ಮಂಟೂರು (ಮುಧೋಳ): ತಾಯಂದಿರು ಮನೆ ಮನೆಗೆ ಹೋಗಿ ಈ ಸಲ ಮಹಿಳೆಗೆ ಅವಕಾಶ ಸಿಕ್ಕಿದೆ. ವೀಣಾ ಕಾಶಪ್ಪನವರ ಅವರಿಗೆ ಮತ ನೀಡಬೇಕು ಎಂದು ತಿಳಿಸಬೇಕು ಎಂದು ಸಕ್ಕರೆ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಮುಧೋಳ ವಿಧಾನ ಸಭಾ ಕ್ಷೇತ್ರದ ಮಂಟೂರು ಗ್ರಾಮದಲ್ಲಿ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಸಿದ್ದರಾಮಯ್ಯ ಸರಕಾರ ಅನ್ನ ಭಾಗ್ಯ ಸೇರಿ ಅನೇಕ ಯೋಜನೆಗಳನ್ನು ದೀನದಲಿತರಿಗೆ ಅನುಕೂಲ ಮಾಡಿಕೊಟ್ಟಿದೆ. ಕಾಂಗ್ರೆಸ್ ಪಕ್ಷ ನಾಯಕರು ಸ್ವಾತಂತ್ರ್ಯಕ್ಕೆ ಹುತಾತ್ಮರಾಗಿದ್ದಾರೆ. ಆದರೆ, ಬಿಜೆಪಿ ಒಂದು ನಾಯಿಯೂ ಸತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರು ಜಾತಿ ವಿಷ ಬೀಜ ಬಿತ್ತುತ್ತಿದ್ದಾರೆ. ರಾಮನ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದೇಶದ ಚೌಕಿದಾರ ಚೋರ್ ಚೌಕಿದಾರ. ಜನರು ಸುಳ್ಳು ಹೇಳುವವರನ್ನು ನಂಬಬೇಡಿ ಎಂದರು.
ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ ಮಾತನಾಡಿ, ಜಿಪಂ ಅಧ್ಯಕ್ಷೆಯಾಗಿ ಮಂಟೂರು ಗ್ರಾಮದಲ್ಲಿ ರಸ್ತೆ, ಶೌಚಾಲಯ ಮಾಡಿದ್ದೇನೆ. ಅದಕ್ಕೆ ನಿಮ್ಮ ಆಶೀರ್ವಾದ ಕಾರಣ. ತಾಯಂದಿರು, ಅಣ್ಣತಮ್ಮಂದಿರ ಪ್ರೀತಿಗೆ ಅಭಾರಿ. ನನಗೊಂದು ಮತ ನೀಡಿ ಆಶೀರ್ವಾದ ಮಾಡಿ ಎಂದರು.
ಬಣ್ಣದ ಮಾತು ಅಡುವ ಪಕ್ಷ ಬಿಜೆಪಿ. ಸುಳ್ಳು ಹೇಳುವ ಪಕ್ಷ ನಂಬಬೇಡಿ. ಸಂಸದರೂ ಯಾವುದೇ ಅಭಿವೃದ್ಧಿ ಕಾರ್ಯಮಾಡಿಲ್ಲ ಎಂದೂ ದೂರಿದರು. ರೈತರ ಬಗ್ಗೆ ಕಾಳಜಿ ಮೋದಿಯವರಿಗೆ ಇಲ್ಲ. ಉಸಿರಾಟಕ್ಕೆ ಶಕ್ತಿ ನೀಡುವವರನ್ನ ಉಸಿರಾಡದಂತೆ ಪರಿಸ್ಥಿತಿ ಬಿಜೆಪಿ ನಿರ್ಮಾಣ ಮಾಡಿದೆ. ನನಗೊಂದು ಅವಕಾಶ ನೀಡಿದರೆ, ಮಹಿಳೆಯರ ವಿಶೇಷ ಒತ್ತು ನೀಡಿ ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ಸಹಾಯ ಮಾಡುತ್ತೇನೆ. ಶಿಕ್ಷಣ ಹೆಚ್ಚಿನ ಒತ್ತು ನೀಡುತ್ತೇನೆ. ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ. ನಿಮ್ಮ ಜನನಾಯಕಿಯಾಗಿರದೇ ಜನಸೇವಕಿಯಾಗಿ ಕೆಲಸ ಮಾಡುತ್ತೇನೆ ಎಂದು ಮನವಿ ಮಾಡಿದರು.
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಅರ್. ಬಿ.ತಿಮ್ಮಾಪುರ, ವಿನಯ ತಿಮ್ಮಾಪುರ, ಎಸ್.ಆರ್.ಪಾಟೀಲ,
ಸತೀಶ ಬಂಡಿವಡ್ಡರ, ಲೋಕಣ್ಣ ಕೊಪ್ಪದ, ಸಿದ್ದಣ್ಣ ತೇಲಿ, ಎಚ್.ಎಲ್. ಪಾಟೀಲ, ಶಿವಕುಮಾರ ಮಲಘಾಣ, ದಯಾನಂದಗೌಡ ಪಾಟೀಲ, ವೆಂಕಣ್ಣ ಹೊಸಮನಿ ಸೇರಿದಂತೆ ಇತರರಿದ್ದರು.