ಸಿರುಗುಪ್ಪ: ತಾಲೂಕಿನ ಹಾಗಲೂರು ಗ್ರಾಮದ ಹತ್ತಿರಹರಿಯುತ್ತಿರುವ ಕೆಂಚಿಹಳ್ಳಕ್ಕೆ ರೂ. 4 ಕೋಟಿ ವೆಚ್ಚದಲ್ಲಿನಿರ್ಮಾಣವಾಗುತ್ತಿರುವ ಸೇತುವೆ ನಿರ್ಮಾಣಕಾರ್ಯ ನಿಧಾನಗತಿಯಲ್ಲಿ ನಡೆಯುತ್ತಿದ್ದು ಸಾರ್ವಜನಿಕರ ಸಂಚಾರಕ್ಕೆ ಅನಾನುಕೂಲವಾಗುತ್ತಿದೆ.
ತಾಲೂಕಿನ ರಾಜ್ಯ ಹೆದ್ದಾರಿ 61ರಿಂದ ದೇವದುರ್ಗಾ,ಅಮರಾಪುರ, ಭೋಗಾವತಿ, ಹಿರೇಕೊಟೆ°ಕಲ್ಲು,ಆಯನೂರು, ತಾಳೂರು, ಬಳ್ಳಾರಿ, ರೂಪನಗುಡಿ,ಚೆಳ್ಳಗುರ್ಕಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ128ರಲ್ಲಿ ಬರುವ ಹಾಗಲೂರು ಗ್ರಾಮದ ಹತ್ತಿರಕೆಂಚಿಹಳ್ಳಕ್ಕೆ ಸೇತುವೆ ನಿರ್ಮಾಣ ಕಾರ್ಯಕ್ಕೆ ಶಾಸಕಎಂ.ಎಸ್. ಸೋಮಲಿಂಗಪ್ಪ 7 ತಿಂಗಳ ಹಿಂದೆಭೂಮಿ ಪೂಜೆ ನೆರವೇರಿಸಿದ್ದರು.
ಈ ಸೇತುವೆ ನಿರ್ಮಾಣವಾದರೆ ರಾಜ್ಯ ಹೆದ್ದಾರಿ128ರಿಂದ ರಾಜ್ಯ ಹೆದ್ದಾರಿ 61ಕ್ಕೆ ಸಂಪರ್ಕ ಕಲ್ಪಿಸಿದರೆವಾಹನಗಳ ಮತ್ತು ಸಾರ್ವಜನಿಕರ ಓಡಾಟಕ್ಕೆಅನುಕೂಲವಾಗುತ್ತದೆ ಎನ್ನುವ ಉದ್ದೇಶದಿಂದ ಮತ್ತು ಪ್ರತಿವರ್ಷ ಮಳೆಗಾಲ ಬಂದಾಗ ಸದ್ಯ ಸಂಪರ್ಕ ಕಲ್ಪಿಸುವ ನೆಲಮಟ್ಟದ ಸೇತುವೆಯಮೇಲೆ ನೀರು ಹರಿಯುತ್ತಿದ್ದರಿಂದ ಇಲ್ಲಿನ ಜನರು ಮಳೆಗಾಲದಲ್ಲಿ ನಿರಂತರವಾಗಿ ಸಂಚಾರ ಸಂಕಷ್ಟ ಅನುಭವಿಸುತ್ತಿದ್ದರು.
ಸುಮಾರು 20 ವರ್ಷಗಳಿಂದಲೂ ಹೊಸಸೇತುವೆ ನಿರ್ಮಾಣ ಮಾಡಬೇಕೆಂದು ಹಾಗಲೂರುಗ್ರಾಮಸ್ಥರು ಶಾಸಕರಿಗೆ, ಸಂಸದರಿಗೆ, ಸರ್ಕಾರಕ್ಕೆಮನವಿ ಸಲ್ಲಿಸುತ್ತಲೇ ಬಂದಿದ್ದರು. ಪ್ರತಿ ಸಲ ಎಂಪಿ,ಎಂಎಲ್‌ಎ ಚುನಾವಣೆಗಳು ನಡೆದಾಗಲು ಸೇತುವೆನಿರ್ಮಾಣ ಮಾಡುವ ಭರವಸೆಯನ್ನು ಚುನಾವಣೆಗೆನಿಂತ ಅಭ್ಯರ್ಥಿಗಳು ಕೊಡುತ್ತಲೇ ಬಂದಿದ್ದರು.
ಶಾಸಕ ಎಂ.ಎಸ್. ಸೋಮಲಿಂಗಪ್ಪ ತಮ್ಮಅ ಧಿಕಾರಾವಧಿ ಯಲ್ಲಿ ಈ ಸೇತುವೆಯನ್ನು ನಿರ್ಮಾಣಮಾಡುವುದಾಗಿ ಭರವಸೆ ನೀಡಿದ್ದು, ರೂ. 4 ಕೋಟಿಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಿಸಿದ್ದು, ಶ್ರೀಗುರು ಕನಸ್ಟ್ರಕ್ಷನ್ ಕಂಪನಿಯವರುಸೇತುವೆ ನಿರ್ಮಾಣದ ಗುತ್ತಿಗೆ ಪಡೆದಿದ್ದು, ಈಗಾಗಲೇಕಾಮಗಾರಿ ಆರಂಭಿಸಿದ್ದಾರೆ. ಆದರೆ ಕಾಮಗಾರಿಗಳುಬಿರುಸಾಗಿ ನಡೆಯುತ್ತಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಆರ್. ಬಸವರೆಡ್ಡಿ ಕರೂರು