ಲಾಕ್‌ಡೌನ್ ನಿಯಮಾವಳಿಗಳನ್ನು ಸಡಿಲಗೊಳಿಸಲಾಗಿದೆ. ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ, ಶೇ.60ರಷ್ಟು ಮಂದಿ ಪ್ರಯಾಣಕ್ಕಾಗಿ ಖಾಸಗಿ ವಾಹನ ವನ್ನು ಆಯ್ಕೆ ಮಾಡಿಕೊಂಡಿದ್ದರು. ಅವರಲ್ಲಿ ಶೇ.50 ರಷ್ಟು ಮಂದಿ ಸೆಕೆಂಡ್‌ಹ್ಯಾಂಡ್ ಕಾರನ್ನು ಕೊಳ್ಳಲು ಒಲವು ತೋರಿಸಿದ್ದಾರೆ. ಸೆಕೆಂಡ್‌ಹ್ಯಾಂಡ್ ಕಾರನ್ನು ಕೊಳ್ಳುವ ಮುನ್ನ, ಗ್ರಾಹಕರು ಹಲವು ವಿಚಾರಗಳತ್ತ ಗಮನ ಹರಿಸಬೇಕಾಗುತ್ತದೆ.
ಕಾರಿನ ಪರಿಶೀಲನೆ: ಹೊಚ್ಚ ಹೊಸ ಕಾರನ್ನು ಕೊಳ್ಳಲು ಲೋನ್ ಪಡೆ ಯುವಾಗ ವಿಧಿಸುವ ನಿಯಮಗಳೇ, ಸೆಕೆಂಡ್ ಹ್ಯಾಂಡ್ ಕಾರ್‌ಗೆ ಲೋನ್ ಪಡೆಯುವಾಗಲೂ ಇರು ತ್ತವೆ ಎಂದು ಕೆಲವರು ತಿಳಿದಿರುತ್ತಾರೆ. ಆದರೆ ಹಾಗಿಲ್ಲ. ಉದಾಹರಣೆಗೆ, ಐಸಿಐಸಿಐ ಬ್ಯಾಂಕು ಹೊಸ ಕಾರಿನ ಮೇಲಿನ ಸಾಲಕ್ಕೆ 9.30 ಬಡ್ಡಿ ವಿಧಿಸಿದರೆ, ಸೆಕೆಂಡ್ ಹ್ಯಾಂಡ್ ಕಾರುಗಳಿಗೆ 14.25 ಬಡ್ಡಿ ವಿಧಿಸುತ್ತದೆ. ಅದಕ್ಕೆ ಕಾರಣ ಇಲ್ಲದಿಲ್ಲ. ಸೆಕೆಂಡ್ ಹ್ಯಾಂಡ್ ಕಾರಿನ ಬಿಡಿಭಾಗಗಳಿಗೆ ಗ್ಯಾರಂಟಿ ಇರುವುದಿಲ್ಲ. ಹೀಗಾಗಿ ಕಾರು ಮಾಲೀಕ ಸಾಲ ಕಟ್ಟಲಾಗದೆ ಕಾರು ಜಪ್ತಿ ಮಾಡಿ ಕೊಳ್ಳಬೇಕಾದ ಸಮಯದಲ್ಲಿ ಕಾರು ಸುಸ್ಥಿತಿಯಲ್ಲಿ ಇರದಿದ್ದರೆ, ಅದಕ್ಕೆ ಬೆಲೆ ದೊರಕುವುದಿಲ್ಲ. ಹೊಸ ಕಾರಿನ ವಿಷಯದಲ್ಲಿ ಆ ಚಿಂತೆ ಇರುವುದಿಲ್ಲ.
ಹಳೆ ಬಾಕಿ ಕಟ್ಟಿಬಿಡಿ: ಸೆಕೆಂಡ್ ಹ್ಯಾಂಡ್ ಕಾರು ಕೊಳ್ಳುವ ಮುನ್ನ, ಆ ಕಾರಿನ ಮೇಲೆ ಹಳೆಯ ಸಾಲ ಏನಾದರೂ ಇದೆಯೇ, ಅವುಗಳಲ್ಲಿ ಬಾಕಿ ಉಳಿದಿದೆಯೇ ಎನ್ನುವುದನ್ನು ತಿಳಿದುಕೊಳ್ಳಬೇಕು. ಮೂಲ ಮಾಲೀಕರು ಸಾಲದ ಬಾಕಿಯನ್ನು ಪೂರ್ತಿಯಾಗಿ ಚುಕ್ತಾ ಮಾಡಿದ ನಂತರವೇ ಕಾರು ಖರೀದಿಸಬೇಕು. ಉದಾಹರಣೆಗೆ, ಸೆಕೆಂಡ್ ಹ್ಯಾಂಡ್ ಕಾರಿನ ಬೆಲೆ 3 ಲಕ್ಷ ಎಂದುಕೊಳ್ಳೋಣ. ಆ ಕಾರಿನ ಮೇಲೆ 2 ಲಕ್ಷ ಸಾಲ ಬಾಕಿ ಉಳಿಸಿಕೊಂಡಿದ್ದರೆ, ಕಾರು ಖರೀದಿದಾರ 2 ಲಕ್ಷ ರೂ.ಗಳನ್ನು ಮೊದಲು ಬ್ಯಾಂಕಿಗೆ ಕಟ್ಟಿ, ಉಳಿದ 1 ಲಕ್ಷವನ್ನು ಕಾರು ಮಾಲೀಕನಿಗೆ ನೀಡುವುದು ಎಲ್ಲಾ ರೀತಿಯಿಂದಲೂ ಸುರಕ್ಷಿತವಾದ ದಾರಿ.
ವಿಮೆಯ ರಕ್ಷಣೆ: ಹೊಚ್ಚ ಹೊಸ ಕಾರಿಗೆ ಇರುವ ವಿಮಾ ಸೌಲಭ್ಯವನ್ನೇ ಸೆಕೆಂಡ್ ಹ್ಯಾಂಡ್ ಕಾರಿಗೂ ಪಡೆದುಕೊಳ್ಳಬೇಕು. ಕಾರಿಗೆ ಈಗಾಗಲೇ ವಿಮೆ ಮಾಡಿಸಿದ್ದರೆ, ಕಾರು ಖರೀದಿಯಾದ 14 ದಿನಗಳ ಒಳಗೆ ಕಾರಿನ ವಿಮೆ ಪಾಲಿಸಿಯನ್ನು ಖರೀದಿದಾರರು ತಮ್ಮ ಹೆಸರಿಗೆ ಮಾಡಿಸಿಕೊಂಡುಬಿಡಬೇಕು. ಜೊತೆಗೆ “ನೋ ಕ್ಲೈಮ್ ಬೋನಸ್’ (ಎನ್‌ಸಿಬಿ) ಅನ್ನು ಆ ವಿಮೆಗೆ ವರ್ಗಾಯಿಸಿ ಕೊಂಡುಬಿಡಬೇಕು. ಎನ್‌ಸಿಬಿ ಎಂದರೆ, ವಿಮೆಯನ್ನು ಇದುವರೆಗೂ ಕ್ಲೈಮ್ ಮಾಡಿಕೊಳ್ಳದೆ ಇರುವುದಕ್ಕೆ ಸಂಸ್ಥೆ ನೀಡುವ ಬೋನಸ್ ಸವಲತ್ತು. ಇದರಿಂದ ಕಾರಿನ ಮೇಲೆ ಕಟ್ಟುವ ಪ್ರೀಮಿಯಂ ಮೊತ್ತದಲ್ಲಿ ರಿಯಾಯಿತಿ ದೊರೆಯುತ್ತದೆ. ಈ ರಿಯಾಯಿತಿ ಶೇ.20- 50 ರಷ್ಟು ಇರುತ್ತದೆ.
ಪಡೆದುಕೊಳ್ಳಬೇಕಾದ ದಾಖಲೆಗಳು: ರಿಜಿಸ್ಟ್ರೇಷನ್ ಸರ್ಟಿಫೀಕೆಟ್, ಕಾರು ಖರೀದಿಸಿದ್ದರ ಇನ್‌ವಾಯ್ಸ್ ಬಿಲ್, ಸರ್ವಿಸ್ ಬುಕ್, ವಿಮೆ ದಾಖಲೆ ಪತ್ರ ಗಳು, ಫಾರ್ಮ್ 29 (ಕಾರು ಮಾಲೀಕತ್ವ ವರ್ಗಾವಣೆ ಕುರಿತಾದ ದಾಖಲೆ), ಫಾರ್ಮ್ 30 (ಕಾರು ಮಾಲೀಕತ್ವ ವರ್ಗಾ ವಣೆ ಕುರಿತ ಅರ್ಜಿ), ಫಾರ್ಮ್ 32, 35 (ಕಾರು ಮಾಲೀಕ ಲೋನ್ ಮಾಡಿ ಕಾರು ಖರೀದಿಸಿದ್ದರೆ)- ಇತ್ಯಾದಿ ದಾಖಲೆಗ ಳನ್ನು ಖರೀದಿದಾರ ಪಡೆದುಕೊಳ್ಳ ಬೇಕು. ಕೆಲ ಬ್ಯಾಂಕುಗಳು ಮೂರಕ್ಕೂ ಹೆಚ್ಚು ಬಾರಿ ಮಾರಾಟಗೊಂಡ ಕಾರಿಗೆ ಲೋನ್ ನೀಡುವುದಿಲ್ಲ. ಈ ಬಗ್ಗೆಯೂ ಖರೀದಿ ದಾರ ತಿಳಿದುಕೊಂಡಿರ ಬೇಕಾಗುತ್ತದೆ.