Advertisement

ಅವಳಿ ಜಿಲ್ಲೆಯಲ್ಲಿ ರಾಮನವಮಿ ಆಚರಣೆ

03:18 PM Apr 22, 2021 | Team Udayavani |

ಕೋಲಾರ: ಶ್ರೀರಾಮ ನವಮಿ ಆಚರಣೆಗೂಕೊರೊನಾ 2ನೇ ಅಲೆಯ ಭೀತಿ ತಟ್ಟಿದ್ದು, ಸೋಂಕಿನಪ್ರಮಾಣ ಏರುತ್ತಿರುವುದರ ನಡುವೆ ನಾಗರಿಕರುರಾಮ ನವಮಿಯನ್ನು ಸರಳವಾಗಿ ಆಚರಿಸಿ ಪಾನಕ,ಕೋಸಂಬರಿ, ಮಜ್ಜಿಗೆ ವಿತರಿಸಿದರು.ಕೋವಿಡ್‌ ಸೋಂಕಿನ ಪ್ರಮಾಣ ಭಾರಿ ಏರಿಕೆಆತಂಕಕ್ಕೆಡೆ ಮಾಡಿಕೊಟ್ಟಿದ್ದು, ಜಿಲ್ಲೆಯಲ್ಲಿ ದಿನಕ್ಕೆ300 ಗಡಿಗೆ ತಲುಪುತ್ತಿದೆ.

Advertisement

ಸರ್ಕಾರ ಕೋವಿಡ್‌ತಡೆಗೆ ಕಠಿಣ ಮಾರ್ಗಸೂಚಿ ಬಿಡುಗಡೆ ಮಾಡಿದ್ದು,ಕೆಲವೆಡೆ ರಾಮನವಮಿ ಪೂಜೆಗೆ ಸೀಮಿತಮಾಡಿದ್ದರೆ, ಕೆಲವು ಕಡೆಗಳಲ್ಲಿ ಧೈರ್ಯ ಮಾಡಿಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು.ಅನೇಕ ಕಡೆಗಳಲ್ಲಿ ಸರ್ಕಾರದ ಮಾರ್ಗಸೂಚಿಪಾಲಿಸಿದ ನಾಗರಿಕರು ಸಾಮೂಹಿಕವಾಗಿರಾಮನವಮಿ ಆಚರಣೆಗೆ ಧೆ„ರ್ಯ ಮಾಡಲಿಲ್ಲ.

ಆದರೆ, ಪ್ರತಿವರ್ಷ ಸಾಂಪ್ರದಾಯಿಕವಾಗಿಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದವರುಮಾತ್ರ ಕೋವಿಡ್‌ ಮಾರ್ಗಸೂಚಿ ಪಾಲಿಸುವುದರಜತೆಗೆ ಪಾನಕ, ಕೋಸಂಬರಿ ವಿತರಿಸಿದ್ದು ಕಂಡುಬಂತು.

ಮಿನಿ ಹೋಟೆಲ್‌, ಸರ್ಕಲ್‌ನಲ್ಲಿ ಪೂಜೆ:ನಗರದ ಟೇಕಲ್‌ ರಸ್ತೆಯ ಮಿನಿಹೋಟೆಲ್‌ಸರ್ಕಲ್‌ನ ಶ್ರೀರಾಮ ಕಾಂಡಿಮೆಂಟ್ಸ್‌ ಮುಂಭಾಗಮರ್ಯಾದಾ ಪುರುಷೋತ್ತಮನ ಭಾವಚಿತ್ರವಿಟ್ಟುಪೂಜೆ ಸಲ್ಲಿಸಿದರಲ್ಲದೇ ಮಜ್ಜಿಗೆ, ಪಾನಕ,ಕೋಸಂಬರಿ ವಿತರಿಸಿ ಭಕ್ತಿ ಪ್ರದರ್ಶಿಸಿದರು.ಕಾರ್ಯಕ್ರಮದಲ್ಲಿ ನಂದೀಶ್‌, ಹರೀಶ್‌,ಮಹೇಂದ್ರ, ಶ್ರೀನಿವಾಸ್‌, ಫಣಿ ಕುಮರ್‌,ನಾಗರಾಜ್‌, ಸಂದೀಪ್‌, ವೆಂಕಟರಾಮ್‌, ಭರತ್‌ಹಾಜರಿದ್ದರು.

ಜಿಲ್ಲೆಯಲ್ಲಿ ಶ್ರೀರಾಮ ನವಮಿಗೆ ಆದ್ಯತೆ:ಹನುಮ ದೇಗುಲಗಳ ತವರು ಎಂದೇಖ್ಯಾತವಾಗಿರವ ಕೋಲಾರ ಜಿಲ್ಲೆಯಲ್ಲಿ ಶ್ರೀರಾಮನವಮಿಗೆ ಹೆಚ್ಚಿನ ಆದ್ಯತೆ ಇದೆ. ಜನತೆ ಯಾವಹಬ್ಬ,ಪೂಜೆ ತಪ್ಪಿಸಿದರೂ ರಾಮ ನವಮಿಯ ಪಾನಕ,ಮಜ್ಜಿಗೆ, ಕೋಸಂಬರಿ ವಿತರಣೆಯನ್ನು ಮಾತ್ರ ಮರೆಯುವುದಿಲ್ಲ, ಕೋವಿಡ್‌ ಆತಂಕದ ನಡುವೆಯೂಸರಳವಾಗಿ ರಾಮನವಮಿ ಆಚರಿಸಿದರು.ಕನಿಷ್ಟ ಒಂದು ಕಿಲೋ ಮೀಟರ್‌ಗೊಂದುಹನುಮನ ದೇವಾಲಯ ಜಿಲ್ಲೆಯಲ್ಲಿ ಇದೆ.

Advertisement

ರಾಮನವಮಿಯಂದು ರಾಮಭಕ್ತ ಹನುಮನಿಗೆ ವಿಶೇಷಪೂಜೆ ಸಲ್ಲಿಸಿ ಪಾನಕ, ಕೋಸಂಬರಿ ವಿತರಿಸುವವಾಡಿಕೆ ನಮ್ಮ ಪೂರ್ವಜರ ಕಾಲದಿಂದಲೂನಡೆದು ಬಂದಿದೆ. ಅದರಲ್ಲೂ, ಇತ್ತೀಚಿನವರ್ಷಗಳಲ್ಲಿ ಅನೇಕ ಯುವಕರು, ವ್ಯಾಪಾರಿಗಳು,ಸಂಘಟನೆಗಳು ನಗರದ ರಸ್ತೆ-ರಸ್ತೆಗಳಲ್ಲಿ ರಾಮನಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪಾನಕ, ಮಜ್ಜಿಗೆ,ಕೋಸಂಬರಿ ವಿತರಿಸುವ ಕಾರ್ಯವನ್ನುನಡೆಸಿಕೊಂಡು ಬಂದಿದ್ದರು.

ನಗರದ ಕೋಟೆ ಆಂಜನೇಯ ಸ್ವಾಮಿ ದೇವಾಲಯ, ಪಿಸಿ ಬಡಾವಣೆಯ ಕೋದಂಡ ರಾಮ ಸ್ವಾಮಿದೇವಾಲಯ, ವಕ್ಕಲೇರಿ ಆಂಜನೇಯ ಸ್ವಾಮಿ,ಬ್ರಾಹ್ಮಣರ ಬೀದಿಯ ದೊಡ್ಡ ಆಂಜನೇಯಸ್ವಾಮಿ,ಕೋಟೆಯ ಪಂಚಮುಖೀ ಹನುಮ, ಕೊಂಡರಾಜನಹಳ್ಳಿಯ ಆಂಜನೇಯ ಸ್ವಾಮಿ ದೇವಾಲಯಗಳಲ್ಲಿರಾಮನವಮಿ ಅಂಗವಾಗಿ ಇಡೀ ದಿನ ವಿಶೇಷ ಪೂಜೆನಡೆದಿದ್ದು, ನೂರಾರು ಸಂಖ್ಯೆಯಲ್ಲಿ ಭಕ್ತರು ದೇವರದರ್ಶನ ಪಡೆದು ಮುಂದಿನ ರಾಮನವಮಿಯಾದರೂನೆಮ್ಮದಿಯಿಂದ ಆಚರಿಸಲು ಅವಕಾಶ ಕಲ್ಪಿಸುವಂತೆದೇವರಲ್ಲಿ ಮೊರೆಯಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next