Advertisement
ನಾಪೋಕ್ಲು ನಿವಾಸಿ ಪಳನಿಸ್ವಾಮಿ ಅವರು ಪತ್ನಿ, ಮಕ್ಕಳೊಂದಿಗೆ ತನ್ನ ಮಾರುತಿ ಆಮ್ನಿಯಲ್ಲಿ ಕುಶಾಲನಗರ ಮಾರ್ಗವಾಗಿ ಪಿರಿಯಾಪಟ್ಟಣ ತಾಲೂಕಿನ ದೊಡ್ಡ ಕಮರವಳ್ಳಿ ಅಂಚೆ ಕಚೇರಿಗೆ ತೆರಳಿ ಅಲ್ಲಿಂದ ಚನಕಲ್ ಸಮೀಪದ ಲಕ್ಷ್ಮೀಪುರ ಗ್ರಾಮ ದಲ್ಲಿರುವ ತಮ್ಮ ಜಮೀನಿಗೆ ಹೋಗುತ್ತಿದ್ದ ಸಂದರ್ಭ ನಾಲೆಯ ಏರಿಯ ಮೇಲೆ ನಿಯಂತ್ರಣ ತಪ್ಪಿ ವಾಹನ ನಾಲೆಗೆ ಜಾರಿತು.
ಮೂಲತಃ ಪಿರಿಯಾಪಟ್ಟಣದವರಾದ ಈ ಕುಟುಂಬ ತಾಲೂಕಿನ ಬೆಟ್ಟದಪುರ ಹೋಬಳಿಯ ಲಕ್ಷ್ಮೀಪುರ ಗ್ರಾಮ ದಲ್ಲಿ ಜಮೀನು ಹೊಂದಿದ್ದು, ಕಳೆದ 10 ವರ್ಷಗಳಿಂದ ಕೊಡಗು ಜಿಲ್ಲೆಯ ನಾಪೋಕ್ಲುವಿನಲ್ಲಿ ನೆಲೆಸಿದ್ದಾರೆ. ಅಲ್ಲಿಯೇ ಗಾರೆ ಕೆಲಸ ನಿರ್ವಹಿಸುತ್ತಿದ್ದ ಪಳನಿಸ್ವಾಮಿ ಅವರ ಮಕ್ಕಳಾದ ಪೂರ್ಣಿಮಾ ಮತ್ತು ಲಿಖೀತ್ ಇಬ್ಬರೂ ಅಂಗವಿಕಲರಾಗಿದ್ದು, ಸರಕಾರದಿಂದ ಬರುವ ಅಂಗವಿಕಲರ ವೇತನವನ್ನು ದೊಡ್ಡಕಮರವಳ್ಳಿ ಅಂಚೆ ಕಚೇರಿಯಿಂದ ಪಡೆದು ಕೊಂಡು, ಲಕ್ಷ್ಮೀಪುರದ ಜಮೀನಿಗೆ ತೆರಳು ತ್ತಿದ್ದಾಗ ಅವಘಡ ಸಂಭವಿಸಿದೆ.
ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಮತ್ತು ಪೊಲೀಸರು ವಾಹನ ವನ್ನು ಮೇಲೆತ್ತಿ, ಮೃತದೇಹಗಳನ್ನು ಹೊರತೆಗೆದರು. ಬೆಟ್ಟದಪುರ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿ ದ್ದಾರೆ. ಕುಶಾಲನಗರ ಸಮು ದಾಯ ಆರೋಗ್ಯ ಕೇಂದ್ರದಲ್ಲಿ ಶವ ಪರೀಕ್ಷೆ ನಡೆಸಿ ಮೃತದೇಹಗಳನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ.