ಚಿಕ್ಕಬಳ್ಳಾಪುರ: ಕಳೆದ ಬಜೆಟ್‌ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ಸಮಗ್ರ ಅಭಿವೃದ್ಧಿಗೆ 50 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿ ಬಂಪರ್ ಕೊಡುಗೆ ನೀಡಿದ್ದ ರಾಜ್ಯ ಸರ್ಕಾರ ಈ ಬಾರಿ ಬಜೆಟ್‌ನಲ್ಲಿ ಬೆಂಗಳೂರಿಗೆ ಪರ್ಯಾಯ ವಾಗಿ ಚಿಕ್ಕ ಬಳ್ಳಾಪುರಕ್ಕೆ ಉಪ ನಗರ ಭಾಗ್ಯ ಸಿಗುವುದೇ ಎಂಬ ನಿರೀಕ್ಷೆ ಹೊಂದಲಾಗಿದೆ.
ಕಂಪನಿ ಸ್ಥಾಪನೆಗೆ ಅವಕಾಶ: ಬೆಂಗಳೂರಿ ನಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಸಂಚಾರ ಹಾಗೂ ಜನ ದಟ್ಟಣೆ, ವಾಯು ಮಾಲಿನ್ಯ ನಿಯಂತ್ರಿಸುವುದು ಹಿಂದಿ ಗಿಂತಲೂ ಈಗ ಹೆಚ್ಚು ಅನಿರ್ವಾಯ ವಾಗಿದ್ದು, ಬೆಂಗಳೂರಿಗೆ ಕೇವಲ 54 ಕಿ.ಮೀ. ದೂರದಲ್ಲಿರುವ ಚಿಕ್ಕಬಳ್ಳಾಪುರ ಉಪ ನಗರಕ್ಕೆ ಹೇಳಿ ಮಾಡಿಸಿದಂತಹ ಯೋಗ್ಯ ಸ್ಥಳವಾಗಿದೆ. ಅದರಲ್ಲೂ ಬಿಟಿ, ಬಿಟಿ ಕಂಪನಿಗಳ ಸ್ಥಾಪನೆಗೆ ಜಿಲ್ಲೆಯಲ್ಲಿ ವಿಫುಲ ಅವಕಾಶಗಳಿವೆ.
ಬಡಾವಣೆಗಳು: ಈಗಾಗಲೇ ವಿಶ್ವ ವಿಖ್ಯಾತ ನಂದಿಗಿರಿಧಾಮ ಸುತ್ತಲೂ ಅನೇಕ ಬಡಾವಣೆಗಳು, ವಿಲ್ಲಾಗಳು, ಅಪಾರ್ಟ್‌ಮೆಂಟ್‌ಗಳು ಬೆಂಗಳೂರು ನಿವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ಸೌಲಭ್ಯಗಳಿಂದ ತಲೆ ಎತ್ತಿ ನಿಂತಿವೆ. ಚಿಕ್ಕಬಳ್ಳಾಪುರ ಮೂಲಕ ಬೆಂಗಳೂರು ಹೈದರಾಬಾದ್ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಇದೆ. ದೇವನಹಳ್ಳಿ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೇವಲ 30 ಕಿ.ಮೀ. ದೂರದಲ್ಲಿರುವ ಚಿಕ್ಕಬಳ್ಳಾಪುರ ಬೆಂಗಳೂರಿಗೆ ಪರ್ಯಾಯ ನಗರವಾಗಿ ಬೆಳೆ ಯುವ ಎಲ್ಲಾ ಲಕ್ಷಣಗಳಿವೆ.
ಹೀಗಾಗಿ ಈ ಬಜೆಟ್‌ನಲ್ಲಿ ಚಿಕ್ಕಬಳ್ಳಾಪುರವನ್ನು ಉಪ ನಗರವಾಗಿ ಘೋಷಿಸಿ ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರ ತನ್ನ ಇಚ್ಛಾಶಕ್ತಿ ಪ್ರದರ್ಶಿಸುವುದೇ ಎಂಬ ನಿರೀಕ್ಷೆ ಇದ್ದು, ಈ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ರಾಜ್ಯ ಸರ್ಕಾರದ ಮೇಲೆ ಅದರಲ್ಲೂ ಸಿಎಂ ಸಿದ್ದರಾಮಯ್ಯ ಮೇಲೆ ಸಾಕಷ್ಟು ಒತ್ತಡ ಹೇರಿ ದ್ದಾರೆಂದು ತಿಳಿದು ಬಂದಿದೆ ಜಿಲ್ಲೆಗೆ ಘೋಷಿಸಬೇಕಿದೆ ಸಂಶೋಧನಾ ಕೇಂದ್ರ ದೇಶದ ಕೈಗಾರಿಕಾ ಕ್ರಾಂತಿಗೆ ನಾಂದಿಯಾಡಿದ ವಿಶ್ವ ವಿಖ್ಯಾತ ಸರ್ ಎಂ.ವಿಶ್ವೇಶ್ವರಯ್ಯ, ರಾಸಾಯನಶಾಸ್ತ್ರದ ವಿಜ್ಞಾನಿ ಸಿ.ಎನ್.ಆರ್. ರಾವ್ ರಂತಹ ಖ್ಯಾತನಾಮರು ಹುಟ್ಟಿ ಬೆಳೆದಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂದಿಗೂ ಯಾವುದೇ ರೀತಿಯ ಸಂಶೋಧನಾ ಕೇಂದ್ರ ಸ್ಥಾಪಿತವಾಗಿಲ್ಲ. ಜಿಲ್ಲೆಯ ವಿದ್ಯಾರ್ಥಿಗಳಿಗೆ ವಿಜ್ಞಾನ ಹಾಗೂ ತಂತ್ರಜ್ಞಾನದ ಜೊತೆಗೆ ಕೃಷಿ, ತೋಟಗಾರಿಕೆ, ರೇಷ್ಮೆಗೆ ಸಂಬಂಧಿಸಿದಂತೆ ಹಾಗೂ ಉದ್ಯೋ ಗಾವಕಾಶಗಳನ್ನು ಗಿಟ್ಟಿಸಿಕೊಳ್ಳುವಂತಹ ಕೌಶಲ್ಯಾಭಿವೃದ್ಧಿ ಅಧ್ಯಯನಕ್ಕಾಗಿ ಪೂರಕವಾದ ರಾಜ್ಯ ಮಟ್ಟದ ಸಂಶೋಧನಾ ಕೇಂದ್ರವನ್ನು ಸರ್ ಎಂವಿ ಹೆಸರಿನಲ್ಲಿ ತೆರೆದರೆ ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಉತ್ತಮ ಅವಕಾಶ ದೊರೆಯು ವಂತಾಗುತ್ತದೆ ಎನ್ನುತ್ತಾರೆ ಶಿಕ್ಷಣ ತಜ್ಞ ಡಾ.ಕೋಡಿ ರಂಗಪ್ಪ. ಸರ್‌ಎಂವಿ ಮ್ಯೂಸಿಯಂಗೆ ಬೇಕು ಸರ್ಕಾರದ ಕಾರ್ಯಲಯ
ತಮ್ಮ ಜ್ಞಾನ ಭಂಡಾರದಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ಇಡೀ ಜಗತ್ತಿನ ಗಮನ ಸೆಳೆದ ಸರ್ ಎಂ.ವಿಶ್ವೇಶ್ವರಯ್ಯ ಹುಟ್ಟೂರು ಮುದ್ದೇನಹಳ್ಳಿ ಇಂದಿಗೂ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಅವರ ಹೆಸರಿನಲ್ಲಿ ಸ್ಥಾಪಿಸಿರುವ ವಸ್ತು ಸಂಗ್ರಹಾಲಯ ಉನ್ನತ್ತೀಕರಣಗೊಳ್ಳದೇ ಮೂಲೆಗುಂಪಾ ಗಿದ್ದು, ಕಳೆದ 20 ವರ್ಷಗಳ ಹಿಂದೆ ಹೇಗಿತ್ತೋ ಇಂದಿಗೂ ಹಾಗೆ ಇದೆ. ಸರ್ ಎಂವಿ ಬದುಕು ಬರಹಕ್ಕೆ ಸಂಬಂಧಿಸಿದ ಕೃತಿಗಳ ಇಲ್ಲವಾಗಿದೆ. ಇನ್ನೂ ಅವರ ಸಮಾಧಿ ಸ್ಥಳ ಕೂಡ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಂಡಿಲ್ಲ. ಸಮಾಧಿ ನಿರ್ವಹಣೆಗೆ ಸಿಬ್ಬಂದಿ ಕೊರತೆ ಎದುರಾಗಿದ್ದು, ಈ ಬಾರಿ ಬಜೆಟ್‌ನಲ್ಲಿ ಸರ್‌ಎಂವಿ ಹುಟ್ಟೂರಿ ನಲ್ಲಿರುವ ವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ ನೀಡಬೇಕಿದೆ
●ಕಾಗತಿ ನಾಗರಾಜಪ್ಪ