Advertisement

ಮಹಿಳೆಯರ ದೇಗುಲ ಪ್ರವೇಶಕ್ಕೆ ಖಂಡನೆ

09:25 AM Jan 04, 2019 | |

ಬೀಳಗಿ: ಸುಮಾರು ಎಂಟುನೂರು ವರ್ಷಗಳ ಭವ್ಯ ಇತಿಹಾಸ, ಪರಂಪರೆ ಹೊಂದಿದ ಕೇರಳದ ಅಯ್ಯಪ್ಪಸ್ವಾಮಿ ದೇಗುಲವನ್ನು ಮಹಿಳೆಯರು ಪ್ರವೇಶಿಸುವ ಮೂಲಕ ಅಲ್ಲಿನ ಸಂಪ್ರದಾಯ ಮತ್ತು ಕಟ್ಟುಪಾಡುಗಳಿಗೆ ದಕ್ಕೆ ತಂದಿರುವ ಕ್ರಮ ಖಂಡನೀಯವಾಗಿದೆ ಎಂದು ಸ್ಥಳೀಯ ಅಖೀಲ ಕರ್ನಾಟಕ ಅಯ್ಯಪ್ಪಸ್ವಾಮಿ ಸೇವಾ ಸೈನ್ಯ ಕಾರ್ಯಕರ್ತರು ಗುರುವಾರ ತಹಶೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

Advertisement

ಮಹಿಳೆಯರ ದೇಗುಲ ಪ್ರವೇಶ ಖಂಡಿಸಿ ಪಟ್ಟಣದ ಮಿನಿ ವಿಧಾನಸೌಧ ಎದುರು ಅಯ್ಯಪ್ಪ ಶರಣು ಘೋಷ ಹೇಳುವ ಮೂಲಕ ಕೇರಳ ಸರಕಾರದ ವಿರುದ್ಧ ದಿಕ್ಕಾರದ ಘೋಷಣೆ ಕೂಗಿದರು. ಅಯ್ಯಪ್ಪ ವ್ರತಧಾರಿಗಳು ಮಾತನಾಡಿ, ಇದು ಹಿಂದೂ ಧರ್ಮಿಯರ ಮೇಲಿನ ವ್ಯವಸ್ಥಿತ ದಬ್ಟಾಳಿಕೆ. ಅಯ್ಯಪ್ಪ ದೇಗುಲದ ಶತ, ಶತಮಾನಗಳ ಭವ್ಯ ಪರಂಪರೆ, ಸಂಪ್ರದಾಯ ಮುರಿಯುವಲ್ಲಿ ಕಾಣದ ಕೈಗಳ ವ್ಯವಸ್ಥಿತ ಷಡ್ಯಂತ್ರವಿದೆ.

ಮಂಡಲಕಾಲ ಬ್ರಹ್ಮಚರ್ಯ ವ್ರತ ಆಚರಿಸಿ ಲಕ್ಷಾಂತರ ಅಯ್ಯಪ್ಪ ಭಕ್ತರು ಶಬರಿಗಿರಿಗೆ ತೆರಳುತ್ತಾರೆ. ಇದೊಂದು ಪವಿತ್ರ ಕಾರ್ಯ. ಇಂತಹ ಪರಿಶುದ್ಧ, ಪುಣ್ಯಕ್ಷೇತ್ರಕ್ಕೆ ಕಪ್ಪುಚುಕ್ಕೆ ಇಡಲು ಮುಂದಾಗಿರುವುದು ನೋವಿನ ಸಂಗತಿ. ಲಿಂಗ ಸಮಾನತೆ, ಮಹಿಳೆಯರ ಸಬಲೀಕರಣ ಗೌರವಿಸುತ್ತೇವೆ. ಆದರೆ, ಹಿಂದೂ ಸಂಪ್ರದಾಯದಲ್ಲಿಯೇ ಮೂಗು ತೂರಿಸಿ ಲಿಂಗ ಸಮಾನತೆಯ ಬಗ್ಗೆ ಮಾತನಾಡುವವರು, ಅನ್ಯ ಧರ್ಮಿಯರಲ್ಲಿಯೂ ಎದ್ದು ಕಾಣುವ ಹಲವು ಅಸಮಾನತೆಗಳಿಗೆ ಇವರೇಕೆ ಧ್ವನಿ ಎತ್ತುವುದಿಲ್ಲ. ಮಹಿಳೆಯರ ದೇಗುಲ ಪ್ರವೇಶ ಪ್ರಕರಣ ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಆಘಾತ ನೀಡಿದೆ. ಹಲವು ಸಂಪ್ರದಾಯ, ಕಟ್ಟುಪಾಡುಗಳ ಹಿಂದೆ ಕೆಲ ಸತ್ಯ ಕಾರಣಗಳು ಇರುತ್ತವೆ. ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ನಿಷೇಧಿ ಸಬೇಕು.
ಅಯ್ಯಪ್ಪ ಭಕ್ತರಿಗೆ ಅಗತ್ಯ ಮೂಲಸೌಕರ್ಯ ಮತ್ತು ಸೂಕ್ತ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿದರು.

ರವೀಂದ್ರ ಕಣವಿ ಗುರುಸ್ವಾಮಿ, ವಿಠ್ಠಲ ಅಂಬಿಗೇರ ಗುರುಸ್ವಾಮಿ, ಅಯ್ಯಪ್ಪ ವ್ರತಧಾರಿಗಳಾದ ರಾಜು ಹಂಡಿ, ಪುಂಡಲೀಕ ಕೇಸರಿ, ಯಮನಪ್ಪ ಹುಗ್ಗಿ, ಶ್ರೀಕಾಂತ ಶಿರೂರ, ಚೇತನ ಕಣವಿ, ಮಾರುತಿ ಕಾಸರ್‌, ಕುಮಾರ ನಾಯಕ, ಶಿವಪುತ್ರಪ್ಪ ತುಂಬರಮಟ್ಟಿ, ಮಹೇಶ ಹೂಗಾರ, ಅಣ್ಣಪ್ಪ ಮಾದರ, ಯಲಗೂರೇಶ ಮಾದರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next