ಯಲ್ಲಾಪುರ: ಬಸ್ ತಂಗುದಾಣವೊಂದು ಅಪಾಯದ ಸ್ಥಿತಿಯಲ್ಲಿದ್ದರೂ, ಆ ಬಗ್ಗೆ ಗ್ರಾಪಂ ಗಮನ ಹರಿಸದೇ ಇರುವುದು ನಿರ್ಲಕ್ಷಕ್ಕೆ ಹಿಡಿದ ಕನ್ನಡಿಯಾಗಿದೆ.
ದಿಢೀರ್ ಮಳೆ ಬಂತು ಎಂದು ಬಸ್ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ಆಶ್ರಯ ಪಡೆದಲ್ಲಿ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಇದರಿಂದ ಬಸ್ ತಂಗುದಾಣ ಇದ್ದೂ, ಬಳಕೆಗೆ ಸಿಗದೇ ನಿಷ್ಪ್ರಯೋಜಕ ಎನಿಸಿದೆ. ಇಂತಹ ಸ್ಥಿತಿಯಲ್ಲಿದ್ದರೂ ಬಸ್ ತಂಗುದಾಣದ ಗೋಡೆ ಸರಿಪಡಿಸುವ ಅಥವಾ ಮರು ನಿರ್ಮಾಣ ಮಾಡುವ ಗೋಜಿಗೆ ಸ್ಥಳಿಯ ಆಡಳಿತ ಹೋಗದೇ ಇರುವುದು ವಿಪರ್ಯಾಸ.
Advertisement
ತಾಲೂಕಿನ ನಂದೊಳ್ಳಿ ಗ್ರಾಪಂ ವ್ಯಾಪ್ತಿಯ ಅಣಲಗಾರ ಮಾರ್ಗದ ಗುಮ್ಮಾನಿಮನೆ ಬಸ್ ತಂಗುದಾಣವೊಂದು ಕಳೆದ ಮಳೆಗಾಲದಲ್ಲಿ ಗೊಡೆ ಕುಸಿದು ಬಿದ್ದಿದೆ. ಇದರಿಂದಾಗಿ ಪ್ರಯಾಣಿಕರು ಬಸ್ ತಂಗುದಾಣವನ್ನು ಆಶ್ರಯಿಸುವಂತಿಲ್ಲ. ಯಾವುದೇ ಕ್ಷಣದಲ್ಲಿ ಇಡೀ ಕಟ್ಟಡ ಕುಸಿದು ಬೀಳುವ ಅಪಾಯವಿದೆ.