Advertisement

ಪ್ರತಿಭೆ ಅನಾವರಣಕ್ಕೆ ಚಿಗುರು ಕಾರ್ಯಕ್ರಮ ಸಹಕಾರಿ

06:27 PM Nov 20, 2021 | Team Udayavani |

ಬಂಕಾಪುರ: ವಿದ್ಯಾರ್ಥಿಗಳು ಪ್ರಾಥಮಿಕ ಹಂತದಿಂದಲೇ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಪಠ್ಯಪುಸ್ತಕಗಳನ್ನು ಹೊರತುಪಡಿಸಿ ಮಕ್ಕಳಲ್ಲಿ ಅಡಗಿರುವ ವಿವಿಧ ಪ್ರತಿಭೆಗಳ ಅನಾವರಣಕ್ಕೆ ಚಿಗುರು ಕಾರ್ಯಕ್ರಮ ವೇದಿಕೆ ಪೂರಕವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಹೇಳಿದರು.

Advertisement

ಬಾಡ ಗ್ರಾಮದ ಅಟಲ್‌ ಬಿಹಾರಿ ವಾಜಪೇಯಿ ವಸತಿ ಶಾಲೆ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ ಚಿಗುರು ಮಕ್ಕಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳಿಗೂ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಲಿದೆ. ಸರ್ಕಾರ ಆಯೋಜಿಸಿರುವ ಇಂತಹ ವೇದಿಕೆಯನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ತಮ್ಮ ಪ್ರತಿಭೆಗಳನ್ನು ಗ್ರಾಮ ಮಟ್ಟದಿಂದ ರಾಷ್ಟ್ರ ಮಟ್ಟದ ವರೆಗೆ ಅನಾವರಣಗೊಳಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಜಗದೀಶ ಹೆಬ್ಬಳ್ಳಿ, ಮಕ್ಕಳಲ್ಲಿ ವಿವಿಧ ಪ್ರತಿಭೆಗಳು ಅಡಕವಾಗಿರುತ್ತವೆ. ಅವುಗಳನ್ನು ಕಂಡು ಹಿಡಿದು ಪ್ರೋತ್ಸಾಹಿಸಿ ಹೊರತರುವಂತ ಕೆಲಸ ಶಿಕ್ಷಕ ಹಾಗೂ ಪಾಲಕರಿಂದ ಆಗಬೇಕಿದೆ. ಮನುಷ್ಯನ ಮೌಲ್ಯಯುತ ಜೀವನಕ್ಕೆ ಕ್ರೀಡೆ, ಕಲೆ, ಸಾಹಿತ್ಯ, ಸಂಗೀತ, ಜಾನಪದ ಸೇರಿದಂತೆ ವಿವಿಧ ಕಲೆಗಳು ಅವಶ್ಯಕವಾಗಿವೆ. ಅವುಗಳನ್ನು ಅನಾವರಣಗೊಳಿಸಲು ವೇದಿಕೆ ಅಗತ್ಯವಿತ್ತು. ಅಂತಹ ವೇದಿಕೆಯನ್ನು ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸೃಷ್ಠಿಸಿರುವುದು ಸ್ವಾಗತಾರ್ಹ ಎಂದರು.

ಅಟಲ್‌ ಬಿಹಾರಿ ವಾಜಪೇಯಿ ವಸತಿ ಶಾಲೆ ಪ್ರಾಚಾರ್ಯ ಮಂಜುನಾಥ ಮರಿತಮ್ಮನವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ವೆಂದರೆ ಕೇವಲ ಅಕ್ಷರ ಜ್ಞಾನ ಕೊಡುವುದಲ್ಲ. ಸಮಾಜಮುಖೀಯಾಗಿ ಮಕ್ಕಳನ್ನು ವಿವಿಧ ರಂಗ, ಕ್ಷೇತ್ರಗಳಲ್ಲಿ ಬೆಳೆಸುವುದಾಗಿದೆ. ಇಂದಿನ ಬಾಲ ಪ್ರತಿಭೆಗಳು ಮುಂದಿನ ನಾಡಿನ ಕೆಚ್ಚೆದೆಯ ಕುಡಿಗಳಾಗಿ ಬೆಳೆಯಬೇಕು. ದೇವರು ಕೊಟ್ಟ ಪಂಚೇಂದ್ರಿಯಗಳನ್ನು ಒಳ್ಳೆಯದಕ್ಕಾಗಿ ಬಳಸಬೇಕು ಎಂದರು.

Advertisement

ಕಾರ್ಯಕ್ರಮದ ನಂತರ ಶಿಗ್ಗಾವಿ, ಸವಣೂರ, ಹಾವೇರಿ, ಹಿರೇಕೆರೂರ, ಹಾನಗಲ್ಲ, ಬಂಕಾಪುರ ಶಾಲಾ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಹಾಗೂ ಸುಗಮ ಸಂಗೀತ, ಜಾನಪದಗೀತೆ, ಭರತನಾಟ್ಯ, ಸಮೂಹ ನೃತ್ಯ, ಏಕಪಾತ್ರಾಭಿನಯ, ನಾಟಕ ಕಲೆಗಳು ವಿದ್ಯಾರ್ಥಿಗಳಿಂದ ಅನಾವರಣಗೊಂಡವು. ಮುಖಂಡರಾದ ಬಸವರಾಜ ಕಟ್ಟಿಮನಿ, ಸಂಗೀತ ಶಿಕ್ಷಕ ಫಕ್ಕೀರೇಶ ಬಜಂತ್ರಿ, ಮಲ್ಲಯ್ಯ ಇಂಗಳಳ್ಳಿಮಠ, ಮಾದವರಾವ್‌ ಕಾಮನಹಳ್ಳಿ, ವಿಜಯ್‌ಕುಮಾರ ಕಾಳೆ, ಪರಮೇಶ್ವರ ಹಡಪದ, ಸಂಜೀವ ಪಾಟೀಲ, ಶಂಕರಗೌಡ ಪಾಟೀಲ, ಸಂತೋಷ ಸವಣೂರ, ಮಹಾಂತೇಶ ನಂದಿಹಳ್ಳಿ ಇತರರಿದ್ದರು. ಶಿಕ್ಷಕ ಕೆ.ಎನ್‌.ಪಾಟೀಲ ಸ್ವಾಗತಿಸಿ, ಗಣೇಶ ಗುಳೇದ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next