Advertisement
ಸ್ಮಶಾನ ಎಂದಾಕ್ಷಣ ಮೃತದೇಹಿಗಳ ಹೂಳಿಡುವ ಪ್ರದೇಶವಾಗಿರುತ್ತೆ. ಅಲ್ಲದೆ ಮೃತಪಟ್ಟವರ ಸಮಾಧಿಗಳಿಗೂ ಪ್ರತಿ ಅಮಾವಾಸ್ಯೆ, ಹುಣ್ಣಿಮೆಯಂದು ಪೂಜೆ, ಪುನನಸ್ಕಾರಗಳು ನಡೆಯುತ್ತವೆ. ಸ್ಮಶಾನಗಳಲ್ಲಿ ಸ್ವಚ್ಛತೆ ಇಲ್ಲದ್ದರಿಂದ ಇತ್ತೀಚಿನ ದಿನಗಳಲ್ಲಿ ಸತ್ತವರ ಸಮಾಧಿಗಳಿಗೆ ಪೂಜೆ ಮಾಡುವವರ ಸಂಖ್ಯೆ ಕ್ಷೀಣಿಸಿದೆ.
Related Articles
Advertisement
ಕಳೆದ ಐದಾರು ತಿಂಗಳ ಹಿಂದೆ ನಿಧನನಾಗಿದ್ದ ನನ್ನ ಸ್ನೇಹಿತನ ಅಂತ್ಯಕ್ರಿಯೆಯು ಇದೇ ಸ್ಮಶಾನದಲ್ಲಿ ನಡೆದಿತ್ತು. ಆಗ ಸ್ಮಶಾನದಲ್ಲಿ ವಿಪರೀತವಾಗಿ ಬಳ್ಳಾರಿ ಜಾಲಿ ತುಂಬಿಕೊಂಡಿತ್ತು. ಸಮಾಧಿಯ ಕಟ್ಟೆಗಳೇ ಕಾಣುತ್ತಿರಲಿಲ್ಲ. ಜತೆಗೆ ನೆರೆಹೊರೆಯ ನಿವಾಸಿಗಳು ನಿತ್ಯ ಕರ್ಮಗಳನ್ನೂ ಸ್ಮಶಾನದಲ್ಲೇ ಪೂರೈಸುತ್ತಿದ್ದರಿಂದ ಸ್ಮಶಾನ ಗಬ್ಬುನಾರುವಂತಿತ್ತು. ಇಡೀ ಪ್ರದೇಶವೇ ಹೊಲಸು ತುಂಬಿಕೊಂಡಿತ್ತು. ಅಂತ್ಯಕ್ರಿಯೆಗೆ ಬಂದಿದ್ದ ಜನರು ಮೂಗು ಮುಚ್ಚಿಕೊಂಡೇ ತೆರಳಬೇಕಿತ್ತು. ಅಂತಹ ಪರಿಸ್ಥಿತಿಯನ್ನು ಕಂಡು ನಮಗೂ ಬೇಸರವಾಗಿತ್ತು. ಆಗ ನಾವೆಲ್ಲ ಸೇರಿ ಸ್ಮಶಾನ ಸ್ವಚ್ಛಗೊಳಿಸಬೇಕೆಂದು ನಿರ್ಣಯಿಸಿ ಇದೀಗ ಸ್ವಚ್ಛಗೊಳಿಸುತ್ತಿದ್ದೇವೆ ಎನ್ನುತ್ತಾರೆ ತಂಡದ ಮುಖಂಡ ದೇವಣ್ಣ.
ಈ ಸ್ಮಶಾನವನ್ನ ಹೇಗಾದ್ರೂ ಮಾಡಿ ನಂದನವನ ಮಾಡಬೇಕೆಂದು. ಊರಿನಲ್ಲಿ ದೇಗುಲಗಳು ಹೇಗೆ ಶುಚಿಯಾಗಿರುತ್ತವೆ. ಅದೇ ರೀತಿಯಲ್ಲೇ ಸ್ಮಶಾನಗಳು ಶುಚಿಯಾಗಿರಬೇಕು ಅಂತ. ಆಗಾಗಿ, ಅಂದಿನಿಂದ ಆರಂಭವಾದ ಶುಚಿತ್ವ ಕಾರ್ಯ ಮುಂದುವರಿದಿದೆ. ಅಲ್ಲದೇ, ಗಿಡಗಳನ್ನೂ ನಡೆಲಾಗುತ್ತಿದೆ.
ನಮಗೆ ಯಾವ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಈವರೆಗೂ ಸಹಕಾರ ನೀಡಿಲ್ಲ. ಅದರ ಅಗತ್ಯವೂ ನಮಗಿಲ್ಲ. ಮಹಾನಗರ ಪಾಲಿಕೆ ಮಾತ್ರ ಸ್ಮಶಾನದಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಮನವಿ ಮಾಡುತ್ತಾರೆ ತಂಡದ ಇತರೆ ಸದಸ್ಯರು.