Advertisement

ಕೇಂದ್ರದ ಯೋಜನೆಗೆ ತಮ್ಮ ಚಿತ್ರ ಅಂಟಿಸಿ ಸಿಎಂ ಬೊಬ್ಬೆ

11:32 AM Jun 19, 2017 | Team Udayavani |

ಶಿವಮೊಗ್ಗ: ಅನ್ನಭಾಗ್ಯ ಸೇರಿದಂತೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳಿಗೆ ಸಿಎಂ ಸಿದ್ದರಾಮಯ್ಯ ತಮ್ಮ ಫೋಟೋ ಹಾಕಿಕೊಂಡು ಯೋಜನೆಯನ್ನು ತಾವೇ ಜಾರಿಗೊಳಿಸಿದಂತೆ ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ವ್ಯಂಗ್ಯವಾಡಿದರು. ತಾಲೂಕಿನ ಸಿರಿಗೆರೆಯಲ್ಲಿ ಭಾನುವಾರ ಬೆಳಗ್ಗೆ ದಲಿತ ಕೇರಿಯ ಶ್ರೀನಿವಾಸ್‌ ಎಂಬುವರ ಮನೆಯಲ್ಲಿ ಉಪಾಹಾರ ಸೇವಿಸಿದ ಬಳಿಕ ಗ್ರಾಮದ ಮಾರಿಕಾಂಬಾ
ದೇವಾಲಯದ ಆವರಣದಲ್ಲಿ ಏರ್ಪಡಿಸಿದ್ದ ಬಿಜೆಪಿ ನಡೆ ದಲಿತರೆಡೆಗೆ ಕಾರ್ಯಕ್ರಮದಲ್ಲಿ ಡಾ| ಬಿ.ಆರ್‌. ಅಂಬೇಡ್ಕರ್‌ ಹಾಗೂ ಬಾಬು ಜಗಜೀವನ್‌ರಾಂ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಬಳಿಕ ಅವರು ಮಾತನಾಡಿದರು.

Advertisement

ಅನ್ನಭಾಗ್ಯ ಸಿದ್ದರಾಮಯ್ಯ ಜಾರಿಗೆ ತಂದ ಯೋಜನೆಯಲ್ಲ. ಕೇಂದ್ರ ಸರ್ಕಾರ ಪ್ರತಿ ಕೆಜಿ ಅಕ್ಕಿಗೆ 32 ರೂ. ವ್ಯಯಿಸಿ 3ರೂ. ಗೆ ರಾಜ್ಯಗಳಿಗೆ ನೀಡುತ್ತಿದೆ. ಆದರೆ ಸಿಎಂ ಸಿದ್ದರಾಮಯ್ಯ ಯೋಜನೆ ತಮ್ಮದೆಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ನಮ್ಮ ಕಾರ್ಯಕರ್ತರು ಪ್ರತಿ ನ್ಯಾಯಬೆಲೆ ಅಂಗಡಿ ಎದುರು ಫ್ಲೆಕ್ಸ್‌ ಹಾಕಿ ವಾಸ್ತವ ಸಂಗತಿಯನ್ನು ಜನರ ಗಮನಕ್ಕೆ ತರಬೇಕೆಂದು ತಿಳಿಸಿದರು.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನಪರ ಯೋಜನೆಗಳು ಸಾಕಷ್ಟು ಜಾರಿಗೊಂಡಿವೆ. ಸಬ್ಸಿಡಿ ದರದಲ್ಲಿ ಎಲ್‌ಇಡಿ ಬಲ್ಬ್, ಜೆನರಿಕ್‌ ಔಷಧ, ಬಡ ಜನತೆಗೆ ಅಡುಗೆ ಅನಿಲ ವಿತರಿಸುವ ಉಜ್ವಲ ಯೋಜನೆ, ಪ್ರಧಾನ ಮಂತ್ರಿ ಫಸಲ್‌ ಬಿಮಾ ಸೇರಿದಂತೆ ಹಲವು ಯೋಜನೆಗಳು ಜಾರಿಯಾಗಿವೆ. ಆ ಮೂಲಕ
ಕ್ರಾಂತಿಕಾರಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next