Advertisement

ಬಸ್‌ ಚಕ್ರದಡಿ ಸಿಲುಕಿ ಸವಾರ ದಾರುಣ ಸಾವು

03:45 AM Feb 03, 2017 | Team Udayavani |

ಸಿದ್ದಾಪುರ: ಶಂಕರನಾರಾಯಣದಲ್ಲಿ ಶುಭ ಕಾರ್ಯ ಮುಗಿಸಿಕೊಂಡು ಹೆಬ್ರಿಯ ಕಡೆ ತೆರಳುವಾಗ ಕುಂದಾಪುರ ತಾಲೂಕಿನ ಶಂಕರನಾರಾಯಣ ಪೊಲೀಸ್‌ ಠಾಣಾ ವ್ಯಾಪ್ತಿಯ ಕಟ್ಟೆಮಕ್ಕಿ ಅಪ್ಪಿನಲ್ಲಿ ಬುಲ್ಲೆಟ್‌ ಬೈಕ್‌ ಹಾಗೂ ಖಾಸಗಿ ಬಸ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್‌ ಸವಾರ ಬಸ್‌ ಚಕ್ರದಡಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಗುರುವಾರ ಸಂಭವಿಸಿದೆ.

Advertisement

ಬುಲೆಟ್‌ ಸವಾರ ಹೆಬ್ರಿಯ ಚಾರ ಕೋಟೆಚೆಟ್ಟು ನಿವಾಸಿ ಮಂಜುನಾಥ ಶೆಟ್ಟಿ ಅವರ ಪುತ್ರ ಪ್ರಕಾಶ್‌ ಶೆಟ್ಟಿ (27) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ.

ಪ್ರಕಾಶ್‌ ಶೆಟ್ಟಿ ಅವರು ಹೆಬ್ರಿಯಲ್ಲಿ ಶ್ರೀ ದುರ್ಗಾ ಹೆಸರಿನ ಟ್ರಾವೆಲ್‌ ಏಜೆನ್ಸಿ ನಡೆಸುತ್ತಿದ್ದಾರೆ. ಅವರು ಶಂಕರನಾರಾಯಣದಲ್ಲಿ ಸ್ನೇಹಿತರೋರ್ವರ ಮದುವೆ ಮುಗಿಸಿಕೊಂಡು ಹೆಬ್ರಿಯ ಕಡೆಗೆ ಹೋಗುವಾಗ, ಉಡುಪಿಯಿಂದ ಸಿದ್ಧಾಪುರದ ಕಡೆಗೆ ಬರುತ್ತಿದ್ದ ಖಾಸಗಿ ಬಸ್‌ ರಾಜ್ಯ ಹೆದ್ದಾರಿಯ ಶಂಕರನಾರಾಯಣ ಕಟ್ಟೆಮಕ್ಕಿ ಬಳಿ ಬುಲೆಟ್‌ಗೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. 

ಅಪಘಾತದಲ್ಲಿ ಪ್ರಕಾಶ್‌ ಶೆಟ್ಟಿ ಅವರು ರಸ್ತೆಗೆ ಎಸೆಯಲ್ಪಟ್ಟಿದ್ದು ಈ ವೇಳೆ ಅವರ ತಲೆ ಭಾಗದ ಮೇಲೆ ಖಾಸಗಿ ಬಸ್ಸು ಹರಿದಿದೆ.
ಬಸ್ಸು ತಲೆ ಮೇಲೆ ಹರಿದ ಪರಿಣಾಮ ಬುಲೆಟ್‌ ಸವಾರ ಪ್ರಕಾಶ್‌ ಶೆಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಕಾಶ ಶೆಟ್ಟಿ ಅವರು ಅವಿವಾಹಿತರಾಗಿದ್ದು, ತಂದೆ ತಾಯಿ ಹಾಗೂ ಮೂವರು ಸಹೋದರರು ಹಾಗೂ ಸಹೋದರಿ ಯನ್ನು ಅಗಲಿದ್ದಾರೆ.

ಶಂಕರನಾರಾಯಣ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದುದ್ದು, ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಅಪಾಯಕಾರಿ ಪ್ರದೇಶ
ಉಡುಪಿ ಶಿವಮೊಗ್ಗ ರಾಜ್ಯ ಹೆದ್ದಾರಿಯಾದ ಶಂಕರನಾರಾಯಣ ಗ್ರಾಮದ ಕಟ್ಟೆಮಕ್ಕಿ ಪ್ರದೇಶವು ಅಪಘಾತ ಪ್ರದೇಶವಾಗಿದೆ. ಶಂಕÃ ‌ ನಾರಾಯಣದ ಸಿಂಗಿನಕೊಡ್ಲುನಿಂದ ಹಾಲಾಡಿಯ ಹೊಳೆಯ ಸೇತುವೆಯ ತನಕ ಪ್ರದೇಶವು ತಿರುವು ಹಾಗೂ ಅಪ್ಪಿನಿಂದ ಕೂಡಿದೆ. ಈಗಾಗಲೇ ಈ ಪ್ರದೇಶಗಳಲ್ಲಿ ಅನೇಕ ಅಪಘಾತಗಳು ಸಂಭವಿ ಸಿದ್ದು, ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಪ್ರದೇಶಗಳಲ್ಲಿ ವಾಹನಗಳ ನಡುವೆ ಅಪಘಾತಗಳಲ್ಲದೆ, ಕಾಡು ಪ್ರಾಣಿ ಗಳಿಂದಲೂ ವಾಹನ ಸವಾರರ ಪ್ರಾಣ ಹಾನಿ ಸಂಭವಿಸಿವೆ. ಇದರ ಬಗ್ಗೆ ಸಂಬಂಧ ಪಟ್ಟ ಇಲಾಖೆ ಗಮನ ಹರಿಸುವ ಮೂಲಕ ಅಪಘಾತವನ್ನು ತಡೆಯ ಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next