Advertisement

ಗಾಂಜಾ ಮಾರುತ್ತಿದ್ದ ಉಗಾಂಡ ಪ್ರಜೆಯ ಸೆರೆ

11:01 AM Oct 27, 2017 | Team Udayavani |

ಬೆಂಗಳೂರು: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಉಗಾಂಡ  ಮೂಲದ ಯುವಕನನ್ನು ಯಲಹಂಕ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಗೋಲಾ ಜಾನ್‌ (25) ಬಂಧಿತ ಆರೋಪಿ. ಆರೋಪಿ ಇತ್ತೀಚೆಗೆ ಯಲಹಂಕದ ಬಿಬಿಎಂಪಿ  ಪಾರ್ಕ್‌ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.

Advertisement

ವೇಳೆ ಆರೋಪಿಯಿಂದ 300 ಗ್ರಾಂ. ಗಾಂಜಾ, 95 ಸಾವಿರ ರೂ. ನಗದು, ಒಂದು ಸ್ಯಾಮ್‌ಸಂಗ್‌ ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ ಎಂದು  ಪೊಲೀಸರು ತಿಳಿಸಿದರು. ಆರೋಪಿ ಮಂಗೋಲಾ ಕೆಲ ವರ್ಷಗಳ ಹಿಂದೆ ವಿಧ್ಯಾಭ್ಯಾಸದ ವೀಸಾದ ಅಡಿಯಲ್ಲಿ ನಗರಕ್ಕೆ ಬಂದಿದ್ದು, ಕಟ್ಟಿಗೆಹಳ್ಳಿಯಲ್ಲಿ ಸ್ನೇಹಿತರ ಜತೆ ವಾಸವಿದ್ದಾನೆ.

ಆರೋಪಿ ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿರುವ ಮಾಹಿತಿಯಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೂಂದು ಪ್ರಕರಣದಲ್ಲಿ ರೈಲು ನಿಲ್ದಾಣದ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳು ಯಲಹಂಕ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕೋಗಿಲು ಲೇಔಟ್‌ ನಿವಾಸಿಗಳಾದ ಮುಜಾಯಿಲ್‌ ಪಾಷ (27), ಬಾಬು (27) ಬಂಧಿತರು. ಗುರುವಾರ ರೈಲು ನಿಲ್ದಾಣದ ಬಳಿ ಸಾರ್ವಜನಿಕರಿಗೆ ಚಿಕ್ಕ ಚಿಕ್ಕ ಗಾಂಜಾ ಪ್ಯಾಕೇಟ್‌ಗಳನ್ನು ಮಾರಾಟ ಮಾಡುತ್ತಿದ್ದ ಮಾಹಿತಿ ಆಧರಿಸಿ ಇಬ್ಬರನ್ನೂ ಬಂಧಿಸಲಾಗಿದೆ. ಆರೋಪಿಗಳಿಂದ 400 ಗ್ರಾಂ. ಗಾಂಜಾ ಜಪ್ತಿ ಮಾಡಿಕೊಂಡಳ್ಳಲಾಗಿದೆ. ಅರೋಪಿಗಳು ಈ ಹಿಂದೆಯೂ ಅಪರಾಧ  ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next