ ಕ್ಷೇತ್ರದಲ್ಲಿ ನೀರಾವರಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಸರ್ಕಾರದ ಹಲವಾರು ಯೋಜನೆಗಳನ್ನು ತಂದು ಮತದಾರರ ವಿಶ್ವಾಸ ಗಳಿಸುವಲ್ಲಿ ಯಶ್ವಸಿಯಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಲು ಬಯಸಿದ್ದರಲ್ಲದೆ ಹೈಕಮಾಂಡ್‌ ಸಹ ಟಿಕೆಟ್‌ ನೀಡುವುದಾಗಿ ಭರವಸೆ ನೀಡಿತ್ತು.

ಆದರೆ ತಾಲೂಕಿನ ಯಾವುದೇ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸದ ಕಾರ್ಯಕರ್ತರೊಂದಿಗೆ ಒಡನಾಟವಿರದ ಕೀರ್ತನ ಅವರಿಗೆ ಹೈಕಮಾಂಡ್‌ ಟಿಕೆಟ್‌ ನೀಡುತ್ತಿರುವುದು ಸರಿಯಲ್ಲ. ಚುನಾವಣೆಯಲ್ಲಿ ಜನ ಬೆಂಬಲ ವಿಲ್ಲದೇ ಗೆಲ್ಲುವುದು ಹೇಗೆ ಎಂದು ಪ್ರಶ್ನಿಸಿದರು.

ಹೈಕಮಾಂಡ್‌ ಕಾರ್ಯಕರ್ತರ ಮನ್ನಣೆ ಬೆಲೆ ನೀಡಿ ಶಿವರಾಂಗೆ ಟಿಕೆಟ್‌ ನೀಡದಿರುವ ಪಕ್ಷದಲ್ಲಿ ತಾಪಂ, ಜಿಪಂ, ಪುರಸಭೆ ಕಾಂಗ್ರೆಸ್‌ ಸದಸ್ಯರು ರಾಜೀನಾಮೆ ನೀಡಿ ಶಿವರಾಂರನ್ನು ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಯನ್ನಾಗಿ ಕಣಕಿಳಿಸಲಾಗುವುದು ಎಂದು ಎಚ್ಚರಿಸಿದರು.

Advertisement

ಚನ್ನಕೇಶವ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೈ.ಟಿ.ದಾಮೋಧರ್‌ ಮಾತನಾಡಿ, ಮಾಜಿ ಶಾಸಕ ವೈ.ಎನ್‌.ರುದ್ರೇಶಗೌಡರ ಪತ್ನಿ ಕಾಂಗ್ರೆಸ್‌ ಸದಸ್ಯತ್ವವನ್ನೇ  ಪಡೆದಿಲ್ಲ ಹಾಗೂ ಪಕ್ಷದ ಟಿಕೆಟ್‌ ಬೇಡಿಕೆಯನ್ನು ಸಲ್ಲಿಸಿದೇ ಇರುವಾಗ ಹೈಕಮಾಂಡ್‌ ಇವರಿಗೆ ಮಣೆ ಹಾಕುತ್ತಿರುವುದು ದುರದುಷ್ಟಕರವಾಗಿದ್ದು ಕಳೆದ 10 ವರ್ಷಗಳಲ್ಲಿ ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸುವುದಲ್ಲದೆ ಮನೆ ಬಾಗಿಲಿಗೆ ಬಂದವರನ್ನು ನಿರ್ಲಕ್ಷಸಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಮುಖಂಡ ಕೆ.ಪಿ.ಶೈಲೇಶ್‌ ಮಾತನಾಡಿ, ತಾಲೂಕಿನ ಸಮಗ್ರ ಅಭಿವೃದ್ಧಿ ಮೀಸಲು ಕ್ಷೇತ್ರವಾಗಿದ್ದಾಗಲೇ ಅಭಿವೃದ್ಧಿಯಾಗಿದ್ದು ಕಳೆದ 10 ವರ್ಷಗಳ ಆಡಳಿತ ನಡೆಸಿದ ಶಾಸಕ ವೈ.ಎನ್‌.ರುದ್ರೇಶಗೌಡರಿಂದ ತಾಲೂಕಿನ ಅಭಿವೃದ್ಧಿಯಾಗಿಲ್ಲ ಈಗಾಗಲೇ ತಾಲೂಕಾದ್ಯಂತ ಮತದಾರರು ಇವರ ವಿರುದ್ಧ ತಿರುಗಿಬಿದಿದ್ದು, ಇಂಥ ವಾತಾವರಣದಲ್ಲಿ ಇವರಿಗೆ ಟಿಕೆಟ್‌ ನೀಡುವುದು ಸೂಕ್ತವಾಗಲ್ಲ ಎಂದರು.

ಮಾಜಿ ಶಾಸಕ ಶಿವರಾಂಗೆ ಟಿಕೆಟ್‌ ನೀಡಲೇ ಬೇಕೆಂದು ಒತ್ತಾಯಿಸಿ ಬೃಹತ್‌ ಪತ್ರಿಭಟನೆ ನಡೆಸಲಾಗುವುದು ಎಂದು ನಿರ್ಣಯ ಕೈಗೊಳ್ಳಲಾಯಿತು. ಅಲ್ಲದೆ ಬಿ.ಶಿವರಾಂಗೆ ಪಕ್ಷದ ಟಿಕೆಟ್‌ ಸಿಗದಿರುವುದಕ್ಕೆ ಜಿಲ್ಲಾ ಮಂತ್ರಿ ಎ.ಮಂಜು ಕಾರಣವಾಗಿದ್ದಾರೆ ಎಂದು ಹಲವು ಕಾರ್ಯಕರ್ತರು ಆರೋಪಿಸಿ ಎ.ಮಂಜು ವಿರುದ್ಧ ಧಿಕ್ಕಾರ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪುರಸಭಾ ಉಪಾಧ್ಯಕ್ಷ ಅರುಣ್‌ಕುಮಾರ್‌, ಸದಸ್ಯ ಜುಬೇರ ಅಹಮದ್‌, ಶಿವಾನಂದ್‌, ಶಾಂತಕುಮಾರ್‌ ಬೇಲೂರು -ಹಳೇಬೀಡು ಪ್ರಾಧಿಕಾರದ ಅಧ್ಯಕ್ಷ ಬಿ.ಎ.ಜಮಾಲ್‌, ಚನ್ನಕೇಶವ ದೇವಾಲದಯ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಿಶಾಂತ, ರಂಗನಾಥ್‌, ಕಾಂಗ್ರೆಸ್‌ ಮುಖಂಡರಾದ ಸತ್ಯನಾರಾಯಣ, ತುಳಸಿ, ಗಂಗಮ್ಮ, ಮಹದೇವ, ಸೋಮಣ್ಣ, ರಾಮೇನಹಳ್ಳಿ ವೆಂಕಟೇಶ್‌, ಅರೇಹಳ್ಳಿ ನಿಂಗರಾಜ, ಲಕ್ಷ್ಮೀ, ಲೋಲಾಕ್ಷಮ್ಮ, ಜಾವಗಲ್‌ ನಾಗರಾಜು, ನವೀದ್‌, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next