Advertisement

ಮನೆ ಮೇಲೆ ಬಿದ್ದ ಕಾರು; ಮೂವರಿಗೆ ಗಾಯ

11:09 AM Dec 06, 2018 | Harsha Rao |

ವಿಟ್ಲ: ಕನ್ಯಾನ ಗ್ರಾಮದ ಮರಾಟಿಮೂಲೆಯಲ್ಲಿ ಬುಧವಾರ ಮುಸ್ಸಂಜೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮನೆಯ ಮೇಲೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಹಾಗೂ ಮನೆಯ ಓರ್ವ ಮಹಿಳೆ ಗಂಭೀರ ಗಾಯಗೊಂಡಿದ್ದಾರೆ.

Advertisement

ಕಾರಿನಲ್ಲಿದ್ದ ಕನ್ಯಾನ ಗ್ರಾಮದ ಕೇಪುಳಗುಡ್ಡೆ ನಿವಾಸಿ ಅಬೂಬಕ್ಕರ್‌ (69), ನೆಬೀಸಾ (65) ಅವರನ್ನು ದೇರಳಕಟ್ಟೆ ಆಸ್ಪತ್ರೆಗೆ ಮತ್ತು ಗಂಭೀರ ಗಾಯಗೊಂಡಿರುವ ಮರಾಟಿ ಮೂಲೆ ನಿವಾಸಿ ಸೌಮ್ಯಾ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಉಮ್ಮರ್‌ ಅವರು ಅಪಾಯದಿಂದ ಪಾರಾಗಿದ್ದಾರೆ.

ಉಮ್ಮರ್‌ ಅವರು ಹೆತ್ತವರ ಜತೆ ಮಂಗಳೂರಿನ ಆಸ್ಪತ್ರೆಯಿಂದ ಆನೆಕಲ್ಲು ಮೂಲಕ ಕನ್ಯಾನಕ್ಕೆ ಬರುತ್ತಿದ್ದಾಗ ದುರಂತ ಸಂಭವಿಸಿದೆ. 

ನಿಯಂತ್ರಣ ತಪ್ಪಿದ ಕಾರು ಭವಾನಿ ಅವರ ಮನೆಯ ಮೇಲೆ ಬಿದ್ದಿದ್ದು, ಹಿಂಭಾಗದ ಶೀಟಿನ ಛಾವಣಿ ನೆಲಸಮವಾಗಿದೆ. ಈ ಸಂದರ್ಭ ಭವಾನಿ ಅವರ ಸೊಸೆ ಸೌಮ್ಯಾ ಪಾತ್ರೆ ತೊಳೆಯುತ್ತಿದ್ದು, ಮನೆಯ ಛಾವಣಿಯ ಶೀಟುಗಳು ಅವರ ಮೇಲೆ ಬಿದ್ದಿವೆ. ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next