Advertisement

ರೈಲಿನಲ್ಲಿ ವ್ಯಕ್ತಿಗೆ ಬೆಂಕಿ ಪ್ರಕರಣ : ಎನ್‌ಐಎ ಜತೆಗೆ ತನಿಖೆ ಚುರುಕು !

10:27 PM Apr 04, 2023 | Team Udayavani |

ತಿರುವನಂತಪುರಂ: ಅಲಪ್ಪುಜ-ಕಣ್ಣೂರು ಎಕ್ಸ್‌ಪ್ರೆಸ್‌ ರೈಲಿನಲ್ಲಿ ವ್ಯಕ್ತಿಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಪ್ರಕರಣದಲ್ಲಿ ಉಗ್ರ ಕೈವಾಡದ ಶಂಕೆ ವ್ಯಕ್ತವಾದ ಬೆನ್ನಲ್ಲೇ, ಕೇರಳ ವಿಶೇಷ ತನಿಖಾ ತಂಡ (ಎಸ್‌ಐಟಿ), ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ರೈಲ್ವೆ ಪ್ರೊಟೆಕ್ಷನ್‌ ಫೋರ್ಸ್‌ (ಆರ್‌ಪಿಎಫ್) ಸೇರಿದಂತೆ ಹಲವು ತನಿಖಾ ಸಂಸ್ಥೆಗಳು ಪ್ರಕರಣದ ತನಿಖೆ ಚುರುಕುಗೊಳಿಸಿವೆ.

Advertisement

ಎನ್‌ಐಎ ಹಾಗೂ ಆರ್‌ಪಿಎಫ್ ಅಧಿಕಾರಿಗಳು ಘಟನೆ ನಡೆದ ರೈಲಿನ ಬೋಗಿಗೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಅಲ್ಲದೇ, ಆರೋಪಿಯ ಕುರಿತು ಕೆಲ ಸುಳಿವು ದೊರೆತಿದ್ದು, ಅದನ್ನು ಪರಿಶೀಲಿಸುತ್ತಿರುವುದಾಗಿ ತಿಳಿಸಿದ್ದಾರೆ.

ಮತ್ತೂಂದೆಡೆ, ಪ್ರಕರಣ ಸಂಬಂಧಿಸಿದಂತೆ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರ ತಂಡ (ಎಟಿಎಸ್‌) ವಶಕ್ಕೆ ಪಡೆದಿದ್ದ ವ್ಯಕ್ತಿಯನ್ನೂ ಬಿಡುಗಡೆಗೊಳಿಸಲಾಗಿದೆ. ಘಟನಾಸ್ಥಳದಲ್ಲಿ ದೊರೆತ ಬ್ಯಾಗ್‌ನಲ್ಲಿದ್ದ ಮಾಹಿತಿಯನ್ನು ಆಧರಿಸಿ, ಎಟಿಸಿ ತಂಡವು ಸೋಮವಾರ ರಾತ್ರಿ ಬುಲಂದರ್‌ಶಹರ್‌ನ ನಿವಾಸಿ ಶಾರುಖ್‌ ಸೈಫಿ ಎಂಬಾತನನ್ನು ವಶಕ್ಕೆ ಪಡೆದಿತ್ತು. ಆತನನ್ನು ಮರುದಿನವೂ ವಿಚಾರಣೆ ನಡೆಸಿದ ಬಳಿಕ, ಆತನ ಕೈವಾಡವಿಲ್ಲವೆಂದು ತಿಳಿದು ಬಿಡುಗಡೆಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next