ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷರ ಆಯ್ಕೆ ಸಂಬಂಧ ವೀಕ್ಷಕರು ಬಂದು ವರದಿ ಪಡೆದುಕೊಂಡು ಹೋಗಿದ್ದಾರೆ.
Advertisement
ನಾನು ಗೋವಾ, ತಮಿಳುನಾಡು, ಮಹಾರಾಷ್ಟ್ರ ಉಸ್ತುವಾರಿ ಆಗಿರುವುದರಿಂದ ಇಲ್ಲಿ ಗಮನ ನೀಡಿಲ್ಲ. ವರಿಷ್ಠರು ಏನಾದರೂ ಕೇಳಿದರೆ ಮಾತ್ರ ಹೇಳುತ್ತೇನೆ. ಆದರೆ, ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ಮಾಜಿ ಸಚಿವರಾದ ವಿ. ಸೋಮಣ್ಣ, ಆರ್. ಅಶೋಕ್ ಸೇರಿದಂತೆ ಎಲ್ಲರಿಗೂ ಅಧ್ಯಕ್ಷರಾಗುವ ಅರ್ಹತೆಯಿದೆ. ಆದರೆ, ಸವಾಲಿದೆ. ಸಂಕಷ್ಟ ನಿಭಾ ಯಿಸುವ ಜವಾಬ್ದಾರಿ ಇದಾಗಿದೆ. ಅ ಧಿಕಾರವಲ್ಲ ಎಂದರು.
ಯಾವುದೇ ಸರಕಾರ ಅಧಿಕಾರಕ್ಕೆ ಬಂದ 6 ತಿಂಗಳಿಂದ 1 ವರ್ಷ ಹನಿಮೂನ್ ಅವಧಿಯಾಗಿರುತ್ತದೆ. ಆದರೆ, ಈ ಸರಕಾರ ಬಂದ ದಿನದಿಂದಲೇ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಚುನಾವಣೆ ಸಂದರ್ಭದಲ್ಲಿ ಗ್ಯಾರಂಟಿಗಳು ಎಲ್ಲರಿಗೂ ಉಚಿತ ಎಂದು ಹೇಳಿದವರು ಈಗ ಷರತ್ತುಗಳನ್ನು ಹಾಕುತ್ತಿದ್ದಾರೆ. ವಿದ್ಯುತ್ ದರ ಹೆಚ್ಚಳ ಮಾಡಿ ಜನರ ಗಮನ ಬೇರೆಡೆ ಸೆಳೆಯಲು ಮತ್ತೂಂದು ವಿಷಯ ಮುನ್ನೆಲೆಗೆ ತರುವ ಬುದ್ಧಿವಂತಿಕೆ ಮಾಡುತ್ತಿದ್ದಾರೆ. ಇದು ಬಹಳ ದಿನ ನಡೆಯುವುದಿಲ್ಲ ಎಂದರು. ಹೊಂದಾಣಿಕೆ ರಾಜಕಾರಣವಿಲ್ಲ: ರವಿ
ಒಳ್ಳೆಯ ಕೆಲಸ ಮಾಡಿದರೆ ಸರಕಾರಕ್ಕೆ ಶಹಾಬ್ಟಾಸ್‌ಗಿರಿ ಕೊಡುತ್ತೇವೆ. ತಪ್ಪು ಮಾಡಿದಾಗ ಜನರ ಪರವಾಗಿ ನಿಲ್ಲುತ್ತೇವೆ. ಎಚ್.ಡಿ. ಕುಮಾರಸ್ವಾಮಿ ಅವರದ್ದು ಬೇರೆ ರಾಜಕೀಯ ಪಕ್ಷ. ರಾಜಕೀಯವಾಗಿ ಅವರು, ನಾವು ಬೇರೆ ಬೇರೆ. ಜನರ ವಿಷಯ ಬಂದಾಗ, ವಿಷಯ ಒಂದೇ ಇದ್ದಾಗ ಒಟ್ಟಿಗೆ ಮಾತನಾಡುತ್ತೇವೆ. ಇದು ಹೊಂದಾಣಿಕೆ ಅಲ್ಲ. ರಾಜಕಾರಣದಲ್ಲಿ ಪರಸ್ಪರ ಮುಖಾಮುಖೀ ಆಗುವುದು, ಮಾತನಾಡುವುದು ಅಪರಾಧವಲ್ಲ. ಎದುರು ಸಿಕ್ಕಿದಾಗ ಸ್ವಾಭಾವಿಕವಾಗಿ ಮಾತನಾಡುತ್ತೇವೆ. ಇದು ಅಪರಾಧವಲ್ಲ. ಮಾಜಿ ಸಿಎಂ ಬೊಮ್ಮಾಯಿ, ಆರ್. ಅಶೋಕ್ ಹಾಗೂ ಸಿದ್ದರಾಮಯ್ಯ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ ಎಂದರು.
Related Articles
ಮತಾಂತರ ವಿಚಾರದಲ್ಲಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಕುಟುಂಬದ ಉದಾಹರಣೆ ಜೀವಂತವಾಗಿದೆ. ಮತಾಂತರದ ಪಿಡುಗು ಗೆದ್ದಲಿನಂತೆ ಹಿಂದೂ ಸಮಾಜವನ್ನು ಒಳಗಿನಿಂದಲೇ ದುರ್ಬಲಗೊಳಿಸುತ್ತದೆ. ಆಸೆ, ಆಮಿಷ, ಬಲಾತ್ಕಾರದಿಂದ ಮತಾಂತರ ಮಾಡುವುದನ್ನು ನಾವು ನಿಷೇಧಿಸಿದ್ದೇವೆ. ಈ ಸರಕಾರ ಇದನ್ನು ಸರಿ ಎಂದು ಹೇಳುತ್ತಾ ಉತ್ತರ ಕೊಡಬೇಕು. ಒಂದು ವೇಳೆ ಸರಿ ಎನ್ನುವುದಾದರೆ ರಾಜಕೀಯ ಪಕ್ಷ ಮಾತ್ರ ಉತ್ತರ ಕೊಡುವುದಲ್ಲ, ಎಲ್ಲ ಧಾರ್ಮಿಕ ಮುಖಂಡರು, ಮಠಾಧೀಶರು ಮಹಾ ಪಂಚಾಯತ್ ಕರೆದು ಸಮಾಜವನ್ನು ಉಳಿಸಿಕೊಳ್ಳಲು ಯೋಚನೆ ಮಾಡಬೇಕಾಗುತ್ತದೆ. ಭಕ್ತರಿದ್ದರೆ ಮಠ. ಅವರು ಇದನ್ನು ಯೋಚನೆ ಮಾಡಬೇಕು ಎಂದು ಸಿ.ಟಿ.ರವಿ ಹೇಳಿದರು.
Advertisement