Advertisement

ಪುನರ್ ವಸತಿ ಜಾಗದ ಪ್ರಕರಣ: ಅಭಿವೃದ್ಧಿ ಕಾರ್ಯ ಪ್ರಾರಂಭ

06:53 PM Aug 05, 2021 | Team Udayavani |

ಬನಹಟ್ಟಿ : ಹಳಿಂಗಳಿ ಗುಡ್ಡದ ಪ್ರದೇಶದಲ್ಲಿ ತಮದಡ್ಡಿ ಪುನರ್ ವಸತಿ ಕಲ್ಪಿಸುವ ಜಾಗಕ್ಕೆ ಸಂಬಂಧಿಸಿದಂತೆ ಬುಧವಾರ ಹಳಿಂಗಳಿ ಗುಡ್ಡದ ಪ್ರದೇಶದಲ್ಲಿ ನಡೆದ ಹೈಡ್ರಾಮ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳಿಂಗಳಿ ಗ್ರಾಮದ ಮಹಿಳೆಯರು, ಮುಖಂಡ ರಾಜು ನಂದೆಪ್ಪನವರ, ಗ್ರಾಪಂ ಉಪಾಧ್ಯಕ್ಷ ಪ್ರದೀಪ ನಂದೆಪ್ಪನವರ ಸೇರಿದಂತೆ 43 ಜನರ ಮೇಲೆ ಕರ್ತವ್ಯ ನಿರತ ತಹಸೀಲ್ದಾರ್, ಇತರೇ ಅಧಿಕಾರಿಗಳು ಹಾಗೂ ಪೊಲೀಸರ ಕೊಲೆಗೆ ಯತ್ನ ಪ್ರಕರಣ ತೇರದಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Advertisement

ಹಳಿಂಗಳಿ ಗ್ರಾಮದ ಗುಡ್ಡದ ಪ್ರದೇಶದಲ್ಲಿ ತಮದಡ್ಡಿ ಪುನರ್ ವಸತಿ ಕಲ್ಪಿಸಲು 89 ಎಕರೆ 34 ಗುಂಟೆ ಜಾಗವನ್ನು ಸರಕಾರ ಮಂಜುರು ಮಾಡಿದ್ದು, ನಿಯೋಜಿತ ಜಾಗದಲ್ಲಿ ಪುನರ್ ವಸತಿ ಅಭಿವೃದ್ಧಿ ಕರ‍್ಯ ಮಾಡುವ ವೇಳೆ ಆರೋಪಿತರು ಸ್ಥಳಕ್ಕೆ ಆಗಮಿಸಿ ಸ್ಥಳದಲ್ಲಿದ್ದ ಕರ್ತವ್ಯ ನಿರತ ತಹಸೀಲ್ದಾರ್ ಹಾಗೂ ಇತರೇ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳ ಮೇಲೆ ಸಿಮೇ ಎಣ್ಣೆ ಸುರಿದು ಬೆಂಕಿ ಕಡ್ಡಿ ಕೊರೆದು ಕೊಲೆಗೆ ಯತ್ನಿಸಿದ್ದಾರೆಂದು ಕೃಷ್ಣಾ ಮೇಲ್ದಂಡೆ ಯೋಜನೆ ರಬಕವಿ ವಿಭಾಗದ ಎಇಇ ಆರ್.ಕೆ. ಕುಲಕರ್ಣಿ ದೂರು ದಾಖಲಿಸಿದ್ದಾರೆ.

ಕಾಮಗಾರಿ ಪ್ರಾರಂಭ : ತಮದಡ್ಡಿ ಪುನರ್ ವಸತಿ ಜಾಗದಲ್ಲಿ ಬುಧವಾರದಿಂದ ಜೆಸಿಬಿ ಮುಖಾಂತರ ನೆಲವನ್ನು ಸಮತಟ್ಟ ಮಾಡುವ ಕೆಲಸ ಪ್ರಾರಂಭಗೊಂಡಿದ್ದು, ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆ ರಬಕವಿ ವಿಭಾಗದ ಆರ್.ಕೆ.ಕುಲಕರ್ಣಿ ಹಾಗೂ ಇತರೇ ಅಧಿಕಾರಿಗಳು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಅಭಿವೃದ್ಧಿಗಾಗಿ 3.39 ಕೋಟಿ ಅನುದಾನದ ಟೆಂಡರ್ ಆಗಿದೆ.6 ತಿಂಗಳಲ್ಲಿ ಕೆಲಸ ಪೂರ್ಣಗೊಳಿಸಲು ಸಮಯ ನೀಡಲಾಗಿದ್ದು, 1200ರಷ್ಟು ನಿವೇಶನ ಆಗುವ ನಿರೀಕ್ಷೆ ಇದೆ ಎಂದು ಆರ್.ಕೆ. ಕುಲಕರ್ಣಿ ತಿಳಿಸಿದ್ದಾರೆ. ಠಾಣಾಧಿಕಾರಿ ರಾಜು ಬೀಳಗಿ, ಹೆಚ್ಚುವರಿ ಪಿಎಸ್‌ಐ ಸಾಂಬಾಜಿ ಸೂರ್ಯವಂಶಿ ಸೇರಿದಂತೆ 16 ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಬಂದೋಬಸ್ತ್ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next