Advertisement

ಮೇಘಾಲಯ ಗಣಿಯಲ್ಲಿರುವ 15 ಕಾರ್ಮಿಕರ ಸ್ಥಿತಿ ಅತಂತ್ರ

06:00 AM Dec 27, 2018 | |

ಶಿಲ್ಲಾಂಗ್‌: ಮೇಘಾಲಯದ ಪೂರ್ವ ಜೈಂತಿಯಾ ಜಿಲ್ಲೆಯ ಲುಮ್ತಾರಿ ಗ್ರಾಮದಲ್ಲಿರುವ ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಸಿಕ್ಕಿ ಹಾಕಿಕೊಂಡಿರುವ 15 ಮಂದಿಯ ರಕ್ಷಣಾ ಕಾರ್ಯ ಅತಂತ್ರವಾಗಿದೆ. ಡಿ.13 ರಂದು ಈ ಘಟನೆ ನಡೆದಿದ್ದು, ಬುಧವಾರಕ್ಕೆ 14 ದಿನ ಪೂರೈಸಿದೆ. 370 ಅಡಿ ಕೆಳಗಿನ ಭಾಗದಲ್ಲಿನ ಗಣಿ ಪ್ರದೇಶದಲ್ಲಿ ನೀರು ತುಂಬಿ ದುರಂತ ಉಂಟಾಗಿದೆ. 

Advertisement

ಡಿ.13ರಂದು 20 ಕಾರ್ಮಿಕರು ಕಲ್ಲಿದ್ದಲು ಗಣಿಗೆ ಪ್ರವೇಶಿಸಿದ್ದರು. ತಳ ಭಾಗ ಪ್ರವೇಶಿಸಿದ ಬಳಿಕ ಅವರು ಅಡ್ಡಲಾಗಿ ಕೊರೆದಿದ್ದ ಸುರಂಗಕ್ಕೆ ತೆರಳಿದ್ದರು. ಸ್ಥಳೀಯವಾಗಿ ಅದನ್ನು “ರಾಟ್‌ ಹೋಲ್‌’ ಎಂದು ಕರೆಯುತ್ತಾರೆ. ಈ ಗಣಿಯ ಸಮೀಪದಲ್ಲಿಯೇ ಇರುವ ಲಿಟೆನ್‌ ನದಿಯಲ್ಲಿ ಪ್ರವಾಹ ಉಂಟಾಗಿದ್ದರಿಂದ ಗಣಿಗೆ ನೀರು ನುಗ್ಗಿ, 15 ಮಂದಿ ಸಿಕ್ಕಿ ಹಾಕಿಕೊಂಡಿದ್ದರು. ಉಳಿದ ಐದು ಮಂದಿ ಮೇಲಕ್ಕೇರಿ ಬರುವಲ್ಲಿ ಯಶಸ್ವಿಯಾಗಿದ್ದರು. 

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮೇಘಾಲಯದಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಿಷೇಧಿಸಿದರೂ ಅಕ್ರಮವಾಗಿ ಕೆಲಸಗಳು ನಡೆಯುತ್ತಿವೆ. ಕ್ವಾರಿಯಿಂದ ನೀರೆ ತ್ತಲು ಹೈ ಪವರ್‌ ಪಂಪ್‌ಗ್ಳ ಅಗತ್ಯವಿದೆ. ಆದರೆ ಮೇಘಾಲಯ ಸರ್ಕಾರದ ಬಳಿ ಅದು ಇಲ್ಲದಿರುವುದರಿಂದ ರಭಸದಿಂದ ನೀರೆತ್ತಲು ಅನಾನುಕೂಲವಾಗಿದೆ. ಸ್ಥಳೀಯ ರಿಗೆ ದುರ್ಘ‌ಟನೆ ಬಗ್ಗೆ ಮಾಹಿತಿ ಇಲ್ಲದ್ದರಿಂದ ಪೊಲೀಸರಿಗೆ ಕೂಡ ಸ್ಥಳ ಗುರುತಿಸಲು ಕೊಂಚ ವಿಳಂಬ ಆಗಿತ್ತು. 

ಪ್ರಧಾನಿ ಕ್ರಮ ಕೈಗೊಳ್ಳಲಿ: ರಾಹುಲ್‌
ಗಣಿಯಲ್ಲಿ ಸಿಲುಕಿಕೊಂಡಿರುವವರ ರಕ್ಷಣೆಗೆ ಕ್ರಮಕೈಗೊಳ್ಳುವ ಬದಲು ಪ್ರಧಾನಿ  ಮೋದಿ ಬೊಗಿಬೀಲ್‌ ಸೇತುವೆ ಉದ್ಘಾಟನೆ ನೆಪದಲ್ಲಿ ಫೋಟೊಧೀಗಳಿಗೆ ಪೋಸ್‌ ಕೊಡುತ್ತಿ ದ್ದಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಟೀಕಿಸಿದ್ದಾರೆ. ಬುಧವಾರ ಟ್ವೀಟ್‌ ಮಾಡಿರುವ ಅವರು, ಕಾರ್ಮಿಕರ ರಕ್ಷಣೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಕೇಂದ್ರ ಸರ್ಕಾರ ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಾಗಿರುವ ಹೈಪ್ರಶರ್‌ ಪಂಪ್‌ಗ್ಳನ್ನು ನೀಡಲು ಕ್ರಮ ಕೈಗೊಳ್ಳಲಿ ಎಂದೂ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next