Advertisement
ಬಜೆ ಅಣೆಕಟ್ಟಿನಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿ ಇರುವ ಕೂಟ ಗುಂಡಿಯಿಂದ ಆದಷ್ಟು ಶೀಘ್ರ ನೀರೆತ್ತುವ ಕಾರ್ಯ ನಡೆಯಬೇಕು. ಇಲ್ಲವಾದರೆ ಸೂರ್ಯನ ಶಾಖಕ್ಕೆ ನೀರು ಆವಿಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರಾದ ಸುಧಾಕರ್ ಶೆಟ್ಟಿ ಮಟ್ಟಿಬೈಲು ತಿಳಿಸಿದ್ದಾರೆ.
2 ವರ್ಷದ ಹಿಂದೆ ನಗರಕ್ಕೆ ನೀರಿನ ಸಮಸ್ಯೆ ಹೆಚ್ಚಿದಾಗ ಪುತ್ತಿಗೆ ಸೇತುವೆ ಬಳಿಯ ಗುಂಡಿಯಿಂದ ನೀರೆತ್ತಲು ಪ್ರಯತ್ನಿಸಿದ್ದರೂ ಗ್ರಾಮಸ್ಥರ ತೀವ್ರ ವಿರೋಧದ ಹಿನ್ನೆಲೆ ಯಲ್ಲಿ ಅಲ್ಪ ಪ್ರಮಾಣದ ನೀರನ್ನು ಮಾತ್ರ ಪಂಪಿಂಗ್ ಮಾಡಲಾಗಿತ್ತು. ಮಧ್ಯಪ್ರವೇಶ ಅಗತ್ಯ
ಈಗಲೂ ಸೇತುವೆ ಆಸುಪಾಸಿನ ಗ್ರಾಮಸ್ಥರು ಪ್ರತಿಭಟಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಮಂಗಳವಾರ ಮಾಣಾಯ್, ಬಸ್ತಿ ಬಳಿ ನೀರೆತ್ತುವುದಕ್ಕೆ ವಿರೋಧಿಸಿದ ಗ್ರಾಮಸ್ಥರಿಗೆ ಸ್ವಂತ ಖರ್ಚಿನಲ್ಲಿ ಟ್ಯಾಂಕರ್ ನೀರು ಪೂರೈಸಿ ಶಾಸಕ ಕೆ. ರಘುಪತಿ ಭಟ್ ಮನವೊಲಿಸಿದಂತೆ ಪುತ್ತಿಗೆ ಆಸುಪಾಸಿನ ಗ್ರಾಮಸ್ಥರನ್ನೂ ಮನವೊಲಿಸಬೇಕಾಗುತ್ತದೆ.