ಯಲಬುರ್ಗಾ: ತಾಲೂಕಿನ ನಾನಾ ಗ್ರಾಮಗಳಲ್ಲಿ ತಲೆದೋರಿರುವ ಕುಡಿವ ನೀರಿನ ಬವಣೆ ನೀಗಿಸಲು ಸ್ಥಾಪಿತವಾಗಿರುವ ಕುಡಿಯುವ ನೀರು ಶುದ್ಧೀಕರಣ ಕೆಟ್ಟು ನಿಂತಿವೆ.
ತಾಲೂಕಿನ ಗ್ರಾಮಗಳಲ್ಲಿ ಸಮರ್ಪಕ ಶುದ್ಧ ಕುಡಿವ ನೀರು ಪೂರೈಸಲು ನಾನಾ ಯೋಜನೆಗಳಲ್ಲಿ ಜಲಶುದ್ಧೀಕರಣ ಘಟಕಗಳು ಸ್ಥಾಪಿಸಲಾಗಿದ್ದರೂ, ಪಂಚಾಯತ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಬೇಜವಾಬ್ದಾರಿಯಿಂದ ಯೋಜನೆಗಳು ಕುಂಠಿತಗೊಂಡಿವೆ. ಅಧಿಕಾರಿಗಳ ನಿರ್ಲಕ್ಷ್ಯ ತನದಿಂದ ಗ್ರಾಮಸ್ಥರು ಅನಿವಾರ್ಯವಾಗಿ ಫ್ಲೋರೈಡ್ ನೀರು ಕುಡಿದು ನಾನಾ ರೋಗಗಳಿಂದ ಬಳಲುತ್ತಿದ್ದಾರೆ. ತಾಲೂಕಿನಲ್ಲಿ ಒಟ್ಟು 161 ಶುದ್ಧ ಕುಡಿಯುವ ನೀರಿನ ಘಟಗಳು ಇವೆ. ಈ ಪೈಕಿ 60ಕ್ಕೂ ಹೆಚ್ಚು ಗ್ರಾಮಗಳ ಘಟಕಗಳು ಕೆಟ್ಟು ನಿಂತಿವೆ. ಕ್ವಾಯಿನ್ ಬಾಕ್ಸ್, ಮೆಮೋರಿಯನ್, ಕನೆಕ್ಷನ್, ವಿದ್ಯುತ್ ಪೂರೈಕೆ ಸೇರಿದಂತೆ ಹಲವಾರು ಸಮಸ್ಯೆಗಳಿಂದ ಶುದ್ಧೀಕರಣ ಘಟಕಗಳು ಕಾರ್ಯವನ್ನು ಸ್ಥಗಿತಗೊಳಿಸಿವೆ.
ಆಗ್ರಹ: ಜನ ವಸತಿ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಬೇಡಿಕೆ ಇದೆ. ಗ್ರಾಮಗಳಲ್ಲಿ ಅಶುದ್ಧ, ಫ್ಲೋರೈಡ್‌ಯುಕ್ತ ನೀರು ಸೇವಿಸಬೇಕಿರುವುದರಿಂದ ಅನಾರೋಗ್ಯದ ಭೀತಿಯೂ ಕಾಡುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಜಿಲ್ಲಾ ಪಂಚಾಯಿತಿ ಸಾಕಷ್ಟು ಅನುದಾನ ನೀಡುತ್ತಿದೆ. ಗ್ರಾಮೀಣ ಜನರ ಬೇಡಿಕೆ ಆಧರಿಸಿ ಶೀಘ್ರವಾಗಿ ಹೊಸ ಘಟಕಗಳನ್ನು ಸ್ಥಾಪಿಸಬೇಕು. ಅರ್ಧದಷ್ಟು ಘಟಕಗಳು ಬಂದ್ ಆಗಿದ್ದು, ಅವುಗಳನ್ನು ಪುನರ್ ಆರಂಭಿಸಲು ತಕ್ಷಣ ಕ್ರಮಕೈಗೊಳ್ಳಲು ಜನತೆಯ ಆಗ್ರಹವಾಗಿದೆ.
ಕ್ರಮಕ್ಕೆ ಮುಂದಾಗಿಲ್ಲ: ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಕೆ ಸಂಬಂಧದಲ್ಲಿ ಮೂರು ನಾಲ್ಕು ವರ್ಷಗಳಿಂದ ಸಾಕಷ್ಟು ದೂರುಗಳು ಕೇಳಿಬಂದಿದ್ದು, ಇನ್ನೂ ಕೆಲವು ಸರಿಯಾಗಿ ಕಾರ್ಯನಿರ್ವಹಣೆ ಇಲ್ಲದಿರುವ ಬಗ್ಗೆ ಹಾಗೂ ಅನುದಾನ ದುರುಪಯೋಗದ ಬಗ್ಗೆ ತನಿಖೆ ನಡೆಸಿದ್ದರೂ ಯಾವ ಕ್ರಮಗಳು ಇದುವರೆಗೂ ನಡೆದಿಲ್ಲ.
•ಮಲ್ಲಪ್ಪ ಮಾಟರಂಗಿ
Advertisement
ನೀರಿಗೆ ಹಣ: ಮಳೆ, ಬೆಳೆ ಇಲ್ಲದೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ತಾಲೂಕಿನ ಜನರಿಗೆ ಶುದ್ಧ ಕುಡಿವ ನೀರಿನ ಘಟಕದಿಂದ ಒಂದು ಬಿಂದಿಗೆ ನೀರಿಗೆ ಐದು ರೂ. ಪಡೆಯುತ್ತಿದ್ದಾರೆ. ಬಡ ಕೂಲಿಕಾರರು ನಿತ್ಯ ಐದು ರೂಪಾಯಿ ಭರಿಸಿ ನೀರು ಕೊಂಡುಕೊಳ್ಳುವುದು ಕಷ್ಟಕರವಾಗಿದೆ. ಉಚಿತವಲ್ಲದಿದ್ದರೂ ನಿಗದಿ ಮಾಡಿರುವಂತೆ ಎರಡು ರೂಪಾಯಿ ಪಡೆದರೆ ಬಡವರಿಗೆ ಅನುಕೂಲವಾಗಲಿದೆ.
Related Articles
Advertisement