ಸದನದಲ್ಲಿ ಪ್ರತಿಧ್ವನಿಸಿ, ಆರೋಪ ಸಾಬೀತುಪಡಿಸಿದರೆ ರಾಜಕೀಯದಿಂದ ನಿವೃತ್ತಿ ಹೊಂದಲು ಸಿದ್ಧ ಎಂದು ಹೇಳಿದ ಮಾಜಿ ಸಚಿವ ಪರಮೇಶ್ವರ್ ನಾಯಕ್, ಸುಳ್ಳು ಎಂದಾದರೆ ನೀವು ರಾಜೀನಾಮೆ ನೀಡುತ್ತೀರಾ ಎಂದು ಜಗದೀಶ್ ಶೆಟ್ಟರ್‌ಗೆ ಸವಾಲು ಹಾಕಿದರು.
Advertisement
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತ ನಾಡುತ್ತಿದ್ದ ಶೆಟ್ಟರ್, ಅನುಪಮಾ ಶೆಣೈವರ್ಗಾವಣೆಗೆ ಪರಮೇಶ್ವರ್ ನಾಯಕ್ 40 ಲಕ್ಷ ರೂ. ಲಂಚ ಪಡೆದಿದ್ದರು ಅಂತ ಆರೋಪಿಸಿದ್ದಾರೆ. ಇದು ಗಂಭೀರ
ವಿಷಯ ಈ ಬಗ್ಗೆ ತನಿಖೆಯಾಗಬೇಕು ಎಂದು ಹೇಳಿದರು.
ಶೆಟ್ಟರ್ ಮಾಡಿರುವ ಆರೋಪಕ್ಕೆ ವಿವರಣೆ ನೀಡಲು ಅವಕಾಶ ನೀಡುವಂತೆ ಎದ್ದು ನಿಂತು, ಅನುಪಮಾ ಶೆಣೈ ತಮ್ಮ ತಪ್ಪಿನಿಂದ ಅಧಿಕಾರ ಕಳೆದುಕೊಂಡು ದಿನಕ್ಕೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರ ಎಂದು ಹೇಳಿದರು. ವರ್ಗಾವಣೆಗೆ ನಾನು ಲಂಚ ಪಡೆದಿದ್ದೇನೆ ಎನ್ನುವುದಕ್ಕೆ ಅವರ ಬಳಿ ದಾಖಲೆಗಳಿದ್ದರೆ ಬಹಿರಂಗ ಪಡಿಸಲಿ, ಆ ಬಗ್ಗೆ ಎಸಿಬಿ ಅಥವಾ ಸಿಬಿಐನಿಂದಲೂ ತನಿಖೆ ನಡೆಸಿದರೂ ನಾನು ಎದುರಿಸಲು ಸಿದ್ಧ. ದಾಖಲೆ ಬಿಡುಗಡೆ ಮಾಡಿದರೆ ನಾನು ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದು ತಿಳಿಸಿದರು.