Advertisement

ಕಾಸರಗೋಡು ನಗರದೆಲ್ಲೆಡೆ ಮುರಿದುಬಿದ್ದ ಚರಂಡಿ ಸ್ಲಾಬ್‌

02:30 AM Mar 28, 2019 | sudhir |

ಕಾಸರಗೋಡು: ಪಾದಚಾರಿಗಳಿಗೆ ಅಪಾಯ ಭೀತಿಯೊಡ್ಡಿರುವ ಕಾಸರಗೋಡು ನಗರದ ಕಾಲುದಾರಿಗಳು (ಫುಟ್‌ಪಾತ್‌ಗಳು) ಹಲವೆಡೆಗಳಲ್ಲಿ ಬಿರುಕು ಬಿಟ್ಟಿವೆ. ಪ್ರತಿದಿನವೂ ಜನಸಂದಣಿ ಇರುವ ಕಾಸರಗೋಡು ನಗರದ ಚರಂಡಿಯ ಮೇಲೆ ಹಾಸಿದ ಕಾಂಕ್ರೀಟ್‌ ಸ್ಲಾಬ್‌ಗಳನ್ನು ಕಾಲುದಾರಿಯಾಗಿ ಉಪ ಯೋಗಿಸಲಾಗುತ್ತಿದ್ದು, ಇದು ಹಲವು ಕಡೆಗಳಲ್ಲಿ ತುಂಡಾಗಿ ಬಿದ್ದಿವೆ.

Advertisement

ನಗರದ ಹೊಸ ಬಸ್‌ ನಿಲ್ದಾಣ, ಹಳೆ ಬಸ್‌ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಬಳಿ, ತಾಯಲಂಗಾಡಿ, ಬ್ಯಾಂಕ್‌ ರೋಡ್‌, ಎಂ.ಜಿ.ರೋಡ್‌, ಕರಂದಕ್ಕಾಡು, ಕೆಪಿಆರ್‌ ರಾವ್‌ ರೋಡ್‌, ನಾಯಕ್ಸ್‌ ರೋಡ್‌, ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ಪರಿಸರ, ಕೋಟೆಕಣಿ ರಸ್ತೆ ಸಹಿತ ಹಲವೆಡೆ ಸ್ಲಾಬ್‌ಗಳು ಹಾನಿಗೊಂಡಿವೆ.

ಈ ದಾರಿಯಾಗಿ ನಡೆಯುವಾಗ ಮಕ್ಕಳು, ಮಹಿಳೆಯರು, ವಯೋವೃದ್ಧರು ಸೇರಿದಂತೆ ಇತರ ಎಲ್ಲರೂ ಚರಂಡಿಯೊಳಗೆ ಬಿದ್ದು ಗಾಯಗೊಂಡಿರುವ ಹಲವಾರು ಘಟನೆಗಳು ನಡೆದಿವೆ. ಕಾಸರಗೋಡು ಸರಕಾರಿ ಹೈಯರ್‌ ಸೆಕೆಂಡರಿ ಶಾಲೆ, ಕಾಸರಗೋಡು ಜಿಯುಪಿ ಶಾಲೆ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಸಣ್ಣ ಮಕ್ಕಳು ಸಂಚರಿಸುವ ದಾರಿಯಲ್ಲೂ ಈ ರೀತಿಯಾಗಿ ಸ್ಲಾಬ್‌ಗಳು ಮುರಿದು ಬಿದ್ದಿವೆ.

ತಾಯಲಂಗಾಡಿ ರೈಲು ನಿಲ್ದಾಣ ರಸ್ತೆಯಲ್ಲೂ ಇದೇ ಸ್ಥಿತಿ ಇದೆ. ಕೆಲವು ಕಡೆಗಳಲ್ಲಿ ಮುರಿದ ಸ್ಲಾಬ್‌ಗಳನ್ನು ತೆಗೆಯದೆ ಅದರ ಮೇಲೆ ಮತ್ತೂಂದನ್ನು ಸ್ಥಾಪಿಸಿ ಮತ್ತಷ್ಟು ಸಮಸ್ಯೆ ಸೃಷ್ಟಿಸಲಾಗಿದೆ. ತುಂಡಾಗಿರುವ ಸ್ಲಾಬ್‌ ತೆಗೆದು ಹೊಸತನ್ನು ಸ್ಥಾಪಿಸಬೇಕೆಂದು ಹಲವು ಬಾರಿ ಆಗ್ರಹಿಸಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೂ ಗುರಿಯಾಗಿದೆ.
ಕಾಸರಗೋಡು ನಗರವು ಸಮಗ್ರ ಅಭಿವೃದ್ಧಿಯಿಂದ ವಂಚಿತವಾಗಿದೆ. ಇನ್ನೂ ಹೇಳಿಕೊಳ್ಳುವಂತಹ ಪ್ರಗತಿ ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ನಗರಸಭಾ ಆಡಳಿತಕ್ಕೆ ದೊಡ್ಡ ಜವಾಬ್ದಾರಿಯಿದ್ದರೂ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರಲಾಗಿದೆ. ಇಡೀ ಜಿಲ್ಲೆಯ ಪ್ರಮುಖ ಕೇಂದ್ರವಾಗಿರುವ ಕಾಸರಗೋಡಿನ ಫುಟ್‌ಪಾತ್‌ ವ್ಯವಸ್ಥೆಯೇ ಇಷ್ಟೊಂದು ಕೆಳಮಟ್ಟದಲ್ಲಿದ್ದು, ಇತರ ವ್ಯವಸ್ಥೆಗಳಿಗೆ ಕೈಗನ್ನಡಿಯಂತಿದೆ. ಆಡಳಿತವು ಫುಟ್‌ಪಾತ್‌ ವ್ಯವಸ್ಥೆಯನ್ನುಸರಿಪಡಿÓಬೇಕೆಂಬ ಆಗ್ರಹ ವ್ಯಾಪಕವಾಗಿದೆ.

ಕಾಲುದಾರಿಗಳು ಅಸ್ತವ್ಯಸ್ತ
ಕಾಸರಗೋಡು ನಗರದ ಹಲವು ಭಾಗಗಳಲ್ಲಿ ಕಾಲುದಾರಿಗಳು ಅಸ್ತವ್ಯಸ್ತವಾಗಿದ್ದು, ಇದರಿಂಜ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಮಕ್ಕಳಂತೂ ನಡೆಯುವಾಗ ಬಹಳಷ್ಟು ಕಡೆಗಳಲ್ಲಿ ಬಿದ್ದು ಗಾಯಗೊಂಡಿದ್ದಾರೆ.

Advertisement

ನಗರಸಭಾ ಆಡಳಿತವು ಮೌನಕ್ಕೆ ಶರಣಾಗಿದೆ. ನಗರಸಭೆ ‌ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಐಶಾರಾಮಿ ವಾಹನಗಳಲ್ಲಿ ಸಂಚರಿಸುತ್ತಿದ್ದರೂ, ಕನಿಷ್ಠ ಸಮರ್ಪಕ ಫುಟ್‌ಪಾತ್‌ ವ್ಯವಸ್ಥೆ ಕೂಡ ಮಾಡದಿರುವುದು ದೌರ್ಭಾಗ್ಯ.

Advertisement

Udayavani is now on Telegram. Click here to join our channel and stay updated with the latest news.

Next