ಚನ್ನಪಟ್ಟಣ: ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಗಮನ ಹರಿಸಬೇಕು ಎಂದು ಮುಖ್ಯ ಮಂತ್ರಿಗಳನ್ನು ಒತ್ತಾಯಿಸಿ ಕಸ್ತೂರಿ ಕರ್ನಾ ಟಕ ಜನಪರ ವೇದಿಕೆ ಪಟ್ಟಣದಲ್ಲಿ ಮೌನ ಪ್ರತಿಭಟನೆ ನಡೆಸಿತು.
ರಾಜ್ಯ ಘಟಕದ ಅಧ್ಯಕ್ಷ ರಮೇಶ್‌ಗೌಡ ಮಾತನಾಡಿ, ಶಾಸಕರಾಗಿ ಆಯ್ಕೆಯಾಗಿ ಒಂದು ವರ್ಷವಾಗಿದೆ. ಇನ್ನೂ ತಾಲೂಕಿನ ಸಮಗ್ರ ಅಭಿವೃದ್ಧಿ ಆಗಿಲ್ಲ. ಸ್ವತಃ ಮುಖ್ಯ ಮಂತ್ರಿಗಳೂ ಸಹ ಕ್ಷೇತ್ರಕ್ಕೆ ಸಮರ್ಪಕವಾಗಿ ಬರುತ್ತಿಲ್ಲ. ಇದರಿಂದ ಕಾಮಗಾರಿಗಳು ಸ್ಥಗಿತಗೊಂಡಿವೆ. ಹಾಗಾಗಿ ಮುಖ್ಯಮಂತ್ರಿ ಸ್ವಕ್ಷೇತ್ರದ ಕಡೆಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಖಾಸಗಿ ಬಸ್ ನಿಲ್ದಾಣದ ಜಾಗದ ವಿವಾದವನ್ನು ಬಗೆಹರಿಸಿ, ಬೃಹತ್ ಬಸ್ ನಿಲ್ದಾಣ ಮತ್ತು ವಾಣಿಜ್ಯ ಸಂಕೀರ್ಣ ನಿರ್ಮಿಸಲು ಕೂಡಲೇ ಮುಂದಾಗಬೇಕು. ನಿರ್ಲಕ್ಷ್ಯಕ್ಕೆ ಒಳಗಾಗಿರುವ ಗಾಂಧಿ ಭವನಕ್ಕೆ ಅ.2ರ ಒಳಗಾಗಿ ಕಾಯಕಲ್ಪ ನೀಡಬೇಕು. ಶ್ರೀ ಕೊಲ್ಲಾಪುರದಮ್ಮ ದೇವಸ್ಥಾನದ ಸಮೀ ಪವಿರುವ ಡಾ.ರಾಜ್ ಬಯಲು ರಂಗ ಮಂದಿರಕ್ಕೆ ಚಾಲನೆ ನೀಡಬೇಕು. ಶೆಟ್ಟಿಹಳ್ಳಿ ಕೆರೆಯ ಸುತ್ತಾ ಮುತ್ತಾ ಒತ್ತುವರಿಯನ್ನು ತೆರವುಗೊಳಿಸಿ, ಕೆರೆಯಲ್ಲಿ ಶುದ್ಧ್ದ ನೀರು ಸಂಗ್ರಹವಾಗುವಂತೆ ಅಭಿವೃದ್ಧಿಗೊಳಿಸ ಬೇಕುಎಂದು ಆಗ ್ರಹಪಡಿಸಿದರು.
ನಗರದ ಯುಜಿಡಿ ಸಮಸ್ಯೆಗೆ ಮುಕ್ತಿ ನೀಡಲು ಮುಂದಾಗಬೇಕು. ತಾಲೂಕಿನ ಮೋಳೆದೊಡ್ಡಿ, ಬಿ.ವಿ.ಹಳ್ಳಿ, ಅರಳಾ ಳುಸಂದ್ರ, ಕೋಡಂಬಳ್ಳಿ, ಶ್ಯಾನಭೋಗನ ಹಳ್ಳಿ ಸೇರಿದಂತೆ 30ಕ್ಕೂ ಹೆಚ್ಚು ಹಳ್ಳಿಗಳು ಕಾಡಾನೆಗಳ ದಾಳಿಗೆ ತುತ್ತಾಗುತ್ತಿವೆ. ಕೋಟ್ಯಾಂತರ ಮೌಲ್ಯದ ಕೃಷಿ ಬೆಳೆ ನಷ್ಟವಾ ಗಿದ್ದು ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ತಾಲೂಕಿನ ಅಭಿವೃದ್ಧಿ ವಿಚಾರಗಳನ್ನು ಚರ್ಚಿಸಲು ಗೃಹ ಕಚೇರಿಯಲ್ಲಿ ದಿನಾಂಕ ನಿಗದಿ ಮಾಡುವಂತೆ ಮನವಿ ಮಾಡಲಾ ಯಿತು. ತಾಲೂಕಿಗೆ ಶೀಘ್ರವೇ ಆಗಮಿಸಿ ಜನತಾದರ್ಶನ, ಗ್ರಾಮ ವಾಸ್ತವ್ಯ ಮಾಡ ಬೇಕು. ತಿಂಗಳಿಗೊಮ್ಮೆ ಒಂದೊಂದು ಜಿಪಂ ವ್ಯಾಪ್ತಿಗೂ, 3 ತಿಂಗಳಿಗೊಮ್ಮೆ ನಗರ ಸಂಚಾರಕ್ಕೂ ಮುಂದಾಗಬೇಕು ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು.
ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ, ಮಂಡ್ಯ ಜಿಲ್ಲಾಧ್ಯಕ್ಷ .ಸಿ. ಉಮಾ ಶಂಕರ್, ಯುವ ಘಟಕದ ಉಪಾ«ಅ‌್ಯಕ್ಷ ರಂಜಿತ್‌ಗೌಡ, ಐಟಿ-ಬಿಟಿ ಘಟಕದ ಅಧ್ಯಕ್ಷ ಚೇತನ್‌ಕೀಕರ್, ಸಂಘಟನೆ ಪದಾಧಿ ಕಾರಿಗಳಾದ ಕೃಷ್ಣಪ್ರಸಾದ್, ಮರಿ ಅಂಕೇಗೌಡ, ಕೋಡಂಬಹಳ್ಳಿ ನಾಗರಾಜು, ಮಹಿಳಾ ಘಟಕದ ರಾಜಮ್ಮ, ಮಂಗಳಮ್ಮ, ರೋಸಿ ಮತ್ತಿತರರು ಪಾಲ್ಗೊಂಡಿದ್ದರು.