Advertisement

ದಿವ್ಯಾಂಗರು ಇನ್ನು ಸುಲಭವಾಗಿ ಕಾರು ಚಲಾಯಿಸಬಹುದು

03:45 AM Feb 05, 2017 | |

ಕೊಚ್ಚಿ: ಕೇರಳದ ಕೊಚ್ಚಿಯ ಬಿಜು ವರ್ಗೀಸ್‌ (44) ಎಂಬುವರು ಗಿಯರ್‌ನಲ್ಲಿಯೇ ಕಾರನ್ನು ನಿಯಂತ್ರಿಸುವಂಥ ವ್ಯವಸ್ಥೆ ಅಭಿವೃದ್ಧಿಪಡಿಸಿದ್ದಾರೆ.  ಗಾಲಿಕುರ್ಚಿ ಮೇಲೆ ಕುಳಿತು ಜೀವನ ಸಾಗಿಸುತ್ತಿರುವ ಬಿಜು, ತನ್ನಂಥ ಸಾವಿರಾರು ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ  ಹೊಸ ಮಾದರಿ ಕಾರು ನಿಯಂತ್ರಿಸುವ ವ್ಯವಸ್ಥೆ ನಿರ್ಮಿಸಿದ್ದಾರೆ. 

Advertisement

ಅದನ್ನು  ಹೆಚ್ಚು ಮಾರ್ಪಾಡು ಮಾಡದೇ ಕೇವಲ ಗಿಯರ್‌ಗೆ ಈ ಸಾಧನ ಅಳವಡಿಸಿದರೆ ಸಾಕು. ಬ್ರೇಕ್‌, ಕ್ಲಚ್‌, ಆ್ಯಕ್ಸಿಲರೇಟರನ್ನು ಇದು ಒಳಗೊಂಡಿರುತ್ತದೆ. ಯಾವ ಕಾರಿಗಾದರೂ ಈ ವ್ಯವಸ್ಥೆಯನ್ನು ಕೇವಲ 15 ನಿಮಿಷದೊಳಗೆ ಅಳವಡಿಸಬಹುದು. ಅಲ್ಲದೇ ಬೇಡದಿದ್ದಾಗ ತೆಗೆಯಲೂಬಹುದು ಎಂದು ಬಿಜು ಹೇಳಿದ್ದಾರೆ. ಈ ಸಾಧನಕ್ಕೆ ಬಿಜು ಕೇವಲ 15,000ದಿಂದ 30,000 ರೂ. ಹಣ ಪಡೆಯುತ್ತಾರೆ. ಸುಮಾರು 2000 ಅಂಗವಿಕಲರಿಗೆ ಈ ವ್ಯವಸ್ಥೆ ಒದಗಿಸಿಕೊಟ್ಟಿರುವುದಾಗಿ ಬಿಜು ಹೇಳಿದ್ದಾರೆ. 

ಪುಣೆ ಹೆದ್ದಾರಿಯಲ್ಲಿ ಈ  ಕಾರು ಗಂಟೆಗೆ  170ಕಿಮೀ ಓಡುತ್ತದೆ ಎಂದು ಅವರು ಹೇಳಿದ್ದಾರೆ. ಕೇರಳ ಸರ್ಕಾರ ಆಯೋಜಿಸಿದ್ದ ವ್ಯಾಪಾರ್‌ 2017 ವಸ್ತು ಪ್ರದರ್ಶನದಲ್ಲಿ ಬಿಜು ಅವರ ಈ ಸಾಧನ ಕೂಡ ಪ್ರದರ್ಶನಗೊಂಡು ಅಪಾರ ಜನ ಮನ್ನಣೆ ಪಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next