Advertisement

ರಾಜೀವ್‌ ಕುಮಾರ್‌ ಬಂಧನಕ್ಕೆ ಸುಪ್ರೀಂ ಅನುಮತಿ ಕೇಳಿದ ಸಿಬಿಐ

09:12 AM Apr 09, 2019 | sudhir |

ಹೊಸದಿಲ್ಲಿ: ಶಾರದಾ ಚಿಟ್‌ ಫ‌ಂಡ್‌ ಹಾಗೂ ರೋಸ್‌ ವ್ಯಾಲಿ ಹಗರಣದಲ್ಲಿ ಕೋಲ್ಕತ್ತಾ ಪೊಲೀಸ್‌ ಕಮೀಷನರ್‌ ರಾಜೀವ್‌ ಕುಮಾರ್‌ರನ್ನು ಬಂಧಿಸಲು ಅನುಮತಿ ನೀಡುವಂತೆ ಸುಪ್ರೀಂಕೋರ್ಟ್‌ಗೆ ಸಿಬಿಐ ಮೊರೆ ಹೋಗಿದೆ.

Advertisement

ಈಗಾಗಲೇ ಸುಪ್ರೀಂಕೋರ್ಟ್‌ ಬಂಧನಕ್ಕೆ ಮಧ್ಯಂತರ ತಡೆ ನೀಡಿದ್ದು, ಇದನ್ನು ತೆರವುಗೊಳಿಸಬೇಕು ಮತ್ತು ಮೋಸದ ಸ್ಕೀಮ್‌ಗಳಲ್ಲಿ ದೊಡ್ಡ ಮಟ್ಟದ ಜಾಲವಿದ್ದು, ಇದನ್ನು ಬೇಧಿಸಲು ಅವರನ್ನು ಬಂಧಿಸುವುದು ಅನಿವಾರ್ಯವಾಗಿದೆ ಎಂದು ಸಿಬಿಐ ಹೇಳಿದೆ.

ಅಷ್ಟೇ ಅಲ್ಲ, ಈ ಹಿಂದೆ ರಾಜೀವ್‌ ಕುಮಾರ್‌ರನ್ನು ವಿಚಾರಣೆ ನಡೆಸಲು ಸಿಬಿಐ ಕೋಲ್ಕತ್ತಾಗೆ ಹೋದಾಗ ಸಿಎಂ ಮಮತಾ ಬ್ಯಾನರ್ಜಿ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರಿಂದ ಇಂತಹ ಸನ್ನಿವೇಶ ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು ಎಂದು ಆದೇಶವನ್ನೂ ನೀಡುವಂತೆ ಕೋರಿದೆ. ಮೋಸದ ಸ್ಕೀಮ್‌ನಲ್ಲಿ ಭಾಗಿಯಾಗಿರುವ ಬಗ್ಗೆ ಕುಮಾರ್‌ ಮತ್ತು ಇತರ ಹಲವು ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ. ಈಗಾಗಲೇ ನಡೆಸಿದ ವಿಚಾರಣೆ ವೇಳೆ ಕೋಲ್ಕತ್ತಾ ಪೊಲೀಸರು ಹಾಗೂ ಎಸ್‌ಐಟಿ ಸೂಕ್ತ ಸಹಕಾರ ನೀಡುತ್ತಿಲ್ಲ ಎಂದೂ ಸಿಬಿಐ ಹೇಳಿದೆ. ಸಿಬಿಐ ವಾದ ಕುರಿತು ಸೋಮವಾರ ಮುಖ್ಯ ನ್ಯಾಯ ಮೂರ್ತಿ ರಂಜನ್‌ ಗೊಗೋಯ್‌ ವಿಚಾರಣೆ ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next