Advertisement
“ಪ್ರತಿ ಸ್ಪರ್ಧಿಗಳು ಮತಗಳ ಧ್ರುವೀಕರಣದಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. ಆ ರೀತಿ ಆದ ತಕ್ಷಣ ಅಲ್ಪಸಂಖ್ಯಾತರನ್ನು ಪ್ರತಿನಿಧಿಸುವ ಪಕ್ಷ ಮತದಾರರನ್ನು ಧ್ರುವೀಕರಣಗೊಳಿಸುವ ಬಗ್ಗೆ ಸಹಾಯ ಮಾಡುತ್ತದೆ’ ಎಂದು ನಾಯಕರೊಬ್ಬರು ಹೇಳಿಕೊಂಡಿದ್ದಾರೆ. ಅದನ್ನು ತಡೆಯಲೋಸುಗವೇ ಪಕ್ಷದ ವರಿಷ್ಠ ಮಂಡಳಿ ಸಮಿತಿ ರಚಿಸಲಿದೆ ಎಂದು ಅವರು ಹೇಳಿದ್ದಾರೆ.
Related Articles
ಕೆ.ಆರ್.ಪೇಟೆ: ಜೆಡಿಎಸ್ ಪಕ್ಷವನ್ನು ಒಲ್ಲದ ಮನಸ್ಸಿನಿಂದಲೇ ತ್ಯಜಿಸಿದ್ದೇವೆ. ಈಗ ಪಕ್ಷ ಬಿಟ್ಟಾಗಿದೆ ಮತ್ತೆ ಜೆಡಿಎಸ್ ಸೇರುವ ಸಂದರ್ಭ ಒದಗಿ ಬಂದರೆ ವಿಷ ಕುಡಿದು ಸಾಯುತ್ತೇನೆಯೇ ಹೊರತು ನನ್ನ ಜೀವನದಲ್ಲಿ ಮತ್ತೆಂದಿಗೂ ಜೆಡಿಎಸ್ ಸೇರುವುದಿಲ್ಲ ಎಂದು ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ಹೇಳಿದರು.
Advertisement
ಪಟ್ಟಣದ ಟಿ.ಬಿ.ಬಡಾವಣೆಯ ಪುರಸಭಾ ಮೈದಾನದಲ್ಲಿ ತಾಲೂಕು ಚೆಲುವರಾಯಸ್ವಾಮಿ ಮತ್ತು ಜಮೀರ್ ಅಹಮದ್ ಖಾನ್ ಅಭಿಮಾನಿ ಬಳಗ ಆಯೋಜಿಸಿದ್ದ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಪಕ್ಷದ್ರೋಹಿಗಳಲ್ಲ. ಪಕ್ಷದ ಕಾರ್ಯಕರ್ತರಿಗೆ ನಾವು ಧ್ವನಿಯಾಗಿದ್ದರಿಂದ ಜೆಡಿಎಸ್ ವರಿಷ್ಠರು ನಮ್ಮನ್ನು ಪಕ್ಷ ವಿರೋಧಿಗಳಂತೆ ಬಿಂಬಿಸಿ ಹೊರಹೋಗುವಂತೆ ಮಾಡಿದರು. ಕುಮಾರಸ್ವಾಮಿ ಅಣತಿ ಮೇರೆಗೆ ನಾವು ರಾಜ್ಯಸಭಾ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದೇವೆ ಎಂದು ಹೇಳಿದರು.
ರಾಜ್ಯದಲ್ಲಿ 60 ಸ್ಥಾನಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಶಕ್ತಿ ಜೆಡಿಎಸ್‌ಗಿದೆ. ಪರಿಸ್ಥಿತಿ ಹೀಗಿರುವುವಾಗ ಜೆಡಿಎಸ್ 113 ಸ್ಥಾನ ಗೆದ್ದು ಅಧಿಕಾರಕ್ಕೇರುವುದು ಹೇಗೆ ಸಾಧ್ಯ? ಜೆಡಿಎಸ್ ವರಿಷ್ಠರಿಗೆ ಕಿಂಗ್ ಮೇಕರ್ ಆಗುವ ಕನಸಿದೆ. ಮತದಾರರು ಇದನ್ನು ಅರ್ಥಮಾಡಿಕೊಂಡು ರಾಜ್ಯದಲ್ಲಿ ಅಭಿವೃದ್ಧಿಗಾಗಿ ಕಾಂಗ್ರೆಸ್‌ಗೆ ಮತ ನೀಡಬೇಕು. ರಾಜ್ಯದಲ್ಲಿ ಸ್ಥಿರ ಸರ್ಕಾರ ರಚನೆಗೆ ಬೆಂಬಲಿಸಬೇಕೆಂದು ಜಮೀರ್ ಮನವಿ ಮಾಡಿದರು.
ಮೊದಲು ನಾನೊಬ್ಬ ಹಿಂದೂಸ್ತಾನಿ, ಅನಂತರ ಕನ್ನಡಿಗ, ಆಮೇಲೆ ಮುಸ್ಲಿಂ ಎಂದು ಹೇಳಿದ ಜಮೀರ್, ಮುಸ್ಲಿಮರ ಮತಗಳನ್ನು ವಿಭಜಿಸಿಲು ಬಿಜೆಪಿ ಹೈದರಾಬಾದಿನ ಅಸಾದುದ್ದೀನ್ ಓವೈಸಿ ಜತೆ ಒಳ ಒಪ್ಪಂದ ಮಾಡಿಕೊಂಡಿದೆ. ಓವೈಸಿ ರಾಜ್ಯಕ್ಕೆ ಕಾಲಿಡದಂತೆ ಇಲ್ಲಿನ ಮುಸ್ಲಿಮರು ಜಾಗ್ರತೆ ವಹಿಸಬೇಕು ಎಂದು ಹೇಳಿದರು.
ಪಕ್ಷದ್ರೋಹಿಗಳನ್ನು ಕಾಂಗ್ರೆಸ್‌ಗೆ ಸೇರಿಸ್ಬೇಡಿ: ಎಸ್. ಸಚ್ಚಿದಾನಂದಮಂಡ್ಯ: ಪಕ್ಷದ್ರೋಹಿ ಶಾಸಕರು ಕಾಂಗ್ರೆಸ್ ಸೇರುವುದಕ್ಕೆ ನಮ್ಮ ವಿರೋಧವಿದೆ ಎಂದು ಕೆಪಿಸಿಸಿ ಸದಸ್ಯ ಎಸ್.ಸಚ್ಚಿದಾನಂದ ಹೇಳಿದರು. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿ ಕೊತ್ತತ್ತಿ ಹೋಬಳಿ ವ್ಯಾಪ್ತಿಯ ಒಂದೇ ವೃತ್ತದಿಂದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜೆಡಿಎಸ್ ಬಂಡಾಯ ಶಾಸಕರು ಕಾಂಗ್ರೆಸ್ ಸೇರ್ಪಡೆಗೊಂಡು ಪಕ್ಷದ ಅಧಿಕೃತ ಅಭ್ಯರ್ಥಿಯಾಗಲಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಕಾರ್ಯಕರ್ತರು ಎಂದಿಗೂ ಅವಕಾಶ ನೀಡಬಾರದು. ಪಕ್ಷ ಸಂಘಟನೆಗೆ ಹತ್ತಾರು ವರ್ಷಗಳಿಂದ ದುಡಿದವರಿಗೆ ರಾಜಕೀಯ ಅಧಿಕಾರ, ಅವಕಾಶಗಳು ಸಿಗಬೇಕು ಎನ್ನುವುದು ನಮ್ಮ ಬಯಕೆ ಎಂದು ಹೇಳಿದರು. ಬಂಡಾಯ ಅಭ್ಯರ್ಥಿಯಾಗುವೆ: ಹೊರಗಿನವರಿಗೆ ಕಾಂಗ್ರೆಸ್ ಮಣೆ ಹಾಕಿದರೆ ತಾವು ತಮ್ಮ ಹಿತೈಷಿಗಳೊಂದಿಗೆ ಚರ್ಚಿಸಿ ಬಂಡಾಯವಾಗಿ ಕಣಕ್ಕಿಳಿಯುತ್ತೇನೆ ಎಂಬ ಎಚ್ಚರಿಕೆ ಸಂದೇಶವನ್ನು ಸಚ್ಚಿದಾನಂದ ರವಾನಿಸಿದರು. ಮಾಜಿ ಶಾಸಕ ಆನಂದ್‌ಸಿಂಗ್ ಇಂದು ಕಾಂಗ್ರೆಸ್‌ಗೆ
ಹೊಸಪೇಟೆ: ವಿಜಯನಗರ ಕ್ಷೇತ್ರದ ಮಾಜಿ ಶಾಸಕ ಆನಂದ್‌ಸಿಂಗ್ ಕಾಂಗ್ರೆಸ್ ಪಕ್ಷಕ್ಕೆ ಸೇರುವುದು ಖಚಿತವಾಗಿದೆ. ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ| ಜಿ.ಪರಮೇಶ್ವರ್ ಹಾಗೂ ಇತರರ ಸಮ್ಮುಖದಲ್ಲಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಜ.31ರಂದು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಬಿಜೆಪಿಯಲ್ಲಿನ ಕೆಲ ಬೆಳವಣಿಗೆಗೆಗಳಿಂದ ಆನಂದ್‌ಸಿಂಗ್ ಅಸಮಾಧಾನಗೊಂಡಿದ್ದರು. ಪಕ್ಷದ ಸ್ಥಳೀಯ ಘಟಕದಲ್ಲಿ ನಡೆದ ಕೆಲ ಚಟುವಟಿಕೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಬಿಜೆಪಿ ಪರಿವರ್ತನಾ ಯಾತ್ರೆ ನಡೆದ ಸಂದರ್ಭದಲ್ಲೂ ಆನಂದ ಸಿಂಗ್ ಅದರಲ್ಲಿ ಪಾಲ್ಗೊಂಡಿರಲಿಲ್ಲ. ಈ ಸಂದರ್ಭದಲ್ಲೇ ಸಿಂಗ್ ಬಿಜೆಪಿ ತೊರೆಯಲಿದ್ದಾರೆಂದು ಸುದ್ದಿ ಹರಡಿತ್ತು. ಈ ಮಧ್ಯೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರೊಂದಿಗೆ ಆನಂದ್ ಸಿಂಗ್ ಹಾಗೂ ಕೂಡ್ಲಿಗಿ ಶಾಸಕ ನಾಗೇಂದ್ರ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದಾದ ನಂತರ ಆನಂದ ಸಿಂಗ್ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿತ್ತು. ಮಾ.1 ರಿಂದ ರಾಜ್ಯ ನಾಯಕರ ಒಗ್ಗಟ್ಟಿನ ಯಾತ್ರೆ: ವೇಣುಗೋಪಾಲ್
ಬೆಂಗಳೂರು: ಮಾರ್ಚ್ 1 ರಿಂದ ರಾಜ್ಯ ಕಾಂಗ್ರೆಸ್ ನಾಯಕರು ಒಟ್ಟಾಗಿ ರಾಜ್ಯ ಚುನಾವಣಾ ಯಾತ್ರೆ ಕೈಗೊಳ್ಳಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ ತಿಂಗಳು ಪೂರ್ಣ ಬೂತ್‌ಮಟ್ಟದಲ್ಲಿ ಪ್ರಚಾರ ಕಾರ್ಯ ನಡೆಯಲಿದ್ದು, ಮಾರ್ಚ್ 1 ರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಸೇರಿ ಎಲ್ಲ ನಾಯಕರೂ ಒಂದೇ ವಾಹನದಲ್ಲಿ ಪ್ರವಾಸ ಆರಂಭಿಸಲಿದ್ದಾರೆ ಎಂದು ಅವರು ತಿಳಿಸಿದರು. ಬಿಜೆಪಿಯವರು ಕೋಮುವಾದ, ಹಸು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ನಾವು ಮುಂದಿನ ಐದು ವರ್ಷ ಕರ್ನಾಟಕದ ಭವಿಷ್ಯ ಹೇಗಿರಬೇಕು ಎನ್ನುವ ಅಭಿವೃದ್ಧಿ ಪರ ಯೋಚನೆ ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇವೆ ಎಂದರು. ಮಹದಾಯಿ ವಿಷಯದಲ್ಲಿ ಬಿಜೆಪಿ ನಾಯಕರು ಬರೀ ನಾಟಕವಾಡುತ್ತಿದ್ದಾರೆ. ಗೋವಾ ಕಾಂಗ್ರೆಸ್‌ನವರನ್ನು ಒಪ್ಪಿಸುವ ಮೊದಲು ಗೋವಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳು ಮಾತುಕತೆಗೆ ಒಪ್ಪಿಗೆ ಸೂಚಿಸಲಿ. ಅದನ್ನು ಬಿಟ್ಟು ಕಾಂಗ್ರೆಸ್ ನಾಯಕರನ್ನು ಒಪ್ಪಿಸಿ ಎನ್ನುವುದು ಬರೀ ನಾಟಕ ಎಂದು ಆರೋಪಿಸಿದರು. ಸತೀಶ್ ಜಾರಕಿಹೊಳಿ ಗೊಂದಲವಿಲ್ಲ: ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಪಕ್ಷದಲ್ಲಿ ಪ್ರಭಾವಿ ವ್ಯಕ್ತಿ. ಅವರ ನಡೆಯ ಬಗ್ಗೆ ಯಾವುದೇ ಗೊಂದಲವಿಲ್ಲ. ನಾನು ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿ ಎಲ್ಲ ನಾಯಕರನ್ನೂ ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ. ಅದೇ ರೀತಿ ಸತೀಶ್ ಜಾರಕಿಹೊಳಿಯನ್ನೂ ಮಾತನಾಡಿಸಿದ್ದೇನೆ. ಮುಖ್ಯಮಂತ್ರಿಯೊಂದಿಗೆ ಅವರನ್ನು ಭೇಟಿ ಮಾಡಿದರಲ್ಲೇನೂ ವಿಶೇಷವಿಲ್ಲ ಎಂದರು. ಚುನಾವಣಾ ಪ್ರಚಾರಕ್ಕೆ ಅಕ್ಕ ಪಕ್ಕದ ರಾಜ್ಯಗಳ ಸಿನಿ ತಾರೆಯರನ್ನು ಕರೆ ತರುವ ಬಗ್ಗೆ ಚಿಂತನೆ ನಡೆದಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯೇ ನಮಗೆ ದೊಡ್ಡ ಸ್ಟಾರ್ ಕ್ಯಾಂಪೇನರ್. ಅವರ ಸಾಮರ್ಥ್ಯ ಏನೆಂದು ಗುಜರಾತ್ ಚುನಾವಣೆಯಲ್ಲಿ ಸಾಬೀತಾಗಿದೆ ಎಂದು ಹೇಳಿದರು.