Advertisement

ಅರವತ್ತು ಹಿರಿಯರ ಅಭಿಪ್ರಾಯದ ಮೇರೆಗೆ ಪ್ರತಿಪಕ್ಷ ನಾಯಕನ ಆಯ್ಕೆ

10:58 PM Oct 05, 2019 | Lakshmi GovindaRaju |

ಬೆಂಗಳೂರು: ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕನ ಆಯ್ಕೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಂಬಂಧ 60 ಪ್ರಮುಖ ನಾಯಕರ ಅಭಿಪ್ರಾಯ ಕೇಳಲು ಕಾಂಗ್ರೆಸ್‌ ಹೈಕ ಮಾಂಡ್‌ ಮುಂದಾಗಿದೆ. ಪಕ್ಷದಲ್ಲಿ ಮೂಲ, ವಲಸಿಗ, ಪಕ್ಷ ನಿಷ್ಠೆ ವಿಚಾರಗಳು ಮುನ್ನಲೆಗೆ ಬಂದಿರುವುದರಿಂದ ಪಕ್ಷದ ಹಿತದೃಷ್ಟಿಯಿಂದ ಇನ್ಮುಂದೆ ಪ್ರಮುಖ ಹುದ್ದೆಗಳ ನೇಮಕ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆ ಇಡಲು ನಿರ್ಧರಿಸಿದ್ದು, ಹಿರಿಯ ನಾಯಕರ ಅಭಿಪ್ರಾಯ ಪಡೆದು ನೇಮಕ ನಡೆಯಲಿದೆ.

Advertisement

ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂಧನ್‌ ಮಿಸ್ತ್ರಿ ಭಾನುವಾರ ನಗರಕ್ಕೆ ಆಗಮಿಸುತ್ತಿದ್ದು, ಮೂರೂ ಹುದ್ದೆಗಳಿಗೆ ಯಾರನ್ನು ನೇಮಿಸಿದರೆ ಸೂಕ್ತ ಎಂಬ ಅಭಿಪ್ರಾಯ ಪಡೆಯಲಿದ್ದಾರೆ. ಮೂರೂ ಹುದ್ದೆಗಳಿಗೆ ತಲಾ ಒಬ್ಬೊಬ್ಬರ ಹೆಸರು ಸೂಚಿಸಲು ತಿಳಿಸಲಿದ್ದು, ಹೈಕಮಾಂಡ್‌ಗೆ ವರದಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.60 ನಾಯಕರ ಅಭಿಪ್ರಾಯದ ನಂತರ ಪ್ರಾದೇಶಿಕ, ಜಾತಿ-ಸಮುದಾಯ ಪ್ರಾತಿನಿಧ್ಯ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಹೈಕಮಾಂಡ್‌ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಲಾಗಿದೆ.

ಈ ಮಧ್ಯೆ, ಸುದ್ದಿಗಾರರ ಜತೆ ಮಾತನಾಡಿದ ಎಚ್‌.ಕೆ.ಪಾಟೀಲ್‌, ನಾನು ದೆಹಲಿಗೆ ಹೋಗಿದ್ದು, ನಾಯಕರನ್ನು ಭೇಟಿ ಮಾಡಿದ್ದು ನಿಜ. ಆದರೆ, ನಾನು ಸಿದ್ದರಾಮಯ್ಯ ಅವರಿಗೆ ಕ್ಯಾಂಪಿಟೇಟರ್‌ ಅಲ್ಲ. ನನಗೆ ಅನುಭವ ಇದೆ. ನನ್ನನ್ನು ಪರಿಗಣಿಸಿ ಎಂದು ಮನವಿ ಮಾಡಿದ್ದೇನೆ. ಮಧುಸೂಧನ್‌ ಮಿಸ್ತ್ರಿ ಎಲ್ಲರ ಅಭಿಪ್ರಾಯ ಪಡೆದು, ಸೂಕ್ತ ಆಯ್ಕೆ ಮಾಡಲಿದ್ದಾರೆ ಎಂದರು.

ಸಿದ್ದುಗೇ ಸ್ಥಾನ ನೀಡಲಿ
ಬಳ್ಳಾರಿ:
ರಾಜ್ಯ ವಿಧಾನಸಭೆಯಲ್ಲಿ ವಿಪಕ್ಷ ನಾಯಕನ ಸ್ಥಾನವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೇ ನೀಡುವಂತೆ ಪಕ್ಷದ ವರಿಷ್ಠರಲ್ಲಿ ಶಾಸಕರೆಲ್ಲರೂ ಒತ್ತಾಯಿಸುತ್ತೇವೆ ಎಂದು ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಲಾ 20 ಶಾಸಕರು 3 ತಂಡಗಳಾಗಿ ನಿಯೋಗ ತೆರಳಿ ಭಾನುವಾರ ರಾಜ್ಯಕ್ಕೆ ಆಗಮಿಸುತ್ತಿರುವ ಪಕ್ಷದ ವರಿಷ್ಠರಾದ ಮಧುಸೂದನ್‌ ಮಿಸ್ತ್ರಿ ಅವರನ್ನು ಭೇಟಿಯಾಗಿ ಆಗ್ರಹಿಸುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next