Advertisement
ಬಾಗಲಕೋಟೆ ಜಿಲ್ಲೆಯ ಇಳಕಲ್ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದ್ದ ನವಜಾತ ಶಿಶು ನಾಪತ್ತೆ ಪ್ರಕರಣ ಧಾರವಾಡ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ನಡೆದು ನ್ಯಾಯಮೂರ್ತಿ ಎಸ್. ಸುಜಾತ ಹಾಗೂ ನ್ಯಾಯಮೂರ್ತಿ ಎಚ್.ಬಿ ಪ್ರಭಾಕರ ಶಾಸ್ತ್ರೀ ಅವರಿದ್ದ ವಿಭಾಗೀಯ ಪೀಠ, ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಲಿ ಎಂದು ತೀರ್ಪು ನೀಡಿದೆ.
Related Articles
ಘಟನೆ ಬಳಿಕ ನ.13ರಂದು ಮಗು ಮೃತಪಟ್ಟಿದೆ ಎಂದು ಆಸ್ಪತ್ರೆ ಸಿಬ್ಬಂದಿ ಶಂಕರಮ್ಮನಿಗೆ ತಿಳಿಸಿದ್ದಾರೆ.
Advertisement
ಮಗುವಿನ ಮೇಲೆ ಪ್ರಾಣವೇ ಇಟ್ಟುಕೊಂಡಿದ್ದ ಶಂಕರಮ್ಮ ಈ ವಿಚಾರ ಒಪ್ಪಿರಲಿಲ್ಲ. ನನ್ನ ಮಗು ನನಗೆ ಬೇಕು ಕೊಡಿ ಎಂದು ಹಠಮಾಡಿದ್ದರೂ ನ. 14ರಂದು ವೈದ್ಯರು ಆಸ್ಪತ್ರೆಯಿಂದ ಬಲವಂತವಾಗಿ ಡಿಸಾರ್ಜ್ ಮಾಡಿದ್ದರು.
ಮಗುವನ್ನು ಕೊಡಿಸುವಂತೆ ಮನವಿ ಮಾಡಿ ಪತಿ ಹಾಗೂ ಆಸ್ಪತ್ರೆ ವಿರುದ್ಧ ದೂರು ನೀಡಿದರೂ ಹುನಗುಂದ ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸಲಿಲ್ಲ. ಬಾಗಲಕೋಟೆ ಎಸ್ಪಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬೆಳವಣಿಗೆಗಳಿಂದ ನೊಂದ ಶಂಕರಮ್ಮ ಕಡೆಗೆ, ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸುವ ಮೂಲಕ ಮಗುವನ್ನು ಕೊಡಿಸುವಂತೆ ಹೈಕೋರ್ಟ್ ಮೊರೆ ಹೋಗಿದ್ದರು.
ಆಸ್ಪತ್ರೆ ವಾದ ಏನಾಗಿತ್ತು? : ಶಂಕರಮ್ಮ ಜನ್ಮ ನೀಡಿದ ಹೆಣ್ಣುಮಗು ಸೋಂಕಿನಿಂದ ನ.13ರಂದು ಸಾಯಂಕಾಲ ಮೃತಪಟ್ಟಿತ್ತು. ಆಕೆಗೆ ಹೇಳಿದರೂ ವಾಪಾಸ್ ತೆಗೆದುಕೊಳ್ಳಲಿಲ್ಲ. ಆಕೆಯ ಸಂಬಂಧಿಕರು ಬರದಿದ್ದರಿಂದ ಅನಿವಾರ್ಯವಾಗಿ ತ್ಯಾಜ್ಯಸಂಸ್ಕರಣ ಘಟಕಕ್ಕೆ ನೀಡಲಾಗಿತ್ತು. ನ.14 ರಂದು ಮಗುವನ್ನು ಸುಡಲಾಗಿತ್ತು ಎಂದು ಖಾಸಗಿ ಆಸ್ಪತ್ರೆ ವಾದಿಸಿದ್ದರು.
ಈ ವಾದ ತಳ್ಳಿಹಾಕಿರುವ ನ್ಯಾಯಪೀಠ, ಮಗು ಸತ್ತಿದೆ ಎಂಬುದಕ್ಕೆ ರೆಕಾರ್ಡ್ ಇಲ್ಲ. ಮಗುವನ್ನು ಮೃತಪಟ್ಟಿದೆ ಎಂಬುದಕ್ಕೆ ಮೂರನೇ ವ್ಯಕ್ತಿಯ ಸಹಿ ಏಕೆ ತೆಗೆದುಕೊಳ್ಳಲಾಗಿತ್ತು. ತ್ಯಾಜ್ಯ ಸಂಸ್ಕರಣದಲ್ಲಿ ಕೆಲಸ ಮಾಡುವವರು ಪ್ಲಾಸ್ಟಿಕ್ ಚೀಲದಲ್ಲಿ ಏನಿತ್ತು ಎಂಬುದನ್ನು ನೋಡಿಲ್ಲ ಎಂಬ ಭಿನ್ನ ಹೇಳಿಕೆಗಳು ಹಲವು ಅನುಮಾನಗಳು ಹುಟ್ಟುಹಾಕಿದೆ ಎಂದು ನ್ಯಾಯಪೀಠ ತಿಳಿಸಿದೆ.
ವೈದ್ಯ ಸಿಬ್ಬಂದಿ ಮೇಲೆ ಶಂಕೆ ವಿಚಾರಣೆ ಸಂದರ್ಭದಲ್ಲಿ ಸ್ಥಳೀಯ ಪೊಲೀಸರ ತನಿಖೆ ಹಾಗೂ ಆಸ್ಪತ್ರೆ ವೈದ್ಯ ಸಿಬ್ಬಂದಿ ಮೇಲೆಯೂ ನ್ಯಾಯಪೀಠ ಅನುಮಾನ ವ್ಯಕ್ತಪಡಿಸಿದೆ.ಮಗುವಿನ ತಾಯಿಗೆ ಸೂಕ್ತ ವಾಗಿ ಮನವರಿಕೆ ಮಾಡಿ ಕೊಡದೇ ಮಾನವೀಯವಾಗಿ ತ್ಯಾಜ್ಯ ತುಂಬುವ ರೀತಿಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಮಗುವಿನ ಮೃತದೇಹ ಕಳುಹಿಸಿ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಸುಡಲಾಗಿದೆ ಎಂಬ ಖಾಸಗಿ ಆಸ್ಪತ್ರೆಯ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಪ್ರಕರಣ ತನಿಖೆ ಅಸಮರ್ಪಕ
ಪ್ರಕರಣದ ಬಗ್ಗೆ ಪೊಲೀಸರು ಸಮರ್ಪಕವಾಗಿ ತನಿಖೆಯನ್ನು ನಡೆಸಿಲ್ಲ ಎಂದೂ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಪೀಠ, ತನಿಖಾ ವರದಿಯನ್ನು ಗಮನಿಸಿದರೆ ಪೊಲೀಸರು ಸತ್ಯಾಸತ್ಯತೆ ಬಯಲಿ ಗೆಳೆಯಲು ಸಂಪೂರ್ಣ ವಿಫಲರಾಗಿದ್ದಾರೆ. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ಭಿನ್ನ ಹೇಳಿಕೆಗಳು ಹಲವು ಅನುಮಾನ ಹುಟ್ಟು ಹಾಕುತ್ತಿದೆ. ಇಡೀ ಪ್ರಕರಣ ಮುಚ್ಚಿಹಾಕುವ ಯತ್ನ ನಡೆಸಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದಿದೆ. – ಮಂಜುನಾಥ್ ಲಘುಮೇನಹಳ್ಳಿ