Advertisement

ಕೇಂದ್ರ ಸರ್ಕಾರ ಜನರಹಿತವನ್ನು ಕಡೆಗಣಿಸಿದೆ

12:39 PM Aug 06, 2018 | |

ತುಮಕೂರು: ಅಗತ್ಯವಸ್ತುಗಳಾದ ಆಹಾರಧಾನ್ಯ ಹಾಗೂ ಪೆಟ್ರೋಲ್‌, ಡೀಸೆಲ್‌ ಬೆಲೆಗಳು ದಿನೇ ದಿನೇ ಹೆಚ್ಚುತ್ತಿದ್ದರೂ ಅದನ್ನು ನಿಯಂತ್ರಿಸದೇ ಕೇಂದ್ರ ಸರ್ಕಾರ ಜನಹಿತವನ್ನು ಕಡೆಗಣಿಸಿದೆ ಎಂದು ಆಪಾದಿಸಿ ಭಾನುವಾರ ಸಿಐಟಿಯು ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ  ಪ್ರಚಾರಾಂದೋಲನ ನಡೆಯಿತು.  

Advertisement

ನಗರದ ಟೌನ್‌ಹಾಲ್‌ನ ಬಿಜಿಎಸ್‌ ವೃತ್ತದಲ್ಲಿ ಸಮಾವೇಶಗೊಂಡ ಸೆಂಟ್ರಲ್‌ ಆಫ್ ಇಂಡಿಯನ್‌ ಟ್ರೇಡ್‌ ಯುನಿಯನ್‌ನ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೋದಿ ನೇತೃತ್ವದ   ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು 4 ವರ್ಷಗಳಾಗಿದ್ದರು. ಜನಹಿತ ಮರೆತಿದೆ ಈ ಸಂಬಂಧವಾಗಿ ಜನರಿಗೆ ತಿಳಿಸುವ ಪ್ರಚಾರಾಂದೋಲನ ಕಾರ್ಯಕ್ರಮಕ್ಕೆ ಸಿಐಟಿಯು ಜಿಲ್ಲಾಧ್ಯಕ್ಷ  ಸೈಯದ್‌ಮುಜೀಬ್‌ ಚಾಲನೆ ನೀಡಿ ಕೇಂದ್ರ ಸರ್ಕಾರದ ಆಡಳಿತ ವೈಖರಿಯನ್ನು ತೀವ್ರವಾಗಿ ಖಂಡಿಸಿದರು.

ಬೆಲೆ ಏರಿಕೆಯ ಬಿಸಿ: ಕೇಂದ್ರ ಸರ್ಕಾರ ರೂಪಿಸಿದ ನೀತಿಗಳು, ನೋಟು ಅಮಾನ್ಯಿàಕರಣ, ಜಿಎಸ್‌ಟಿ ಜಾರಿ ಅಂತಹ ಕ್ರಮಗಳಿಂದ ಜನಸಾಮಾನ್ಯರು ಉಪಯೋಗಿಸುವ ವಸ್ತುಗಳ ಹಾಗೂ ಆಹಾರ ಧಾನ್ಯಗಳ ಬೆಲೆಗಳು ನಗರ ಪ್ರದೇಶಗಳಲ್ಲಿ ಶೇ.21ರಷ್ಟು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶೇ.17ರಷ್ಟು ನಿರಂತರ ಹೆಚ್ಚುತ್ತಲೇ ಇದೆ. ಪೆಟ್ರೋಲ್‌-ಡೀಸೆಲ್‌ ಬೆಲೆಗಳ ಹೆಚ್ಚಳವು ಬೆಲೆಗಳು ಮತ್ತಷ್ಟು ಏರಿಕೆಯಾಗುವಂತೆ ಮಾಡುತ್ತಿದೆ ಎಂದು ಕಿಡಿಕಾರಿದರು. 

ಇಂಧನ ಬೆಲೆ ನಿರಂತರ ಹೆಚ್ಚಳ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಕುಸಿದಿದ್ದರೂ ಸಹ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಕೇಂದ್ರದ ತೆರಿಗೆಯ ಪಾಲು 2014-15ರಲ್ಲಿ ರೂ.1.26 ಲಕ್ಷ ಕೋಟಿಗಳಿಂದ 2016-17ರಲ್ಲಿ ರೂ.2.73 ಲಕ್ಷ ಕೋಟಿ ರೂ. ಗಳಿಗೇರಿದೆ.

ಗೃಹೋಪಯೋಗಿ ಅಡುಗೆ ಅನಿಲ ಬೆಲೆಯು ಕಳೆದ ನಾಲ್ಕು ವರ್ಷದಲ್ಲಿ ಎರಡು ಪಟ್ಟು ಹೆಚ್ಚಳಗೊಳಿಸಲಾಗಿದೆ. ಬೆಲೆಗಳನ್ನು ನಿಯಂತ್ರಿಸಲು ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಸಾರ್ವತ್ರೀಕರಣಗೊಳಿಸಿ ಬಲಪಡಿಸುವ ಬದಲು ಸಬ್ಸಿಡಿ ಕಡಿತ ಮಾಡಿ ಇರುವ ರೇಷನ್‌ ಪದ್ಧತಿಯನ್ನು ರದ್ದು ಪಡಿಸಿ ನಗದು ವರ್ಗಾವಣೆ ಮಾಡುವುದಾಗಿ ಪ್ರಕಟಿಸಿ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದೆ ಎಂದರು.

Advertisement

ಸಾರ್ವಜನಿಕ ಉದ್ದಿಮೆಗಳಿಗೆ ಸಂಕಷ್ಟ: ಸಿಐಟಿಯು ಜಿಲ್ಲಾ ಖಜಾಂಚಿ ಎ. ಲೋಕೆಶ್‌ ಮಾತನಾಡಿ ದೇಶದಲ್ಲಿ ಸ್ವಾತಂತ್ರ ನಂತರದ ಸ್ವಾವಲಂಬಿ ಆರ್ಥಿಕತೆಯನ್ನು ಬೆಳೆಸುವ ಉದ್ದೇಶದಿಂದ ಸಾರ್ವಜನಿಕ ಉದ್ದಿಮೆಗಳನ್ನು ಆರಂಭಿಸಲಾಯಿತು.

ಈ ಉದ್ದಿಮೆಗಳು ಪಾವತಿಸುವ ತೆರಿಗೆಗಳು ಮತ್ತು ಲಾಭಾಂಶವು ರಾಷ್ಟ್ರೀಯ ಖಜಾನೆಗೆ ದೊಡ್ಡ ಕೊಡುಗೆ ನೀಡಿವೆ. ಆದರೆ ಕೇಂದ್ರ ಸರ್ಕಾರ ಇಂದು ಲಾಭದಲ್ಲಿರುವ ಸಾರ್ವಜನಿಕ ಉದ್ದಿಮೆಗಳಾದ ಬಿಇಎಂಎಲ್‌, ಬಿಇಎಲ್‌, ಬಿಹೆಚ್‌ಇಎಲ್‌, ಹೆಚ್‌.ಎ.ಎಲ್‌ ಮುಂತಾದ ಉದ್ದಿಮೆಗಳ ಶೇರುಗಳನ್ನು ಖಾಸಗಿಯವರಿಗೆ ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದೆ ಎಂದು ದೂರಿದರು. 

ಕಾರ್ಮಿಕ ಕಾನೂನು ಮಾರಕ: ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್‌.ಕೆಸುಬ್ರಹ್ಮಣ್ಯ ಮಾತನಾಡಿ, ಕೇಂದ್ರ ಸರ್ಕಾರ ಪ್ರಸ್ತುತ ಅಸ್ತಿತ್ವದಲ್ಲಿರುವ 44 ಕಾರ್ಮಿಕ ಕಾನೂನುಗಳನ್ನು ವಿಲೀನಗೊಳಿಸಿ 4 ಕಾರ್ಮಿಕ ಸಂಹಿತೆಗಳಾಗಿ ಬಂಡವಾಳಗಾರರ  ಪರ ತಿದ್ದುಪಡಿ ತರಲು ಹೊರಟಿದೆ.

ಈಗಾಗಲೇ ವೇತನಗಳ ಕುರಿತ ಕಾರ್ಮಿಕ ಸಂಹಿತೆ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ. ಇಂಡಸ್ಟ್ರಿಯಲ್‌ ಎಂಪ್ಲಾಯ್‌ಮೆಂಟ್‌ ಕಾಯ್ದೆಗೆ ತಿದ್ದುಪಡಿ ತಂದು ನಿಗದಿತ ಅವಧಿಯ ಉದ್ಯೋಗವನು  ಎಲ್ಲಾ ಕ್ಷೇತ್ರಗಳಲ್ಲಿ ಜಾರಿಗೊಳ್ಳಲು ಮುಕ್ತ ಅವಕಾಶ ನೀಡಿ ಕಾಯಂ ಸ್ವರೂಪದ ಕೆಲಸವಿಲ್ಲದಂತೆ ಮಾಡಿದೆ.

ಗುತ್ತಿಗೆ ಮತ್ತು ಇನ್ನಿತರ ಕಾಯಮೇತರ ಕಾರ್ಮಿಕರ ಕಾಯಂಗೆ ಶಾಸನ ರೂಪಿಸುವ ಬದಲಿಗೆ ಎನ್‌ಇಇಎಂ, ಎನ್‌ಇಟಿಎಪಿ ಹೆಸರಿನಲ್ಲಿ ಟ್ರೆಗಳನ್ನು ಉತ್ಪಾದನಾ ಕೆಲಸಗಳಲ್ಲಿ ನೇಮಿಸಿಕೊಳ್ಳಲು ಮಾಲೀಕರಿಗೆ ಮುಕ್ತ ಅವಕಾಶ ನೀಡಿದೆ ಎಂದರು. ಕಾರ್ಯಕ್ರಮದಲ್ಲಿ ಸಂದೀಪ್‌ಗೌಡ, ಸಿಐಟಿಯು ತಾಲ್ಲೂಕು ಅಧ್ಯಕ್ಷ ಬಿ.ಷಣ್ಮುಖಪ್ಪ, ಕರ್ನ್ಲಿಬರ್ ಸ್ವಾಮಿ, ತಾಲೂಕು ಕಾರ್ಯದರ್ಶಿ ಪುಟ್ಟೇಗೌಡ, ಸೇರಿದಂತೆ  ಮೊದಲಾದವರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next