Advertisement

ಎರಡಡಿ ವಾಲಿದ ಪೊಲೀಸ್‌ ಸಮುಚ್ಚಯ!

10:08 AM Oct 17, 2021 | Team Udayavani |

ಬೆಂಗಳೂರು: ಇತ್ತೀಚೆಗೆ ನಗರದಲ್ಲಿ ಕಟ್ಟಡ ಕುಸಿತ ಪ್ರಕರಣಗಳು ಹೆಚ್ಚಾಗುತ್ತಿದ್ದು ಈಗ ನಗರದಲ್ಲಿ ಮತೊಂದು ಕಟ್ಟಡ ಕುಸಿಯುವ ಹಂತದಲ್ಲಿದೆ. ಮೂರು ವರ್ಷಗಳ ಹಿಂದೆಯಷ್ಟೇ ನಿರ್ಮಾಣ ಮಾಡಿದ್ದ ಪೊಲೀಸ್‌ ವಸತಿ ಸಮುಚ್ಚಯದ ಕಟ್ಟಡದಲ್ಲಿ ಬಿರುಕು ಉಂಟಾಗಿದ್ದು, ಎರಡು ಅಡಿ ಯಷ್ಟು ಎಡಕ್ಕೆ ವಾಲಿದೆ.

Advertisement

ಕಟ್ಟಡದಲ್ಲಿದ್ದ 32 ಪೊಲೀಸ್‌ ಅಧಿಕಾರಿ-ಸಿಬ್ಬಂದಿ ಕುಟುಂಬವನ್ನು ಅನ್ನಪೂರ್ಣೇಶ್ವರಿ ನಗರದಲ್ಲಿರುವ ಪೊಲೀಸ್‌ ಕ್ವಾಟ್ರರ್ಸ್‌ಗೆ ಸ್ಥಳಾಂತರಿಸಲಾಗಿದೆ. ಈ ಸಂಬಂಧ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌, ಪಶ್ಚಿಮ ವಿಭಾಗ ಡಿಸಿಪಿ ಸಂದೀಪ್‌ ಎಂ.ಪಾಟೀಲ್‌ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇದನ್ನೂ ಓದಿ:- ಸರ್ಕಾರಿ ಕೆಲಸ ಕೊಡಿಸುವುದಾಗಿ 500 ಮಂದಿಗೆ ವಂಚನೆ

ಕರ್ನಾಟಕ ರಾಜ್ಯ ಪೊಲೀಸ್‌ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದಿಂದ 2016ರಲ್ಲಿ ಬಿನ್ನಿಮಿಲ್‌ ಸಮೀ ಪದಲ್ಲಿ ನೂತನ ಮಾದರಿಯಲ್ಲಿ ಏಳು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲಾಗಿತ್ತು.

ಸುಮಾರು ಎರಡು ವರ್ಷಗಳ ಕಾಲ ನಿರ್ಮಾಣ ಕಾರ್ಯ ನಡೆದಿದ್ದು, 2018ರಲ್ಲಿ ಪೂರ್ಣಗೊಂಡಿತ್ತು. ಅನಂತರ ನಗರ ಸಶಸ್ತ್ರ ಮೀಸಲು ಪಡೆ, ಸಿವಿಲ್‌ ಪೊಲೀಸ್‌ ಸೇರಿ ಪೊಲೀಸ್‌ ಇಲಾಖೆಯ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 64 ಮಂದಿ ಅಧಿಕಾರಿ-ಸಿಬ್ಬಂದಿ ಕುಟುಂಬ ವಾಸವಾಗಿತ್ತು. ಇದೀಗ 32 ಕುಟುಂಬ ವಾಸವಾಗಿರುವ ಕಟ್ಟಡದಲ್ಲಿ ಬಿರುಕು ಬಿಟ್ಟಿದ್ದು, ಎಡಕಡೆ ಎರಡು ಅಡಿಯಷ್ಟು ವಾಲಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

 ಒಂದೂವರೆ ವರ್ಷದ ಹಿಂದೆಯೇ ವಾಲಿದ ಕಟ್ಟಡ: ಮೂಲಗಳ ಪ್ರಕಾರ ಎರಡು ವರ್ಷಗಳಿಂದ ಕಟ್ಟಡದಲ್ಲಿ ಸಣ್ಣ ಪ್ರಮಾಣದಲ್ಲಿ ಬಿರುಕು ಬಿಟ್ಟಿದ್ದು, ಹಂತ- ಹಂತವಾಗಿ ವಾಲಿದೆ. ಶುಕ್ರವಾರ ಮಧ್ಯಾಹ್ನ 32 ಮಂದಿ ಕುಟುಂಬ ವಾಸವಾಗಿರುವ ಬ್ಲಾಕ್‌ವೊಂದರಲ್ಲಿ ಬಿರುಕಿನ ಶಬ್ಧ ಬಂದಿದ್ದು, ಆತಂಕಗೊಂಡ ಕಟ್ಟಡ ನಿವಾಸಿಗಳು ಹೊರಗಡೆ ಬಂದು ನೋಡಿದಾಗ ಕಟ್ಟಡದ ಕೆಲವೆಡೆ ಬಿರುಕು ಬಿಟ್ಟಿದ್ದು, ಎರಡು ಅಡಿಯಷ್ಟು ವಾಲಿರುವುದು ಕಂಡು ಬಂದಿದೆ.

ಈ ಸಂಬಂಧ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌, ಪಶ್ಚಿಮ ವಿಭಾಗ ಡಿಸಿಪಿ ಸಂಜೀಪ್‌ ಎಂ.ಪಾಟೀಲ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ. 32 ಕುಟುಂಬಗಳ ಸ್ಥಳಾಂತರಕ್ಕೆ ಚಿಂತಿಸಿ ದ್ದು,ತಾತ್ಕಾಲಿಕವಾಗಿ ಮತ್ತೂಂದು ಕಟ್ಟಡದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next