Advertisement
ಈ ವರದಿಯನ್ನು ಸಿಐಡಿಯ ಅಂದಿನ ಆರ್ಥಿಕ ಅಪರಾಧಗಳ ವಿಭಾಗದ ಐಜಿಪಿ ಆಗಿದ್ದ ಹೇಮಂತ್ ನಿಂಬಾಳ್ಕರ್ ಬೆಂಗಳೂರು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿರುವುದು ಗೊತ್ತಾಗಿದೆ.
Related Articles
Advertisement
ವಿಚಾರಣೆಗೆ ರೋಷನ್ ಬೇಗ್ ಗೈರು:
ಬಹುಕೋಟಿ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಆರ್.ರೋಷನ್ ಬೇಗ್ ಗುರುವಾರ ವಿಶೇಷ ತನಿಖಾ ದಳದ (ಎಸ್‌ಐಟಿ) ವಿಚಾರಣೆಗೆ ಗೈರಾಗಿದ್ದು, ಮೂರು ವಾರಗಳ ಗಡುವು ನೀಡುವಂತೆ ತನಿಖಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ಆದರೆ, ಕಾಲವಕಾಶ ವಿಸ್ತರಿಸಲು ನಿರಾಕರಿಸಿರುವ ಎಸ್‌ಐಟಿ ಅಧಿಕಾರಿಗಳು, ಜು.15ರಂದು ಕಡ್ಡಾಯವಾಗಿ ವಿಚಾರಣೆಗೆ ಹಾಜರಾಗಲೇಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.ಗೈರಾಗಿರುವುದಕ್ಕೆ ವಿವರಣೆ ನೀಡಿರುವ ಶಾಸಕ ರೋಷನ್ ಬೇಗ್, ತಮಗೆ ಅನಾರೋಗ್ಯ ಸಮಸ್ಯೆ ಇದ್ದು, ಹಜ್ ಯಾತ್ರೆ ಕೈಗೊಂಡಿದ್ದೇನೆ. ಹಾಗೆಯೇ ಕೆಲ ವೈಯಕ್ತಿಕ ಕಾರಣಗಳಿಗಾಗಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ. ಹೀಗಾಗಿ ಖುದ್ದು ಹಾಜರಾಗಲು ಮೂರು ವಾರಗಳ ಗಡುವು ನೀಡುವಂತೆ ಮನವಿ ಮಾಡಿದ್ದರು. ಆದರೆ, ತನಿಖಾಧಿಕಾರಿಗಳು ಅದನ್ನು ನಿರಾಕರಿಸಿದ್ದಾರೆ. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಐಎಂಎ ಮುಖ್ಯಸ್ಥ, ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಬಿಡುಗಡೆ ಮಾಡಿರುವ ಆಡಿಯೋದಲ್ಲಿ, ‘ಶಾಸಕ ರೋಷನ್ ಬೇಗ್‌ಗೆ 400 ಕೋಟಿ ರೂ. ಕೊಟ್ಟಿದ್ದೇನೆ. ಅವರ ಕಾಟದಿಂದಲೇ ದೇಶ ಬಿಡಬೇಕಾಯಿತು,’ ಎಂದು ಆತ ಹೇಳಿದ್ದ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಜು.9ರಂದು ರೋಷನ್ ಬೇಗ್‌ಗೆ ನೋಟಿಸ್ ನೀಡಿತ್ತು. ಜತೆಗೆ ಜು.11ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.
ಹಣ ಹೂಡಲು ಪ್ರಚೋದನೆ: ಮೌಲ್ವಿ ಬಂಧನ
ಐಎಂಎ ವಂಚನೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಗುರುವಾರ ಮೌಲ್ವಿಯೊಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದೆ.ಶಿವಾಜಿನಗರದ ಒಪಿಎಚ್ ರಸ್ತೆಯಲ್ಲಿರುವ ಬೇಪಾರಿಯನ್ ಮಸೀದಿಯ ಧರ್ಮಗುರು ಹನೀಫ್ ಅಫ‌್ಸರ್ ಅಜೀಜಿ ಎಂಬವರನ್ನು ಬಂಧಿಸಲಾಗಿದೆ. ಆರೋಪಿ ಧರ್ಮ ಗುರುವಾಗಿದ್ದು, ಧಾರ್ಮಿಕ ಭಾವನೆಗಳನ್ನು ದುರ್ಬಳಕೆ ಮಾಡಿಕೊಂಡು ವಂಚಕ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡುವಂತೆ ಸಾವಿರಾರು ಮಂದಿಗೆ ಪ್ರಚೋದಿಸಿದ್ದ. ಈ ಆರೋಪದ ಮೇಲೆ ಮೌಲ್ವಿಯನ್ನು ಬಂಧಿಸಲಾಗಿದೆ ಎಂದು ಎಸ್‌ಐಟಿ ತಿಳಿಸಿದೆ.ಆರೋಪಿಯು ಮೌಲ್ವಿಯಾಗಿದ್ದರಿಂದ ಆತನ ಮಾತು ನಂಬಿದ ಸಾವಿರಾರು ಮಂದಿ ಲಕ್ಷಗಟ್ಟಲೇ ಹಣ ಹೂಡಿಕೆ ಮಾಡಿದ್ದರು. ಅದಕ್ಕಾಗಿ ಮನ್ಸೂರ್ ಖಾನ್ 2017ರಲ್ಲಿ ಎಚ್ಬಿಆರ್ ಲೇಔಟ್‌ನಲ್ಲಿ ಮೂರು ಕೋಟಿ ರೂ. ಮೌಲ್ಯದ ಮನೆಯೊಂದನ್ನು ಖರೀದಿಸಿ ಉಡುಗೊರೆ ರೂಪದಲ್ಲಿ ಮೌಲ್ವಿಗೆ ಕೊಟ್ಟಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿದೆ ಎಂದು ಎಸ್‌ಐಟಿ ತಿಳಿಸಿದೆ.