Advertisement

ಕೊಳೆಗೇರಿ ಪ್ರದೇಶಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ

03:12 PM Oct 08, 2018 | |

ಯಾದಗಿರಿ: ಕೇಂದ್ರ ಸರ್ಕಾರ ಸ್ಮಾರ್ಟ್‌ ಸಿಟಿ ಯೋಜನೆ ಜಾರಿಗೆ ತಂದು ಉಳ್ಳವರಿಗೆ ಸಕಲ ಸೌಕರ್ಯ ಕಲ್ಪಿಸಲು ಎಲ್ಲರಿಂದಲೂ ತೆರಿಗೆ ವಸೂಲಿ ಮಾಡುತ್ತಿದೆ ಎಂದು ಸ್ಲಂ ಜನಾಂದೋಲದ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಹೇಳಿದರು.

Advertisement

ನಗರದ ಎನ್‌ವಿಎಂ ಸಭಾಂಗಣದಲ್ಲಿ ಕರ್ನಾಟಕ ಸ್ಲಂ ಜನಾಂದೋಲನ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆಯಿಂದ ನಗರಾಭಿವೃದ್ಧಿ ಯೋಜನೆಗಳು ಮತ್ತು ವಿವಿಧ ಸರ್ಕಾರದ ವಸತಿ ಯೋಜನೆಗಳು ಹಾಗೂ ಸಂಘಟನೆ ಬಲಿಷ್ಠತೆಗಾಗಿ ಕಾರ್ಯಕರ್ತರಿಗೆ ಜವಾಬ್ದಾರಿ ಕುರಿತು ಆಯೋಜಿಸಿದ್ದ ವಿಭಾಗ ಮಟ್ಟದ ಅಧ್ಯಯನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಕೊಳೆಗೇರಿ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರಗಳು ಯಾವುದೇ ದೂರದೃಷ್ಟಿಯಿಂದ ಕಾರ್ಯಯೋಜನೆ ರೂಪಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರ ಅವರು, ಗ್ರಾಮೀಣ ಭಾಗದಲ್ಲಿ ಜನರು ಹೊಟ್ಟೆ ತುಂಬಿಸಿಕೊಳ್ಳಲು ಕೂಲಿ ಕೆಲಸ ಇಲ್ಲದೆ ಬಹಿಷ್ಕರಿಸಲ್ಪಟ್ಟರುವರು ಗ್ರಾಮದಿಂದ ನಗರಗಳತ್ತ ಮುಖ ಮಾಡುತ್ತಿದ್ದಾರೆ. ದುಡಿತಕ್ಕೆ ಸಮಾನ ಕೂಲಿಯೂ ಸಿಗದಿರುವುಕ್ಕೆ ಸ್ಲಂಗಳ ನಿರ್ಮಾಣವಾಗುತ್ತಿವೆ ಎಂದು ಖಂಡಿಸಿದರು.

ಪ್ರಸಕ್ತ ದೇಶದಲ್ಲಿ ನಗಾರಾಭಿವೃದ್ಧಿಯು ಶೇ. 26ರಷ್ಟು ವೇಗದಲ್ಲಿದೆ. 2030ರ ವೇಳೆಗೆ ದೇಶದಲ್ಲಿ ಶೇ. 50ರಷ್ಟು ವೇಗ ಪಡೆಯಲಿದೆ ಎಂದು ವಿಶ್ವ ಬ್ಯಾಂಕ್‌ ಹೇಳಿದ್ದು, ದೇಶದಲ್ಲಿ 69 ಲಕ್ಷ ಜನರಿಗೆ ಮನೆಯಿಲ್ಲ. ಬಡತನ ಹೆಚ್ಚಳದಿಂದಲೇ ಅಭಿವೃದ್ಧಿ ಕುಂಟಿತವಾಗುತ್ತಿದ್ದು, ಪ್ರಧಾನಿ ಮೋದಿ ಅವರು 2022ರ ವೇಳೆಗೆ ಸರ್ವರಿಗೆ ಸೂರು ಒದಗಿಸುವ ಮಾತು ಹೇಳುತ್ತಾರೆಂದರು.

ನಗರಾಭಿವೃದ್ಧಿ ಯೋಜನೆ ಕುಡಿಯುವ ನೀರು, ಒಳಚರಂಡಿ, ಘನತ್ಯಾಜ್ಯ ನಿರ್ವಹಣೆಯ ಯೋಜನೆಗಳು ಪಕ್ಷ, ರಾಜಕಾರಣಿ, ಅಧಿಕಾರಿಗಳ ಜೇಬು ತುಂಬಲು ಹುಲ್ಲುಗಾವಲು ಪ್ರದೇಶವಾಗಿದೆ ಎಂದರು. ನಮಗೆ ಬೇಕಿರುವ ಸೌಕರ್ಯಗಳನ್ನು ಪಡೆಯುವದಕ್ಕೆ ಹೋರಾಟ ಅಗತ್ಯವಾಗಿದ್ದು, ಕಾರ್ಯಕರ್ತರು ಹೋರಾಟ ರೂಪರೇಷೆಗಳನ್ನು ಅರಿಯಬೇಕಿದೆ ಎಂದರು.

Advertisement

ಯಾದಗಿರಿ ನಗರಸಭೆ ಕಚೇರಿ ವ್ಯವಸ್ಥಾಪಕ ಮಲ್ಲಿಕಾರ್ಜುನ ಎಚ್‌. ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ 52 ಪೌರ ಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿ ಮನೆ ನಿರ್ಮಿಸಲಾಗಿದೆ. ನಗರದಲ್ಲಿ ಹಲವು ಯೋಜನೆಗಳ ಅನುಷ್ಠಾನ ಮಾಡಿರುವ ಕುರಿತು ಮಾಹಿತಿ ನೀಡಿದರು.
 
ಕೊಳೆಗೇರಿ ಮಂಡಳಿಯ ಅಧಿಕಾರಿ ಮೊ. ಯುಸೂಫ್‌ ಮಾತನಾಡಿ, ಯಾದಗಿರಿ, ಕಲಬುರಗಿ, ಬೀದರ ಹಾಗೂ ರಾಯಚೂರು ವ್ಯಾಪ್ತಿಯಲ್ಲಿ ಒಟ್ಟು 2,752ರಷ್ಟು ಮನೆಗಳು ಪ್ರಧಾನ ಮಂತ್ರಿ ಆವಾಜ ಯೋಜನೆಯಡಿ ಮಂಜೂರಾಗಿದ್ದು, ಕೆಲವೆಡೆ ಕಾಮಗಾರಿ ಪ್ರಾರಂಭವಾಗಿದ್ದರೆ, ಇನ್ನು ಕೆಲವೆಡೆ ಪ್ರಾರಂಭ ಹಂತದಲ್ಲಿದೆ ಎಂದು ವಿವರಿಸಿದರು.

ಬಿಎಸ್‌ಪಿ ಜಿಲ್ಲಾಧ್ಯಕ್ಷ ಎಂ.ಆರ್‌. ಬೇರಿ ಮತನಾಡಿದರು. ಜನಾರ್ಧನ ಅಳ್ಳಿಬಿಂಚಿ, ಹಣಮಂತ ಶಹಾಪೂರಕರ, ರೇಣುಕಾ ಸರಡಗಿ ವೇದಿಕೆಯಲ್ಲಿದ್ದರು. ಗಣೇಶ ಕಾಂಬಳೆ ನಿರೂಪಿಸಿದರು. ಕಲಬುರಗಿ ಮತ್ತು ರಾಯಚೂರಿನ ಹಲವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next