Advertisement

ನಂಜನಗೂಡಿಗೆ ಈಗ ಸಿಸಿ ಕ್ಯಾಮರಾ ಕಾವಲು

12:41 PM Feb 17, 2017 | Team Udayavani |

ನಂಜನಗೂಡು: ಪಟ್ಟಣದಲ್ಲಿ ಕಾನೂನು ಮೀರಿ ನಡೆದರೆ ಜೋಕೆ, ಹಾಗಂತ ಎಲ್ಲೂ ಫ‌ಲಕಗಳನ್ನು ಅಳವಡಿಸಿಲ್ಲ. ಆದರೆ ಕಾನೂನು ಉಲ್ಲಂ ಸಿ ನೀವು ನಡೆದುಕೊಳ್ಳುತ್ತಿರುವ ಸಂಗತಿಗಳನ್ನು ದೃಶ್ಯ ಸಹಿತವಾಗಿ ಸೆರೆ ಹಿಡಿದು ಪೊಲೀಸ್‌ ಇಲಾಖೆಗೆ ದಾಖಲಿಸುವ ಕೆಲಸವನ್ನೀಗ ನಗರದಾದ್ಯಂತ ವಿವಿಧ ವೃತ್ತಗಳಲ್ಲಿ ಅಳವಡಿಸಲಾದ ಸಿಸಿ ಕ್ಯಾಮರಾಗಳು ಸದ್ದಿಲ್ಲದೆ ಮಾಡುತ್ತಿವೆ.

Advertisement

ನಗರದ ವಿವಿಧ ಮುಖ್ಯ ಸ್ಥಳ ಗಳಲ್ಲಿ ಈಗಾಗಲೆ ಸಿಸಿ ಕ್ಯಾಮರಾ ಅಳವಡಿಸ ಲಾಗಿದೆ. ಕಾನೂನು ಮೀರಿ ನಡೆದರೆ ಸಿಕ್ಕಿ ಬೀಳುವುದು ಈಗ ಖಚಿತ. ಹಾಗಾಗಿ ಸಾರ್ವಜನಿಕರೇ ಜೋಕೆ ಎನ್ನುವಂತಾಗಿದೆ. ಪುರ ಸಭೆಯಿಂದ ನಗರ ಸಭೆಯಾಗಿ ಬಡ್ತಿ ಹೊಂದಿ ಅತ್ಯಂತ ವೇಗವಾಗಿ ವಿಸ್ತಾರ ಗೊಳ್ಳುತ್ತಿರುವ ರಾಜ್ಯದ ಕೈಗಾರಿಕಾ ಹಾಗೂ ಧಾರ್ಮಿಕ ನಗರಗಳಲ್ಲಿ ಒಂದಾದ ನಂಜನಗೂಡಿನಲ್ಲಿ ಅಪರಾಧಗಳನ್ನು ತಡೆಯುವ ಉದ್ದೇಶದಿಂದ ಪೊಲೀಸ್‌ ಇಲಾಖೆ ಸಿಸಿ ಕ್ಯಾಮರಾಗಳನ್ನು ಅಳವಡಿಸಿದೆ.

ಇಲಾಖೆ ಗುರುತಿಸಿರುವ ಅಪೊಲೋ, ನೆಹರು, ಹುಲ್ಲಳ್ಳಿ, ರಾಕ್ಷಸ ಮಂಟಪ, ಅಂಬೇಡ್ಕರ ವೃತ್ತ, ಪ್ರಮುಖ ಕಾಲೇಜುಗಳು, ಬಾಲಕಿಯರ ವಸತಿ ನಿಲಯ ಸೇರಿದಂತೆ ನಗರದ ಆಯ್ದ 30ಕ್ಕೂ ಹೆಚ್ಚು ಪ್ರದೇಶಗಳ ಕಾವಲುಗಾರಿಕೆಯ ನೇರ ಹೊಣೆಗಾರಿಕೆಯನ್ನು ಸಿಸಿ ಕ್ಯಾಮರಾಗಳು ನಿರ್ವಹಿಸುತ್ತವೆ.

ಆದ್ದದರಿಂದ ಪಟ್ಟಣ ವ್ಯಾಪ್ತಿಯ ಅಪರಾಧಗಳ ಸಂಖ್ಯೆ ಕಡಿಮೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ನಿರಂತರವಾಗಿ ಹಗಲು-ರಾತ್ರಿ ಎನ್ನದೆ ಕಾರ್ಯಾಚರಣೆ ನಡೆಸುವ ಕಾವಲುಗಾರಿಕೆ ಕ್ಯಾಮರಾಗಳು, ಅಲ್ಲಿನ ಪ್ರತಿಯೊಂದು ನಡಾವಳಿಗಳನ್ನು ಸೆರೆ ಹಿಡಿದು ಕ್ಷಣದಲ್ಲಿ ನಗರದ ಪೊಲೀಸ್‌ ಠಾಣೆಯಲ್ಲಿನ ದೊಡ್ಡದಾದ ಎರಡು ಟಿವಿಗಳ ಮುಖಾಂತರ ಬಿತ್ತರಿಸುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next