Advertisement

ಎಸ್‌ ಎಸ್‌ ಎಲ್‌ ಸಿ ಓದಿದ ಬಾಲಕ ಈಗ ಸಾಫ್ಟ್ವೇರ್‌ ಕಂಪನಿಯ ಮಾಲೀಕ!

10:41 AM Jan 22, 2018 | Team Udayavani |

ಹುಬ್ಬಳ್ಳಿ: ಓದಿದ್ದು ಎಸ್‌ಎಸ್‌ಎಲ್‌ಸಿ. ಬದುಕಿಗಾಗಿ ಕಂಡುಕೊಂಡಿದ್ದು ಸ್ಕ್ರೀನ್‌ ಪ್ರಿಂಟಿಂಗ್‌, ರೇಡಿಯೋ, ಕ್ಯಾಲ್ಕ್ಯುಲೇಟರ್‌, ಕಂಪ್ಯೂಟರ್‌ ರಿಪೇರಿ. ನಂತರ ಅಡಿಯಿಟ್ಟಿದ್ದು ಆ್ಯಂಟಿ ವೈರಸ್‌ ಸಾಫ್ಟ್ವೇರ್‌ ಅಭಿವೃದ್ಧಿ. ಕೇವಲ 5,000ರೂ.ಗಳಿಂದ ಆರಂಭವಾದ ಉದ್ಯಮದ ಪಯಣ ಇದೀಗ 2,500ಕೋಟಿ ರೂ.ಗೆ ಹೆಚ್ಚಿದೆ.

Advertisement

ಕೊಳಗೇರಿಯ ಹಲವರು ಸಾಧನೆಯ ಶಿಖರವೇರಿದ ಉದಾಹರಣೆಗಳು ಅನೇಕ. ನಾವೀಗ ಹೇಳಲೊರಟಿರುವುದು ಅಂತಹದ್ದೇ ಯಶೋಗಾಥೆಯ ಸಾಧಕನ ಬಗ್ಗೆ. ಬಡ ಕುಟುಂಬದಲ್ಲಿ ಜನಿಸಿ, ಕೊಳೆಗೇರಿಯಲ್ಲಿ ಬೆಳೆದ ಬಾಲಕನೊಬ್ಬ ಸಾಫ್ಟ್ವೇರ್‌ ಜಗತ್ತಿನಲ್ಲಿ ಬಹುರಾಷ್ಟ್ರೀಯ ಕಂಪೆನಿಗಳೇ ನಿಬ್ಬೆರಗಾಗುವಂತೆ ಮಾಡಿದ ಪುಣೆಯ “ಸ್ಲಂ ಬಾಲಾ’, ಕ್ವಿಕ್‌ಹೀಲ್‌ ಟೆಕ್ನಾಲಾಜಿಸ್‌ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಕೈಲಾಶ ಕಾತ್ಕರ್‌ ಅವರ ರೋಚಕ ಹಾಗೂ ಪ್ರೇರಣಾತ್ಮಕ ಕಥನ.

ಸ್ಕ್ರೀನ್‌ ಪ್ರಿಂಟರ್‌, ರೇಡಿಯೋ ರಿಪೇರಿಯಿಂದ ಸಾಫ್ಟ್ವೇರ್‌ ಅಭಿವೃದ್ಧಿಯ ಪಯಣ, ಎದುರಾದ ಸವಾಲು-ಸಮಸ್ಯೆ ಕ್ವಿಕ್‌ಹೀಲ್‌ ಅಕಾಡೆಮಿ ಹಾಗೂ ಫೌಂಡೇಶನ್‌ ಪರಿಕಲ್ಪನೆ, ದೇಶವನ್ನು ಅಪರಾಧ ಮುಕ್ತವಾಗಿಸುವ ಹಂಬಲ ಇನ್ನಿತರ ವಿಷಯಗಳ ಕುರಿತಾಗಿ ಕೈಲಾಶ ಕಾತ್ಕರ್‌  ಉದಯವಾಣಿ’ಯೊಂದಿಗೆ ಮಾತನಾಡಿದರು.

ಕ್ವಿಕ್‌ಹೀಲ್‌ ಟೆಕ್ನಾಲಾಜಿಸ್‌ ಅಡಿಯಲ್ಲಿ ಆ್ಯಂಟಿವೈರಸ್‌ ಸಾಫ್ಟ್ವೇರ್‌ ಅಭಿವೃದ್ಧಿಗೆ ಮುಂದಾದಾಗ ಹಲವು ಸವಾಲು, ಸಮಸ್ಯೆಗಳು ಎದುರಾದವು. ಆದರೆ, ಕಿರಿಯ ಸಹೋದರ ಕಂಪ್ಯೂಟರ್‌ ವಿಜ್ಞಾನದ ವ್ಯಾಸಂಗ ಹಾಗೂ ನನ್ನ ಅನುಭವದ ಜ್ಞಾನ ಇವೆಲ್ಲವನ್ನು ಮೆಟ್ಟಿ ನಿಂತಿತು. 1993ರಲ್ಲಿ ಕೇವಲ 5 ಸಾವಿರ ರೂ. ಗಳಿಂದ ಆರಂಭವಾದ ಉದ್ಯಮದ ನಡೆ ಇಂದು 2,500 ಕೋಟಿ ರೂ. ವಹಿವಾಟು ನಡೆಸುವಂತೆ ಮಾಡಿದೆ. ಬಹುರಾಷ್ಟ್ರೀಯ ಕಂಪೆನಿಗಳ ಆ್ಯಂಟಿವೈರಸ್‌ ಉತ್ಪನ್ನಗಳಿಗಿಂತಲೂ ಹೆಚ್ಚಿನ ಸೌಲಭ್ಯ ನೀಡುವ ಉತ್ಪನ್ನ ನಮ್ಮದು ಎಂಬ ಹೆಮ್ಮೆ ಇದೆ. ಎಂಎನ್‌ಸಿಗಳು ಕಂಪೆನಿ ಖರೀದಿಗೆ ಮುಂದಾಗಿದ್ದರೂ ಹಣಕ್ಕೆ ಬೆನ್ನು ಬೀಳದೆ ಕಂಪೆನಿ ಉಳಿಸಿಕೊಂಡಿದ್ದೇನೆ. ಮುನ್ನಡೆಸುತ್ತಿದ್ದೇನೆ. 

ಸೈಬರ್‌ ತಂತ್ರಜ್ಞರ ರೂಪನೆ: ಇಡೀ ವಿಶ್ವದಲ್ಲಿ ಆನ್‌ಲೈನ್‌ ವಹಿವಾಟು, ಇ-ವ್ಯಾಪಾರ, ಡಿಜಿಟಲ್‌ ಬಳಕೆ ಹೆಚ್ಚುತ್ತಿದೆ. ಇನ್ನೊಂದು ಮಗ್ಗಲಿನಲ್ಲಿ ತಂತ್ರಜ್ಞಾನ ದುರ್ಬಳಕೆಯೊಂದಿಗೆ ಸೈಬರ್‌ ದಾಳಿ-ಅಪರಾಧವೂ ಹೆಚ್ಚುತ್ತಿದೆ. ವಿಶೇಷವಾಗಿ ದೇಶದಲ್ಲಿ ಸೈಬರ್‌ ಅಪರಾಧ ತಡೆಗೆ ಅಗತ್ಯ ತಜ್ಞರ ಕೊರತೆ ಇದ್ದು, ಇದರ ನಿವಾರಣೆಗೆ ಕ್ವಿಕ್‌ಹೀಲ್‌ ಅಕಾಡೆಮಿ ಅಳಿಲು
ಸೇವೆಗೆ ಮುಂದಾಗಿದೆ. 

Advertisement

ಅಕಾಡೆಮಿ ಈಗಾಗಲೇ ಪುಣೆ ವಿಶ್ವವಿದ್ಯಾಲಯ ಹಾಗೂ ಪಂಜಾಬ್‌ನ ಚಿತ್ಕಾರ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆ
ಮಾಡಿಕೊಂಡಿದೆ. ಪುಣೆ ವಿಶ್ವವಿದ್ಯಾಲಯದಲ್ಲಿ ಎಂಟೆಕ್‌ ಹಾಗೂ ಪಂಜಾಬ್‌ನಲ್ಲಿ ಬಿಟೆಕ್‌ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. 

ಪಂಜಾಬ್‌ನಲ್ಲಿ ಎರಡು ವರ್ಷಗಳ ಹಿಂದೆ ಕೋರ್ಸ್‌ ಪರಿಚಯಿಸಲಾಗಿದ್ದು, ಮೂರು ವರ್ಷದ ಕೋರ್ಸ್‌ ಇದಾಗಿದೆ. ಪುಣೆ ವಿವಿಯಲ್ಲಿ ಈ ವರ್ಷದಿಂದ ಆರಂಭವಾಗಿದ್ದು ಎರಡು ವರ್ಷಗಳ ಕೋರ್ಸ್‌ ಆಗಿದೆ. ಸೈಬರ್‌ ಭದ್ರತೆ, ಆಡಿಟ್‌ಗಳನ್ನು
ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ. ಇದರ ತಡೆ ನಿರ್ವಹಣೆಯ ತಜ್ಞರ ಕೊರತೆ ನಮ್ಮಲ್ಲಿ ಅಧಿಕವಾಗಿದೆ. ದೇಶಕ್ಕೆ ಸುಮಾರು 5ಲಕ್ಷ ಸಿಎಸ್‌ ಐಒಗಳು ಬೇಕು ಇದ್ದದ್ದು ಕೆ‌ಲವೇ ಕೆಲವು ಸಾವಿರ ಲೆಕ್ಕದಲ್ಲಿ. ಡಿಜಿಟಲ್‌ ಹೆದ್ದಾರಿಯಲ್ಲಿ
ಆಕಸ್ಮಿಕ ಅಪಘಾತಗಳು ಸಹಜ. ಅದರ ತಡೆಗೆ ನಾವು ಮುನ್ನೆಚ್ಚರಿಕೆ ವಹಿಸಲೇಬೇಕಾಗಿದೆ.

ಅಗತ್ಯ ತಜ್ಞರ ರೂಪನೆಗೆ ಅಕಾಡೆಮಿ ಮುಂದಾಗಿದೆ. ಪುಣೆಯ ಇನಾಂದಾರ ವಿವಿ ಕೋರ್ಸ್‌ ಆರಂಭಕ್ಕೆ ಮುಂದಾಗಿದೆ. ದೇಶದ ಇತರೆ ವಿವಿಗಳು ಮುಂದಾದರೆ ಸೈಬರ್‌ ತಜ್ಞರ ಕೋರ್ಸ್‌ ಆರಂಭಕ್ಕೆ ಕೈ ಜೋಡಿಸಲು ಕ್ವಿಕ್‌ ಹೀಲ್‌ ಅಕಾಡೆಮಿ ಸಿದ್ಧವಿದೆ.

ಅಪರಾಧ ಮುಕ್ತ ದೇಶ ಚಿಂತನೆ: ಕ್ವಿಕ್‌ಹೀಲ್‌ ಟೆಕ್ನಾಲಾಜಿಸ್‌ ಕೇವಲ ಆ್ಯಂಟಿ ವೈರಸ್‌ ಅಭಿವೃದ್ಧಿ, ಅಕಾಡೆಮಿಗೆ ಸೀಮಿತವಾಗಿಲ್ಲ. ಕ್ವಿಕ್‌ಹೀಲ್‌ ಫೌಂಡೇಶನ್‌ ಮೂಲಕ ಸಾಮಾಜಿಕ ಸೇವಾ ಕಾರ್ಯದಲ್ಲೂ ತೊಡಗಿದೆ.  
ಫೌಂಡೇಶನ್‌ ಮೂಲಕ ಸಮುದಾಯಾಧಾರಿತ, ಆರೋಗ್ಯ, ಕಲ್ಯಾಣಕಾರಕ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಮುಖ್ಯವಾಗಿ ದೇಶವನ್ನು ಅಪರಾಧ ಮುಕ್ತವಾಗಿಸುವ ಕಾರ್ಯಕ್ಕೆ ಒತ್ತು ನೀಡಲಾಗಿದೆ.

ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದರೆಂಬ ಕಾರಣಕ್ಕೆ ಶಾಲೆಯಲ್ಲಿ ಶಿಕ್ಷಕರು, ಮನೆಯಲ್ಲಿ ಪಾಲಕರು ಮಕ್ಕಳನ್ನು ತಿರಸ್ಕಾರ ರೀತಿಯಲ್ಲಿ ನೋಡುತ್ತಾರೆ. ಇದರಿಂದ ವಿದ್ಯಾರ್ಥಿಗಳು ಅಪರಾಧದಂತಹ ಬೇರೆ ಮಾರ್ಗ ತುಳಿಯಲು
ಪ್ರೇರಣೆ ನೀಡಿದಂತಾಗಲಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಫೌಂಡೇಶನ್‌ನಿಂದ ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್‌ ಮಾಡಲಾಗುತ್ತದೆ. ಮಹಾರಾಷ್ಟದಾದ್ಯಂತ ಇದನ್ನು ಕೈಗೊಳ್ಳಲಾಗುತ್ತಿದೆ ಎಂಬುದು ಕೈಲಾಶ ಕಾತ್ಕರ್‌ ಅವರ ಅನಿಸಿಕೆ.
 
ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದರೆಂಬ ಕಾರಣಕ್ಕೆ ಶಾಲೆಯಲ್ಲಿ ಶಿಕ್ಷಕರು, ಮನೆಯಲ್ಲಿ ಪಾಲಕರು ಮಕ್ಕಳನ್ನು ತಿರಸ್ಕಾರ ರೀತಿಯಲ್ಲಿ ನೋಡುತ್ತಾರೆ. ಇದರಿಂದ ವಿದ್ಯಾರ್ಥಿಗಳು ಅಪರಾಧದಂತಹ ಬೇರೆ ಮಾರ್ಗ ತುಳಿಯಲು ಪ್ರೇರಣೆ ನೀಡಿದಂತಾಗಲಿ¨

 ಅಮರೇಗೌಡ ಗೋನವಾರ 

Advertisement

Udayavani is now on Telegram. Click here to join our channel and stay updated with the latest news.

Next