Advertisement

ನಾಯಕರ ಜಾತಿ ಪ್ರತ್ರದ ಗೊಂದಲಕ್ಕೆ ತೆರೆ

12:04 PM Sep 20, 2017 | |

ನಂಜನಗೂಡು: ಹಲವು ವರ್ಷಗಳಿಂದ ಗೊಂದಲಕ್ಕೊಳ್ಳಗಾಗಿದ್ದ ನಾಯಕರ ಜಾತಿ ಪ್ರಮಾಣಪತ್ರಕ್ಕೆ ಈಗ ತೆರೆ ಎಳೆಯಲಾಗಿದೆ ಎಂದು ಸ್ಥಳಿಯ ಶಾಸಕ ಕಳಲೆ ಕೇಶವಮೂರ್ತಿ ತಿಳಿಸಿದರು. ಅ.5 ರಂದು ನಡೆಯಲಿರುವ ಮಹರ್ಷಿ ವಾಲ್ಮೀಕಿ ಜಯಂತೋತ್ಸವದ ಅಂಗವಾಗಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

Advertisement

ತಾಲೂಕಿನಲ್ಲಿ ಪರಿವಾರ ಬೇಸ್ತ ನಾಯಕ ಎಂದು ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುತ್ತಿದ್ದ ಎಲ್ಲರಿಗೂ ಈಗ ನಾಯಕರೆಂಬ ಜಾತಿ ಪ್ರಮಾಣ ಪತ್ರ ನೀಡಲು ಅಧಿಕಾರಿಗಳಿಗೆ ಆದೇಶಿಸಿದ್ದು, ಇನ್ನು ಮುಂದೆ ಈ ಗೊಂದಲವಿರಲ್ಲ ಎಂದು ಕಳಲೆ ಘೋಷಿಸಿದರು.

ಜಿ.ಪಂ ಮಾಜಿ ಸದಸ್ಯ ಚಿಕ್ಕರಂಗನಾಯಕ ಜಾತಿ ಪ್ರಮಾಣ ಪತ್ರ ನೀಡಲು ಶಾಸಕರಲ್ಲಿ ಒತ್ತಾಯ ಮಾಡಿದ ಮೇರೆಗೆ ಪ್ರಮಾಣ ಪತ್ರ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಮತ್ತು ಜಯಂತಿ ಆಚರಣೆ ದಿನದಂದು ನಂಜನಗೂಡಿನಲ್ಲಿ ಎಲ್ಲಾ ಬಾರ್‌ ಹಾಗೂ ಮಧ್ಯದ ಅಂಗಡಿಗಳನ್ನು ಬಂದ್‌ ಮಾಡಲು ಹಾಗೂ ಮೆರವಣಿಗೆಯಲ್ಲಿ ಭಾಗವಹಿಸುವವರು ಶಾಂತಿಯುತವಾಗಿ ನಡೆದುಕೊಳ್ಳಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಈ ಸಭೆಯಲ್ಲಿ ತಾಲೂಕು ನಾಯಕ ಸಂಘದ ಅಧ್ಯಕ್ಷ ಹಳ್ಳಿದಿಡ್ಡಿ ಬಂಗಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಹುಲ್ಲಹಳ್ಳಿ ನಾಗೇಂದ್ರ, ಖಜಾಂಚಿ ಹೆಡತಲೆ ರಂಗಸ್ವಾಮಿ, ತಾಲೂಕು ನಾಯಕರ ಸಂಘದ ಮಾಜಿ ಅಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ, ಕಳಲೆ ಭೈರನಾಯಕ, ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸ್‌, ಜಿಪಂ ಸದಸ್ಯೆ ಲತಾ, ಮಹದೇವನಾಯಕ, ತಾಲೂಕು ತಹಶೀಲ್ದಾರ್‌ ದಯಾನಂದ್‌, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next