Advertisement

ಅತ್ಯಾಚಾರಕ್ಕೆ ಯತ್ನಿಸಿದ ಕ್ಯಾಬ್‌ ಚಾಲಕನ ಬಂಧನ

11:29 AM Nov 10, 2017 | Team Udayavani |

ಬೆಂಗಳೂರು: ಕುಡಿತದ ಅಮಲಿನಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನಿಸಿದ್ದ ಕ್ಯಾಬ್‌ ಚಾಲಕ ಜೈಲು ಸೇರಿದ್ದಾನೆ. ಕೊಡಿಗೆಹಳ್ಳಿಯ  ಶರತ್‌ (32) ಬಂಧಿತ ಆರೋಪಿ.

Advertisement

ಸೋಲದೇವನಹಳ್ಳಿಯ ಆಚಾರ್ಯ ಕಾಲೇಜು ರಸ್ತೆಯ ಮನೆಯೊಂದರಲ್ಲಿ ನವೆಂಬರ್‌ 4ರ ರಾತ್ರಿ ಘಟನೆ ನಡೆದಿದ್ದು, ಸಂತ್ರಸ್ಥ ವಿದ್ಯಾರ್ಥಿನಿ ನೀಡಿದ ದೂರಿನನ್ವಯ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸಂತ್ರಸ್ಥ ವಿದ್ಯಾರ್ಥಿನಿ ಸ್ನೇಹಿತೆ ಜತೆ ಬಾಡಿಗೆ ಮನೆಯಲ್ಲಿ ವಾಸವಿದ್ದು, ಅದೇ ಮನೆಯ ಎರಡನೇ ಮಹಡಿಯಲ್ಲಿ ಆರೋಪಿಯ ಸ್ನೇಹಿತರು ವಾಸವಿದ್ದರು. ಆರೋಪಿ ಶರತ್‌ ನ.4ರಂದು ಸ್ನೇಹಿತನ ಬರ್ತಡೇ ಪಾರ್ಟಿಗೆಂದು ಮನೆಗೆ ಬಂದಿದ್ದ.

ಈ ವೇಳೇ ಸ್ನೇಹಿತರೆಲ್ಲರೂ ಮದ್ಯಸೇವಿಸಿ ಮಲಗಿದ್ದಾರೆ. ಆರೋಪಿ ಶರತ್‌ ರಾತ್ರಿ 2.30ರ ಸುಮಾರಿಗೆ ವಿದ್ಯಾರ್ಥಿನಿಯಿದ್ದ ಮನೆ ಒಳ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಯುವತಿ ಜೋರಾಗಿ ಕಿರುಚಿಕೊಂಡಿದ್ದಾರೆ. ಆತನನ್ನು ತಳ್ಳಿ ನಮ್ಮ 100 ಸಂರ್ಖಯೆಗೆ ಕರೆ ಮಾಡಿದ್ದರು.

ಕೂಡಲೇ ಕಾರ್ಯಪ್ರವೃತ್ತರಾದ ಸೋಲದೇವನಹಳ್ಳಿ ಠಾಣೆಯ ಹೊಯ್ಸಳ ಸಿಬ್ಬಂದಿ, ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಆರೋಪಿ ಶರತ್‌ ಅವಿವಾಹಿತನಾಗಿದ್ದು, ಖಾಸಗಿ ಕಂಪೆನಿಯಲ್ಲಿ ಕಾರು ಚಾಲಕನಾಗಿದ್ದಾನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next