Advertisement

ಒಂದೇ ದಿನ 5 ಕೋಟಿ ರೂ. ಅಕ್ರಮ ಪತ್ತೆ; ಈವರೆಗೆ ಒಟ್ಟು 81.10 ಕೋಟಿ ರೂ. ಮೌಲ್ಯದ ಅಕ್ರಮ ಜಪ್ತಿ

08:16 PM Apr 02, 2024 | Team Udayavani |

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿ ತಂಡಗಳು ಕಳೆದ 24 ಗಂಟೆಯಲ್ಲಿ 5 ಕೋಟಿ ರೂ.ಗೂ ಅಧಿಕ ಮೌಲ್ಯದ ಚುನಾವಣಾ ಅಕ್ರಮವನ್ನು ಪತ್ತೆ ಹಚ್ಚಿವೆ. ನೀತಿ ಸಂಹಿತೆ ಜಾರಿಯಾದಂದಿನಿಂದ ಈ ವರೆಗೆ ಒಟ್ಟು 81.10 ಕೋಟಿ ರೂ. ಮೌಲ್ಯದ ಅಕ್ರಮವನ್ನು ಜಪ್ತಿ ಮಾಡಲಾಗಿದೆ.

Advertisement

ಕಳೆದ 24 ಗಂಟೆಯಲ್ಲಿ 2.54 ಕೋಟಿ ರೂ. ನಗದು, 38,500 ರೂ. ಮೌಲ್ಯದ ಇತರ, 8.58 ಲಕ್ಷ ಮೌಲ್ಯದ 1,529.96 ಲೀಟರ್‌ ಮದ್ಯ, 1.27 ಕೋಟಿ ರೂ.ಮೌಲ್ಯದ 19.07 ಕೆ.ಜಿ ಮಾದಕ ವಸ್ತು ವಶಕ್ಕೆ ಪಡೆಯಲಾಗಿದೆ.

ಈವರೆಗೆ 26.11 ಕೋಟಿ ರೂ. ನಗದು, 1.74 ಕೋಟಿ ರೂ. ಮೌಲ್ಯದ ಉಚಿತ ಉಡುಗೊರೆ, 10.88 ಕೋಟಿ ರೂ. ಮೌಲ್ಯದ ಇತರ, 29.42 ಕೋಟಿ ರೂ ಮೌಲ್ಯದ 9.17 ಲಕ್ಷ ಲೀಟರ್‌ ಮದ್ಯ, 3.13 ಕೋಟಿ ರೂ ಮೌಲ್ಯದ 284 ಕೆಜಿ ಮಾದಕ ವಸ್ತು, 9.43 ಕೋಟಿ ರೂ. ಮೌಲ್ಯದ 16.02 ಕೆಜಿ ಚಿನ್ನ, 27.23 ಲಕ್ಷ ರೂ. ಮೌಲ್ಯದ 59.04 ಕೆಜಿ ಬೆಳ್ಳಿಯನ್ನು ಜಪ್ತಿ ಮಾಡಲಾಗಿದೆ.

ಈವರೆಗೆ ನಗದು, ಮದ್ಯ, ಚಿನ್ನಾಭರಣ, ಬೆಳ್ಳಿ, ಉಚಿತ ಉಡುಗೊರೆ ಪ್ರಕರಣಗಳಲ್ಲಿ 1,167 ಎಫ್ಐಆರ್‌ ದಾಖಲಿಸಲಾಗಿದೆ. ಅಬಕಾರಿ ಇಲಾಖೆಯ ಘೋರ ಅಪರಾಧ ಪ್ರಕರಣದಡಿ 1,154 ಎಫ್ಐಆರ್‌ ದಾಖಲಿಸಲಾಗಿದೆ.

ಬೆಂಗಳೂರಿನ ರಾಮಮೂರ್ತಿ ನಗರದ ಪೋಲೀಸರು 22 ಲಕ್ಷ ಮೌಲ್ಯದ0.215 ಕೆಜಿ ಡ್ರಗ್ಸ್‌ ವಶಕ್ಕೆ ಪಡೆದಿದ್ದಾರೆ. ದೇವನಹಳ್ಳಿ ಪೊಲೀಸರು 85 ಲಕ್ಷ ಮೌಲ್ಯದ 0.850 ಕೆಜಿ ಡ್ರಗ್ಸ್‌ ಜಪ್ತಿ ಮಾಡಿದ್ದಾರೆ. ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯವರು 2.02 ಕೋಟಿ ನಗದು, 25.29 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next