Advertisement

ಉಪ ಮುಖ್ಯಮಂತ್ರಿ ಆಯ್ಕೆ ಅಸಂವಿಧಾನಿಕ : ಬಸವರಾಜ ರಾಯರೆಡ್ಡಿ

09:50 AM Aug 28, 2019 | sudhir |

ಚಿಕ್ಕಬಳ್ಳಾಪುರ: ಉಪ ಮುಖ್ಯಮಂತ್ರಿಗಳ ನೇಮಕಕ್ಕೆ ಸಂವಿಧಾನದಲ್ಲಿ ಅವಕಾಶವೇ ಇಲ್ಲ. ಮೂರು ಉಪ ಮುಖ್ಯಮಂತ್ರಿಗಳನ್ನು ನೇಮಿಸುವ ಮೂಲಕ ಬಿಜೆಪಿ ರಾಜ್ಯದ ಬೊಕ್ಕಸ ಖಾಲಿ ಮಾಡಲು ಹೊರಟಿದೆಯೆಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಟೀಕಿಸಿದರು.

Advertisement

ಚಿಕ್ಕಬಳ್ಳಾಪುರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರಿಗೆ ಪರಿಹಾರ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಬದಲು ಮೋಜು, ಮಸ್ತಿಗಾಗಿ ಬಿಜೆಪಿ ನಾಯಕರು ಕುರ್ಚಿಗಾಗಿ ಕಿತ್ತಾಟದಲ್ಲಿ ತೊಡಗಿದ್ದಾರೆ ಎಂದರು. ಬಿಜೆಪಿ ಸರ್ಕಾರ ಮೂರ್ನಾಲ್ಕು ತಿಂಗಳು ಉಳಿಯುವುದು ಕಷ್ಟವೆಂದರು.

ಒಂದಲ್ಲ, ಎರಡಲ್ಲ, ಐದು ಮಂದಿ ಉಪ ಮುಖ್ಯಮಂತ್ರಿಗಳನ್ನು ನೇಮಿಸಿದರೂ ರಾಜ್ಯದ ಜನತೆಗೆ ಹೊರೆಯೆ ಹೊರತು ಒಳ್ಳೆಯದಾಗಲ್ಲ. ಇವರಿಗೆ ಭದ್ರತೆ, ಎಸ್ಕೇಟ್, ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿ ಬರೀ ಹಣ ವ್ಯರ್ಥ ಆಗುತ್ತದೆ. ತೆರಿಗೆ ಕಟ್ಟುವ ಜನರಿಗೆ ಹೊರೆ ಎಂದರು.

ಪ್ರವಾಹ ಮುಗಿದ ಬಳಿಕ ಕೇಂದ್ರ ಸರ್ಕಾರ ಅವೈಜ್ಞಾನಿಕವಾಗಿ ಅಧಿಕಾರಿಗಳನ್ನು ಅಧ್ಯಯನಕ್ಕೆ ಕಳುಹಿಸಿ ಕೊಟ್ಟಿದೆ ಎಂದರು. ಕೇಂದ್ರ ಗೃಹ ಸಚಿವರು ನೆರೆ ಪೀಡಿತ ಪ್ರದೇಶದಲ್ಲಿ ಸಮೀಕ್ಷೆ ನಡೆಸಿದರೂ ರಾಜ್ಯಕ್ಕೆ ಒಂದು ರೂಪಾಯಿ ಕೊಡಲಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next