ಜೈಪುರ/ಹೈದರಾಬಾದ್: ರಾಜಸ್ಥಾನ, ತೆಲಂಗಾಣ ವಿಧಾನಸಭೆ ಚುನಾವಣೆಗಾಗಿನ ಬಹಿರಂಗ ಪ್ರಚಾರ ಗುರುವಾರ ಮುಕ್ತಾಯ ವಾಗಿದೆ. ಎರಡೂ ರಾಜ್ಯಗಳಲ್ಲಿ ಡಿ.7ರಂದು ಮತದಾನ ನಡೆಯಲಿದ್ದು, ಡಿ.11ರಂದು ಐದೂ ರಾಜ್ಯಗಳ ಮತ ಎಣಿಕೆ ನಡೆದು ಫಲಿ ತಾಂಶ ಪ್ರಕಟವಾಗಲಿದೆ. 2 ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೊನೆಯ ಹಂತ ದಲ್ಲಿ ಪ್ರಚಾರ ಸಭೆ ನಡೆಸಿದರು. ರಾಜ ಸ್ಥಾನದ ಪಾಲಿ ಜಿಲ್ಲೆಯಲ್ಲಿರುವ ಸುಮೇ ರ್ಪುರ್ ನಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿರುದ್ಧ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಆದಾಯ ತೆರಿಗೆ ವಂಚನೆ ಬಗ್ಗೆ ತನಿಖೆ ನಡೆಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಆದೇಶ ನೀಡಿರುವುದು ಚಾಯ್‌ವಾಲಾ ಕೈ ಗೊಂಡಿ ರುವ ಕ್ರಮಕ್ಕೆ ಧೈರ್ಯ ತುಂಬಿದೆ. ಅದಕ್ಕಾಗಿ ಸುಪ್ರೀಂಕೋರ್ಟ್‌ಗೆ ಧನ್ಯವಾದ ಸಮ ರ್ಪಿಸುವುದಾಗಿ ವ್ಯಂಗ್ಯವಾಗಿ ಹೇಳಿದ್ದಾರೆ.
“ಇನ್ನು ಹೇಗೆ ನೀವು ತಪ್ಪಿಸಿಕೊಳ್ಳುತ್ತೀರಿ ಎಂದು ನೋಡಬೇಕಾಗಿದೆ. ನಾಲ್ಕು ದಶಕ ಗಳಿಂದ ದೇಶವನ್ನು ಆಳುತ್ತಿದ್ದವರನ್ನು ಕೋರ್ಟ್‌ಗೆ ಎಳೆದು ತಂದ ಚಾಯ್‌ವಾಲನ ಧೈರ್ಯ ನೋಡಿ’ ಎಂದು ಹೇಳಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ನಾಲ್ಕು ದಶಕ ಗಳಿಂದ ಗಾಂಧಿ ಕುಟುಂಬ ದೇಶದಲ್ಲಿ ವಿಶೇಷ ಸವಲತ್ತುಗಳನ್ನು ಅನುಭವಿಸುತ್ತಿತ್ತು ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ ಚುನಾವಣೆಗೆ ಮುನ್ನವೇ ಸೋತಿದೆ. ಆ ಪಕ್ಷದ ಹೊಗಳು ಭಟರು ರಾಜಸ್ಥಾನದಲ್ಲಿ ಬಿಜೆಪಿ ಸೋತಿದೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಬಂಡಾಯ ಮತ್ತು ಆಂತರಿಕ ಕಚ್ಚಾಟಗಳಿಂದಾಗಿ ಪಕ್ಷ ಸೋಲಲಿದೆ ಎಂದಿದ್ದಾರೆ. ಹಿರಿಯ ಅಧಿಕಾರಿಗಳಿಗೆ ನಾಮ್‌ಧಾರ್ ಮತ್ತು ಅವರ ಬೆಂಬಲಿಗರು ನಡೆಸಿದ ಹಗರಣಗಳ ಬಗ್ಗೆ ಕಡತ ಶೋಧಿಸಲು ಹೇಳಿದ್ದಾಗಿಯೂ ಪ್ರಧಾನಿ ಹೇಳಿದ್ದಾರೆ.
ಅಭಿವೃದ್ಧಿಯಾಗಿದೆ: ಜೈಪುರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ರಾಜಸ್ಥಾನ ಬಿಮಾರು ಎಂಬ ಕಳಂಕದಿಂದ ಅಭಿವೃದ್ಧಿ ಯತ್ತ ಸಾಗಿದೆ ಎಂದು ಹೇಳಿ ದ್ದಾರೆ. ಚುನಾವಣೆಯಲ್ಲಿ ಪಕ್ಷ ಗೆದ್ದು ಅಧಿಕಾರ ಉಳಿಸಿಕೊಳ್ಳಲಿದೆ ಎಂದಿದ್ದಾರೆ. ರಾಜಸ್ಥಾನದಲ್ಲಿ ಬಿಜೆಪಿ 15 ರೋಡ್ ಶೋ, 222 ದೊಡ್ಡ ಸಭೆಗಳನ್ನು ನಡೆಸಿದೆ ಎಂದಿದ್ದಾರೆ.
ಹೊಸ ರಾಜ್ಯಕ್ಕೆ ಸಾಲ: ತೆಲಂಗಾಣದ ಕೊಡಾದ್‌ನಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತೆಲಂಗಾಣ ರಚನೆಯಾದ ಸಂದರ್ಭದಲ್ಲಿ 17 ಸಾವಿರ ಕೋಟಿ ರೂ.ಗಳ ಭದ್ರ ನಿಧಿ ಇತ್ತು. ಟಿಆರ್‌ಎಸ್ ಆಡಳಿತದಿಂದಾಗಿ 2 ಲಕ್ಷ ಕೋಟಿ ರೂ. ಸಾಲ ಇದೆ ಎಂದು ದೂರಿದ್ದಾರೆ. ತೆಲಂಗಾಣ ರಾಷ್ಟ್ರ ಸಮಿತಿಯ ನಿಜವಾದ ಹೆಸರು ತೆಲಂಗಾಣ- ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದು ಲೇವಡಿ ಮಾಡಿದ್ದಾರೆ. ಪ್ರಧಾನಿ ಮೋದಿ ಮತ್ತು ಹಂಗಾಮಿ ಸಿಎಂ ತಮ್ಮ ಆಡಳಿತ ಮುಂದುವರಿಸಲು ಒಪ್ಪಂದ ಏರ್ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮಹಾ ಕುಟಾಮಿಗೆ ಬೆಂಬಲ ಕೊಡಿ: ತೆಲಂಗಾಣ ಜನತೆಯನ್ನುದ್ದೇಶಿಸಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮಾತಾಡಿರುವ ವಿಡಿಯೋ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಟಿಡಿಪಿ, ಕಾಂಗ್ರೆಸ್, ಸಿಪಿಐ, ತೆಲಂಗಾಣ ಜನ ಸಮಿತಿ ರಚಿಸಿ ಕೊಂಡಿರುವ ಜನರ ಒಕ್ಕೂಟ (ಮಹಾ ಕುಟಾಮಿ)ಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ನಕ್ಸಲರ ವಿರುದ್ಧ ಹೋರಾಟ ಬಿಜೆಪಿಯಿಂದ ಸಾಧ್ಯ
ತೆಲಂಗಾಣದ ಕರೀಂನಗರದಲ್ಲಿ ಮಾತನಾಡಿದ ಉ.ಪ್ರ.ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಕ್ಸಲೀಯರು, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ವಿರುದ್ಧ ಹೋರಾಟ ನಡೆಸಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ. ಸಾವಿರಾರು ವರ್ಷಗಳ ಹಿಂದೆ ಶ್ರೀರಾಮ ಕೂಡ ರಾಕ್ಷಸರನ್ನು ನಾಶ ಮಾಡಿ ಸಮಾಜದಲ್ಲಿ ನೆಮ್ಮದಿ ತಂದಿದ್ದ ಎಂದು ಹೇಳಿದರು. ಚಂದ್ರಶೇಖರ ರಾವ್ ನೇತೃತ್ವದ ಟಿಆರ್‌ಎಸ್ ಸರ್ಕಾರ ತೆಲಂಗಾಣದ ಜನರ ನಿರೀಕ್ಷೆ ಸುಳ್ಳು ಮಾಡಿದೆ ಎಂದು ದೂರಿದ್ದಾರೆ.
ರಾಹುಲ್‌ಗೆ ಲೇವಡಿ
ರಾಜಸ್ಥಾನದಲಿ ಪ್ರಚಾರದ ವೇಳೆ, ಜುಂಜ್‌ಹುನು ಎಂಬಲ್ಲಿ ಜಾರಿಗೊಂಡಿರುವ “ಕುಂಭ ರಾಮ ನೀರು ಸರಬರಾಜು’ ಯೋಜನೆಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ “ಕುಂಭಕರಣ್ ಯೋಜನೆ’ ಎಂದು ತಪ್ಪಾಗಿ ಹೇಳಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಹಾಸ್ಯ ಮಾಡಿದ್ದಾರೆ. ಜುಂಜ್‌ಹುನುವಿನಲ್ಲಿ ಬುಧವಾರ ನಡೆದ ಬಿಜೆಪಿ ರ್ಯಾಲಿಯಲ್ಲಿ ಮಾತನಾಡಿದ ಅವರು, “”ಕುಂಭ ರಾಮ ಎಂಬುವರು ಸ್ವಾತಂತ್ರ್ಯ ಹೋರಾಟಗಾರರು. ಜಾಟ್ ಸಮುದಾಯಕ್ಕೆ ಇವರು ಕಾಂಗ್ರೆಸ್‌ನ ನಾಯಕರಾಗಿದ್ದವರು. ಆ ಪಕ್ಷದ ಅಧ್ಯಕ್ಷ ರಾಹುಲ್‌ಗೆ ತಮ್ಮ ಪಕ್ಷದ ನಾಯಕರ ಹೆಸರೇ ಗೊತ್ತಿಲ್ಲ. ಎಂದಿದ್ದಾªರೆ.