Advertisement

Tax ಹೊರೆ ಇಳಿಸಲು ಕೇಂದ್ರ ಸರಕಾರ ಚಿಂತನೆ?

01:24 AM Jun 18, 2024 | Team Udayavani |

ಹೊಸದಿಲ್ಲಿ: ಈ ಬಾರಿ ಬಜೆಟ್‌ನಲ್ಲಿ ಸರಕಾರ ಖಾಸಗಿ ಆದಾಯ ತೆರಿಗೆ ಇಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಲೋಕಸಭಾ ಚುನಾವಣೆ ಯಲ್ಲಿ ಬಿಜೆಪಿಗೆ ಸ್ವತಂತ್ರ ವಾಗಿ ಬಹು ಮತ ಗಳಿಸಲು ಸಾಧ್ಯವಾ ಗಿಲ್ಲ. ಫ‌ಲಿತಾಂಶದ ಅನಂತರ ನಡೆದ ಸಮೀಕ್ಷೆಯಲ್ಲಿ ಜನರು ಹಣದುಬ್ಬರ, ನಿರುದ್ಯೋಗ, ಆದಾಯ ಕುಸಿತದಿಂದ ಕಳವಳ ಗೊಂಡಿದ್ದಾರೆ ಎಂದು ತಿಳಿದು ಬಂದಿತ್ತು.

Advertisement

2023-24ರಲ್ಲಿ ಭಾರತ ವಿಶ್ವದಲ್ಲೇ ಗರಿಷ್ಠ ಶೇ.8.2ರ ದರದಲ್ಲಿ ಆರ್ಥಿಕ ಪ್ರಗತಿ ಸಾಧಿಸಿದ್ದರೂ, ಜನರ ಕೊಳ್ಳುವಿಕೆ ಬೆಳವಣಿಗೆ ದರ ಅದರ ಅರ್ಧ ಮಾತ್ರ ಇತ್ತು. ಇದನ್ನು ಕೇಂದ್ರ ಗಂಭೀರವಾಗಿ ಪರಿಗಣಿಸಿದೆ ಎನ್ನಲಾಗಿದೆ. ಮೋದಿ ಪ್ರಧಾನಿಯಾಗಿ 3ನೇ ಬಾರಿಗೆ ಅಧಿಕಾರ ಸ್ವೀಕರಿಸುವ ಮುನ್ನ, ಮಧ್ಯಮ ವರ್ಗದ ಉಳಿತಾಯ ಹೆಚ್ಚಿಸಿ, ಜೀವನ ಗುಣಮಟ್ಟ ವೃದ್ಧಿ ಸುವು ದಾಗಿ ತಿಳಿಸಿದ್ದರು. ಆದಾಯ ತೆರಿಗೆ ಇಳಿಸುವುದರಿಂದ ಜನರ ಹಣ ಉಳಿತಾ ಯವಾಗುತ್ತದೆ ಎಂಬ ಚಿಂತನೆ ಕೇಂದ್ರ ದಲ್ಲಿದೆ ಎನ್ನಲಾಗಿದೆ.

ಎಷ್ಟು ಇಳಿಕೆಯಾಗಬಹುದು?: ಇದರ ಬಗ್ಗೆ ಇನ್ನೂ ಖಚಿತ ಮಾಹಿತಿ ದೊರಕಿಲ್ಲ. ಆದರೆ ವಾರ್ಷಿಕವಾಗಿ 15 ಲಕ್ಷ ರೂ.ಗಿಂತ ಅಧಿಕ ಹಣ ಗಳಿಸುವ ವ್ಯಕ್ತಿಗಳಿಗೆ ತೆರಿಗೆ ಇಳಿಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next