ನವದೆಹಲಿ: ಕೇಂದ್ರ ಸರ್ಕಾರದ 2017-18ನೇ ಸಾಲಿನ ಬಜೆಟ್ ಫೆಬ್ರವರಿ 1ರಂದೇ ಮಂಡಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
“ಕೇಂದ್ರ ಸರ್ಕಾರ ಮಂಡಿಸುವ ಬಜೆಟ್ ಚುನಾವಣೆ ನಡೆಯುವ ರಾಜ್ಯಗಳಿಗೆ ಸಂಬಂಧಿಸಿದ್ದಲ್ಲ. ಕೇವಲ ಅವುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಂಡಿಸಲೂ ಬರುವುದಿಲ್ಲ. ಇಡೀ ವರ್ಷದಲ್ಲಿ ಬೇರೆ ಬೇರೆ ರಾಜ್ಯದ ಚುನಾವಣೆಗಳೂ ಬರಲಿವೆ. ಹಾಗೆಂದು ಕೇಂದ್ರ ಸರ್ಕಾರ ಬಜೆಟ್ ಮಂಡಿಸದೆ ಇರುವುದಕ್ಕೆ ಸಾಧ್ಯವೇ?’ ಎಂದು ಸುಪ್ರೀಂಕೋರ್ಟ್‌ಪ್ರಶ್ನಿಸಿದೆ.
ಚುನಾವಣಾ ಪೂರ್ವದಲ್ಲಿ ಕೇಂದ್ರ ಸರ್ಕಾರ ಮಂಡಿಸುತ್ತಿರುವ ಬಜೆಟ್ ಅನ್ನು ಪ್ರಶ್ನಿಸಿ ಅರ್ಜಿ ಸಲ್ಲಿಕೆಯಾಗಿತ್ತು. “ಬಜೆಟ್‌ನಲ್ಲಿ ಸರ್ಕಾರ ಘೋಷಿಸುವ ಯೋಜನೆಗಳು ಚುನಾವಣೆ ನಡೆಯುವ ಪ್ರದೇಶಗಳ ಜನರ ಮೇಲೆ ಪ್ರಭಾವ ಬೀರಧಿಲಿವೆ. ಚುನಾವಣೆ ಬಳಿಕ ಕೇಂದ್ರ ಸರ್ಕಾರದ ವಿತ್ತ ಅಧಿವೇಶನಕ್ಕೆ ಅವಕಾಶ ನೀಡಬೇಕು’ ಎಂದು ವಾದ ಕೇಳಿಬಂದಿತ್ತು.
ವಿತ್ತ ಇಲಾಖೆ ಕಳೆದವಾರವೇ ಬಜೆಟ್‌ಗಳನ್ನು ಮುದ್ರಿಸಿದೆ. ಬಜೆಟ್ ಅಧಿವೇಶನ ಜ.31ರಿಂದ ಆರಂಭಗೊಳ್ಳಲಿದೆ. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸುತ್ತಿರುವ ನಾಲ್ಕನೇ ಬಜೆಟ್ ಇದಾಗಿದ್ದು, ಈ ಬಾರಿ ಕೇಂದ್ರ ಬಜೆಟ್‌ನಲ್ಲಿಯೇ ರೇಲ್ವೆ ಬಜೆಟ್ ಅನ್ನೂ ವಿಲೀನಗೊಳಿಸಿರುವುದು ವಿಶೇಷ. ಫೆಬ್ರವರಿ 1ಕ್ಕೆ ಬಜೆಟ್ ಮಂಡನೆಯಾದರೂ ಏಪ್ರಿಲ್ 1ರಿಂದ ಯೋಜನೆಗಳು ಜಾರಿಗೊಳ್ಳಲಿವೆ.
ಮತ್ತೂಂದೆಡೆ ಮುಂದಿನ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯ ಪ್ರಮಾಣವನ್ನು ಶೇ.3.3ರಿಂದ ಶೇ. 3.4ಕ್ಕೆ ನಿಗದಿ ಮಾಡಲು ಮುಂದಾಗಿದೆ ಎಂದು ಗೋಲ್ಡ್‌ಮನ್ ಸ್ಯಾಚ್‌ನ ವರದಿಯಲ್ಲಿ ಉಲ್ಲೇಖೀಸಲಾಗಿದೆ.