ಚಿಕ್ಕಮಗಳೂರು: ಪ್ರವಾಸೋದ್ಯಮ ಅಭಿವೃದ್ಧಿ ಪ್ರವಾಸಿ ತಾಣಗಳಲ್ಲಿ ಕ್ಯಾಸಿನೋ ಸೆಂಟರ್ ತೆರೆಯು ವುದಾಗಿ ಹೇಳಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ಯಾಸಿನೋ ಸಹ ಕಾರಣ ಎಂದಷ್ಟೇ ಹೇಳಿದ್ದೇನೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಕ್ರೀಡಾ ಸಚಿವ ಸಿ.ಟಿ.ರವಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಎಫ್‌ಕೆಸಿಸಿಐ ಸಂಸ್ಥೆ ಇತ್ತೀಚೆಗೆ ನಡೆಸಿದ ಸಂವಾದದಲ್ಲಿ ಸಂಸ್ಥೆಯವರು ಕೇಳಿದ ಪ್ರಶ್ನೆಗಳಿಗೆ ನಾನು ಉತ್ತರ ನೀಡಿದ್ದು, ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಹತ್ತಾರು ಯೋಜನೆಗಳನ್ನು ಕೈಗೊಳ್ಳಬಹುದಾಗಿದೆ. ಪ್ರವಾಸೋದ್ಯಮ ಪ್ರೊಮೋಟ್ ಮಾಡಲು ಇರುವ ಹತ್ತಾರು ಅಂಶಗಳಲ್ಲಿ ಕ್ಯಾಸಿನೋ ಕೂಡ ಒಂದು ಎಂದು ಹೇಳಿದ್ದೇನೆಯೇ ಹೊರತು ಕ್ಯಾಸಿನೋ ಕೇಂದ್ರಗಳನ್ನು ತೆರೆಯಲು ಸರ್ಕಾರ ಮುಂದಾಗಿದೆ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಗೋವಾದಲ್ಲಿರುವ ಕ್ಯಾಸಿನೋಗಳು ಲಕ್ಷಾಂತರ ಪ್ರವಾಸಿಗರನ್ನು ಸೆಳೆದಿವೆ. ಶ್ರೀಲಂಕಾದಲ್ಲಿ ಪ್ರವಾಸೋದ್ಯಮದ ಆಕರ್ಷಣೆಗಳಾಗಿವೆ. ಶ್ರೀಲಂಕಾಕ್ಕೆ ಕರ್ನಾಟಕದ ಜನರು ಹೋಗುತ್ತಾರೆ. ನೆರೆಯ ಹಾಂಕಾಂಗ್, ಮಲೇಷಿಯಾ, ಬ್ಯಾಂಕಾಕ್, ಸಿಂಗಾಪುರ, ಥೈಲ್ಯಾಂಡ್ ಸೇರಿ ಅಮೆರಿಕದ ಲಾಸ್ ವೇಗಾಸ್‌ನಲ್ಲಿ ಕ್ಯಾಸಿನೋಗಳಿಂದಾಗಿಯೇ ಪ್ರವಾಸೋದ್ಯಮ ಬೆಳೆದಿದೆ.
ರಾಜ್ಯದಲ್ಲಿ ಟೂರಿಸಂ ಪ್ರೊಮೋಟ್ ಮಾಡಲು ಇರುವ ಹತ್ತಾರು ಅಂಶಗಳಲ್ಲಿ ಕ್ಯಾಸಿನೋ ಒಂದು ಎಂದು ಹೇಳಿದ್ದೇನೆಯೇ ಹೊರತು ಅದನ್ನು ಜಾರಿಗೆ ತರುತ್ತೇವೆಂದು ಹೇಳಿಲ್ಲ. ಇದಲ್ಲದೆ ಸಂವಾದದಲ್ಲಿ ಕ್ಯಾಸಿನೋದ ಬಗ್ಗೆ ಮಾತ್ರ ಹೇಳಿಲ್ಲ, ಹೆಲ್ತ್ ಟೂರಿಸಂ, ಎಜುಕೇಶನ್, ಕಲ್ಚರಲ್, ಹೆರಿಟೇಜ್, ವಿಲೇಜ್ ಟೂರಿಸಂ ಬಗ್ಗೆ ಮಾತನಾಡಿದ್ದೇನೆ ಎಂದರು.
ಸಂಪೂರ್ಣ ಪಾನ ನಿಷೇಧ ಮಾಡಬೇಕೆಂಬುದು ಗಾಂ ಧೀಜಿ ಅವರ ಕನಸಾಗಿತ್ತು. ಆದರೆ ರಾಜ್ಯ ಸೇರಿ ದೇಶಾದ್ಯಂತ ಗೂಡಂಗಡಿಗಳನ್ನೂ ಬ್ರಾಂಡಿ ಶಾಪ್‌ಗ್ಳನ್ನಾಗಿ ಮಾಡಿದ್ದಾರೆ. ಅಂಥವರು ವಿರೋಧದ ಹೇಳಿಕೆ ನೀಡುತ್ತಿದ್ದಾರೆ. ನಾನು ಸಂವಾದದಲ್ಲಿ ಏನು ಮಾತನಾಡಿದ್ದೇನೆಂಬುದು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಅದನ್ನು ಸಮಗ್ರವಾಗಿ ಪರಿಶೀಲಿಸಿದ ನಂತರ ಟೀಕಿಸಲಿ ಎಂದರು.