ಕುಂದಾಪುರ: ಅಪರಾಧ ಪ್ರಕರಣಗಳಲ್ಲಿ ನೊಂದಿರುವ ದೂರುದಾರರಿಗೆ ಪರಿಹಾರ ಸಿಗಬೇಕು. ಅವರಿಗೆ ಕಾನೂನು ಪ್ರಾಧಿಕಾರ ಪರಿಹಾರ ಸಿಗುವಂತೆ ಮಾಡಬೇಕಾಗಿರುವುದು ಅದರ ಹೆಚ್ಚಿನ ಹೊಣೆಗಾರಿಕೆಯಾಗಿದೆ. ನೊಂದವರಿಗೆ ಕಾನೂನು ಪ್ರಾಧಿಕಾರದ ಪರಿಹಾರ ಸಿಗುವಂತೆ ಮಾಡಬೇಕಾಗಿರುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ಕುಂದಾಪುರದ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ರಾಜಶೇಖರ ವಿ. ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಸಂಜೆ ತಾಲ್ಲೂಕು ಕಾನೂನು ಸೇವಾ ಸಮಿತಿ, ಬಾರ್ ಅಸೋಸಿಯೇಶನ್, ಅಭಿಯೋಗ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯ ಪೊಲೀಸ್ ದೂರು ಪ್ರಾಧಿಕಾರ ಮತ್ತು ನೊಂದವರ ಪರಿಹಾರದ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಐಪಿಸಿ 537 ನೇ ಕಲಂ ನಲ್ಲಿ ಅಪರಾಧ ಪ್ರಕರಣಗಳಲ್ಲಿ ನೊಂದವರಿಗೆ ಪರಿಹಾರ ನೀಡಬೇಕು ಎನ್ನುವ ಕುರಿತು ಒಂದಷ್ಟು ಅಂಶಗಳು ಇದ್ದರೂ, ಈ ಕಾನೂನು ವ್ಯಾಪ್ತಿಯ ಒಳಗೆ ನೊಂದವರಿಗೆ ನೀಡುವ ಪರಿಹಾರದ ಮೊತ್ತದ ಪ್ರಮಾಣ ನ್ಯಾಯ ಪೂರ್ಣವಾಗಿಲ್ಲ ಎನ್ನುವ ಸಮಷ್ಟಿ ಅಭಿಪ್ರಾಯಗಳ ಪರಿಗಣನೆಯನ್ನು ತೆಗೆದುಕೊಂಡು 357 (ಎ) ತಿದ್ದುಪಡಿಯನ್ನು ಮಾಡಿ ನೊಂದವರಿಗೆ ಪರಿಹಾರವನ್ನು ಒದಗಿಸುವಲ್ಲಿ ನ್ಯಾಯ ಪಾಲನೆ ಮಾಡುವ ಪ್ರಯತ್ನಗಳು ನಡೆದಿದೆ. ನಿಜವಾದ ಫಲನಾನುಭವಿಗಳಿಗ ಪರಿಹಾರ ಒದಗಿಸುವಲ್ಲಿ ತನಿಖಾಧಿಧಿಕಾರಿಗಳು ಪ್ರಯತ್ನಿಸಬೇಕು. ಪರಿಹಾರ ಹಣಕ್ಕಾಗಿ ಏಜೆಂಟರು ಹುಟ್ಟಿಕೊಳ್ಳದಂತೆ ತಡೆಬೇಕಾದ ಹೊಣೆಯೂ ಜಾಗೃತ ಸಮಾಜದ ಮುಂದಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಹಿರಿಯ ನ್ಯಾಯವಾದಿ ಟಿ.ಬಿ. ಶೆಟ್ಟಿ ಅವರು ಸಿಆರ್‌ಪಿಸಿ 357ರಲ್ಲಿ ಅಪರಾಧ ಸಾಬೀತಾದ ಪ್ರಕರಣಗಳಲ್ಲಿ ನೊಂದವರಿಗೆ ಅಪರಾಧಿಧಿಯಿಂದ ಪಡೆಯಲಾದ ದಂಡ ಮೊತ್ತದಲ್ಲಿ ಒಂದಂಶ ಕೊಡಬೇಕು ಎನ್ನುವುದಕ್ಕೆ ಮಾತ್ರ ಸೀಮಿತವಾಗಿತ್ತು. ಕೆಲವೊಂದು ಅಪರಾಧ ಪ್ರಕರಣಗಳಿಗೆ ವಿಶೇಷ ಕಾನೂನು ರೂಪಣೆಯಾದಾಗ ಅದರಲ್ಲಿ ಪರಿಹಾರದ ಮೊತ್ತವನ್ನು ನಿಗದಿ ಪಡಿಸಲಾಗಿತ್ತು. ಕೆಲವೊಂದು ಅಪರಾಧ ಪ್ರಕರಣಗಳಲ್ಲಿ ನೊಂದವ ರಿಗೆ ನೀಡಲಾಗುವ ಪರಿಹಾರ ಹಣ ಸಾಕಾಗುವುದಿಲ್ಲ, ಇದು ಹೆಚ್ಚಾಗಬೇಕು ಎನ್ನುವ ನ್ಯಾಯಾಧಿಧೀಶರ ಅಭಿಪ್ರಾಯಗಳಿಗೆ ಮನ್ನಣೆ ನೀಡಿ 357(ಎ) ತಿದ್ದುಪಡಿಯ ಮೂಲಕ ಹೆಚ್ಚುವರಿ ಪರಿಹಾರವನ್ನು ನೀಡಲು ಅವಕಾಶವನ್ನು ಕಲ್ಪಿಸಲಾಗಿದೆ.
ಕುಂದಾಪುರ ಬಾರ್ ಅಸೋಸಿಯೇಶನ್ ಉಪಾಧ್ಯಕ್ಷ ಜಯಪ್ರಕಾಶ ಸಾಲಿಯಾನ್ಸ್, ಉಪವಿಭಾಗದ ಡಿವೈಎಸ್‌ಪಿ ಪ್ರವೀಣ್ ಎಚ್. ನಾಯಕ್, ಸಹಾಯಕ ಸರಕಾರಿ ಅಭಿಯೋಜಕ ಸಂದೇಶ ಭಂಡಾರಿ, ತಾ.ಪಂ. ಅಧ್ಯಕ್ಷೆ ಜಯಶ್ರೀ ಮೊಗವೀರ, ಉಪಾಧ್ಯಕ್ಷ ಪ್ರವೀಣ್‌ಕುಮಾರ ಶೆಟ್ಟಿ ಕಡೆR, ಪುರಸಭೆಯ ಉಪಾಧ್ಯಕ್ಷ ರಾಜೇಶ್ ಕಾವೇರಿ, ಗೃಹ ರಕ್ಷಕ ದಳ ಜಿಲ್ಲಾ ಸೆಕಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ., ಸರ್ಕಲ್ ಇನ್ಸ್‌ಪೆಕ್ಟರ್ ರಾಘವ ಪಡೀಲ್, ಎಸ್.ಐ. ನಾಸೀರ್ ಹುಸೇನ್ ಮೊದಲಾದವರು ಉಪಸ್ಥಿತರಿದ್ದರು.
ಬಾರ್ ಅಸೋಸೀಯೇಶನ್ ಕಾರ್ಯದರ್ಶಿ ರವೀಶ್ಚಂದ್ರ ಶೆಟ್ಟಿ ಸ್ವಾಗತಿಸಿದರು, ನ್ಯಾಯವಾದಿ ರಾಘವೇಂದ್ರ ಚರಣ್ ನಾವಡ ನಿರೂಪಿಸಿದರು. ಬೈಂದೂರು ಸರ್ಕಲ್ ಇನ್‌ಸ್ಪೆಕ್ಟರ್ ಮಂಜಪ್ಪ ವಂದಿಸಿದರು.