Advertisement

ಮಾಜಿ ಯೋಧನ ಸ್ವಚ್ಛತಾ ಕಾರ್ಯ ಗ್ರಾಮಸ್ಥರಿಗೆ ಸ್ಫೂರ್ತಿ

12:30 AM Feb 22, 2019 | |

ಮಣಿಪಾಲ: ಆ ದಿನ ಕಾಜಾರಗುತ್ತು-ಪಂಜಡ್ಕ ರಸ್ತೆ ನೋಡಿದ  ಗ್ರಾಮಸ್ಥರಿಗೆ ಅಚ್ಚರಿ.ರಸ್ತೆಯ ಬದಿಯ ಕಸಗಳನ್ನೆಲ್ಲ ಗೋಣಿಗಳಲ್ಲಿ ತುಂಬಿಸಿಡಲಾಗಿತ್ತು. ಇದರ ಹಿಂದಿದ್ದ ವ್ಯಕ್ತಿ 18 ವರ್ಷ ಸೇನೆಯಲ್ಲಿ ಟ್ಯಾಂಕ್‌ ಆಪರೇಟರ್‌ ಆಗಿದ್ದ ಸ್ಥಳೀಯ ನಿವಾಸಿ ಉಪೇಂದ್ರ ನಾಯಕ್‌. 

Advertisement

ತಮ್ಮ ಸ್ಕೂಟರ್‌ನಲ್ಲೇ ಕಸ ವಿಲೇವಾರಿ ಮಾಡಿದ್ದ ಅವರ ಕೆಲಸ ಸ್ಥಳೀಯರಿಗೆ ಸ್ಫೂರ್ತಿಯಾಗಿದ್ದು ಮಾತ್ರವಲ್ಲದೆ ಸ್ಥಳೀಯ ಶ್ರೀ ಗಣೇಶ ಭಜನ ಮಂಡಳಿಯ ಸದಸ್ಯರೂ ಶ್ರಮದಾನ ಮಾಡಿ ಸ್ವಚ್ಛತೆ ಕೈಜೋಡಿಸಿದರು. 
 
ಜಿಲ್ಲಾ ಕಾರಾಗೃಹದ ಮುಂಭಾಗದಲ್ಲಿನ ರಸ್ತೆಯ ಎರಡೂ ಕಡೆಗಳಲ್ಲಿ ಅವ್ಯಾಹತ ಕಸ ಎಸೆಯಲಾಗುತ್ತಿದ್ದು, ಸ್ವತಃ ಸ್ವಚ್ಛತಾ ಕಾರ್ಯಕ್ಕಿಳಿದರು!

ರಸ್ತೆ ಬದಿಯಲ್ಲಿದ್ದ ಕಸವನ್ನು ಹೆಕ್ಕಲು ಗ್ರಾಮ ಪಂಚಾಯತ್‌ಗೆ ಒತ್ತಡ ತರುವ ಬದಲು ಜನರಲ್ಲೇ ಅರಿವು ಮೂಡು  ವಂತಾಗಬೇಕೆಂದು ಉಪೇಂದ್ರ ಅವರು ಸ್ವತಃ ಸ್ವಚ್ಛತಾ ಕಾರ್ಯಕ್ಕಿಳಿದರು. 60-80 ಮೂಟೆ ಗಳಷ್ಟು ಕಸ ಸಂಗ್ರಹವಾಯಿತು. ಜನರಿಗೆ ತಿಳಿಯಲೆಂದೇ ಮೂಟೆಗಳನ್ನು ಹಾಗೇ ಬಿಟ್ಟಿದ್ದರು. 
 
ಸ್ಥಳೀಯಾಡಳಿತಗಳು ತ್ಯಾಜ್ಯ ವಿಲೇಗೆ ಸಮರ್ಪಕ ಕ್ರಮ ಕೈಗೊಳ್ಳ ಬೇಕು. ರಸ್ತೆ ಬದಿಯಲ್ಲಿ ಕಸವನ್ನು ಬಿಸಾಡಿ
ವಿರೂಪಗೊಳಿಸಬಾರದು ಎಂಬ ಬಗ್ಗೆ ಜನರಿಗೇ ಅರಿವು ಬರಬೇಕು. ಈ ಬಗ್ಗೆ ಫ‌ಲಕಗಳನ್ನೂ ಹಾಕಲು ನಿರ್ಧರಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ. 

ಗ್ರಾಮಸ್ಥರಿಂದ ಶ್ರಮದಾನ 
ಮಾಜಿ ಯೋಧನ ಸ್ವಚ್ಛತಾ ಕಾರ್ಯದಿಂದ ಸ್ಫೂರ್ತಿ ಪಡೆದ ಸ್ಥಳೀಯ ಶ್ರೀ ಗಣೇಶ ಭಜನ ಮಂಡಳಿಯ ಸದಸ್ಯರು ಇತ್ತೀಚೆಗೆ ಸ್ವಚ್ಛತಾ ಕಾರ್ಯ ನಡೆಸಿದರು. ತಾ.ಪಂ. ಸದಸ್ಯೆ ಸಂಧ್ಯಾ ಕಾಮತ್‌, ಕೊಡಿಬೆಟ್ಟು ಗ್ರಾ.ಪಂ. ಸದಸ್ಯ ಉಮೇಶ್‌ ಬೋರ್ಕರ್‌, ಸುಜಯಾ, ಉಮೇಶ್‌, ರಘು, ಸತೀಶ್‌, ರಾಧಿಕಾ ಮತ್ತಿತರರು ಶ್ರಮದಾನದಲ್ಲಿ ಪಾಲ್ಗೊಂಡು ಸ್ವಚ್ಛತೆ ಮಾಡಿದರು. 

ಕ್ರಮ ಕೈಗೊಳ್ಳಬೇಕು
ಕಾಜಾರಗುತ್ತು ಪೆರ್ನಿ ಸೇತುವೆ ಬಳಿ ಹಾಗೂ ಹಿರೇಬೆಟ್ಟು ಹೋಗುವಲ್ಲಿ ಮಾರಿಕಟ್ಟೆ ಬಳಿ ಕಸವನ್ನು ಎಸೆದು ಹೋಗುತ್ತಾರೆ. ಈ ಬಗ್ಗೆ ಕಠಿನ ಕ್ರಮ ಕೈಗೊಳ್ಳಬೇಕು. ಸೂಚನಾ ಫ‌ಲಕ ಅಳವಡಿಸಬೇಕು. 
– ಉಮೇಶ್‌ ಬೋರ್ಕರ್‌,ಗ್ರಾ.ಪಂ.ಸದಸ್ಯ 

Advertisement

ಪ್ರೇರಣೆಯಾಗಲಿ 
ಮಾಜಿ ಯೋಧ ಉಪೇಂದ್ರ ನಾಯಕ್‌ ಅವರ ಕಾರ್ಯ ಅಭಿನಂದನೀಯ. ಇವರು ಎಲ್ಲರಿಗೂ ಪ್ರೇರಣೆಯಾಗಲಿ.
– ಸಂಧ್ಯಾ ಕಾಮತ್‌, ತಾ.ಪಂ. ಸದಸ್ಯೆ 

Advertisement

Udayavani is now on Telegram. Click here to join our channel and stay updated with the latest news.

Next