Advertisement

ಪಾದರಾಯನಪುರದಲ್ಲಿ ಪರೀಕ್ಷೆ ಸ್ಥಗಿತ

06:01 AM Jun 03, 2020 | Lakshmi GovindaRaj |

ಬೆಂಗಳೂರು: ಪಾದರಾಯನಪುರದಲ್ಲಿ ನಡೆಯುತ್ತಿದ್ದ ಸಾಮುದಾಯಿಕ ಕೋವಿಡ್‌ 19 ಸೋಂಕು ಪರೀಕ್ಷೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಬಿಬಿಎಂಪಿಯ ಪಶ್ಚಿಮ ವಲಯದ ಆರೋಗ್ಯಾಧಿಕಾರಿ ಡಾ. ಮನೋರಂಜನ್‌ ಹೆಗ್ಡೆ ತಿಳಿಸಿದ್ದಾರೆ. ನಗರದ ವಿವಿಧ ವಾರ್ಡ್‌ಗಳಲ್ಲಿ ಹಾಗೂ ಹೊರ ರಾಜ್ಯಗಳಿಂದ ಬರುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಾದರಾಯನಪುರದಲ್ಲಿ ತಾತ್ಕಾಲಿಕ ‌ವಾಗಿ ಸಾಮುದಾಯಿಕ ಸೋಂಕು ಪರೀಕ್ಷೆ ನಿಲ್ಲಿಸಿದ್ದೇವೆ.  ಆದರೆ, ಯಾರಿಗಾದರೂ ಸೋಂಕಿನ ಲಕ್ಷಣಗಳ ಅನುಮಾನ ವ್ಯಕ್ತವಾದರೆ ಅವರನ್ನು ಕೂಡಲೇ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಹೇಳಿದರು.

Advertisement

ಪಾದರಾಯನಪುರದಲ್ಲಿ ರ್‍ಯಾಂಡಮ್‌ ಸೋಂಕು ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟ  ಹಿನ್ನೆಲೆಯಲ್ಲಿ ಸಾಮುದಾಯಿಕ ಪರೀಕ್ಷೆ ಮಾಡಲಾಗಿತ್ತು. ಪಾದರಾಯನಪುರದಲ್ಲಿ ಏ.14ರಿಂದ ನಡೆದ ಸಾಮುದಾಯಿಕ ಸೋಂಕು ಪರೀಕ್ಷೆಯಲ್ಲಿ ಒಟ್ಟು 853 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರಲ್ಲಿ ಒಟ್ಟು ಮೂರು ಜನರಿಗೆ  ಸೋಂಕು ದೃಢಪಟ್ಟಿತ್ತು. ಇದಕ್ಕೂ ಮುನ್ನ ನಡೆಸಿದ ರ್‍ಯಾಂಡಮ್‌ ಪರೀಕ್ಷೆಗೆ 214ರಲ್ಲಿ ಏಳುಜನರಿಗೆ ಸೋಂಕು ದೃಢಪಟ್ಟಿತ್ತು.

120 ಜನರಿಗೆ ಪರೀಕ್ಷೆ: ಜಗಜೀವನರಾಮ್‌ ನಗರ ಠಾಣೆಯ ಪೊಲೀಸ್‌ ಕಾನ್ಸ್‌ಟೇಬಲ್‌ ಒಬ್ಬರಿಗೆ (ರೋಗಿ ಸಂಖ್ಯೆ -3374) ಅವರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ 14ಜನ ಪೊಲೀಸ್‌ ಸಿಬ್ಬಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ  ಎಂದು ಡಾ. ಮನೋರಂಜನ್‌ ಹೆಗ್ಡೆ ತಿಳಿಸಿದ್ದಾರೆ. ಇನ್ನು ಪೊಲೀಸ್‌ ಸಿಬ್ಬಂದಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಗಜೀವನರಾಮ್‌ ನಗರ ಠಾಣೆಯ ಪೊಲೀಸ್‌ ಸಿಬ್ಬಂದಿ, ಸಿರ್ಸಿ ವೃತ್ತದ  ಬಿಬಿಎಂಪಿ ಹೆರಿಗೆ ಆಸ್ಪತ್ರೆ, ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತರು ಸೇರಿ ಒಟ್ಟು 120 ಜನರನ್ನು ಸೋಮವಾರ ಹಾಗೂ ಮಂಗಳವಾರ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಮಾಹಿತಿ  ನೀಡಿದರು.

ನಾವು ಪಾಲಿಕೆ ಸದಸ್ಯರನ್ನು ಭೇಟಿಯೇ ಮಾಡಿಲ್ಲ!: ಪಾದರಾಯನಪುರ ಪಾಲಿಕೆ ಸದಸ್ಯ ಇಮ್ರಾನ್‌ ಪಾಷಾ ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಹುಡುಕುವುದೇ ಸವಾ ಲಾಗಿ ಪರಿಣಮಿಸಿದೆ ಎಂದು ಪಾಲಿಕೆ  ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿಯವರೆಗೆ ಇಮ್ರಾನ್‌ಪಾಷಾ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ 21ಜನ ಹಾಗೂ ದ್ವಿತೀಯ ಸಂಪರ್ಕ ದಲ್ಲಿದ್ದ 23 ಜನರನ್ನು ಕ್ವಾರಂಟೈನ್‌ ಮಾಡಲಾಗಿದೆ. ಆದರೆ, ಇವರ ಸಂಪರ್ಕದಲ್ಲಿ  ಬಹಳಷ್ಟು ಜನರಿದ್ದು, ಸಮರ್ಪಕವಾಗಿ ಮಾಹಿತಿ ನೀಡದೆ ಇರುವುದರಿಂದ ಕ್ವಾರಂಟೈನ್‌ ಮಾಡುವುದಕ್ಕೆ ಸಮಸ್ಯೆಯಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಆರೋಗ್ಯಾಧಿಕಾರಿ  ತಿಳಿಸಿದರು.

ಇಮ್ರಾನ್‌ಪಾಷಾ ಅವರಿಗೆ ಸೋಂಕು ದೃಢಪಟ್ಟು ಆಸ್ಪತ್ರೆಗೆ ಕಳುಹಿಸುವ ವೇಳೆಯೂ ನೂರಾರು ಜನ ಆ್ಯಂಬುಲೆನ್ಸ್‌ ಬಳಿ ಸೇರಿದ್ದರು. ಅವರ ಸಂಪರ್ಕದಲ್ಲಿದ್ದವರ ಮಾಹಿತಿ ಸಂಗ್ರಹಿಸುವ ವೇಳೆ “ನಾವು ಪಾಲಿಕೆ ಸದಸ್ಯನ ಸಂಪರ್ಕದಲ್ಲೇ ಇರಲಿಲ್ಲ, ಹೆಚ್ಚು ಸಮಯ  ಮಾತಾಡಿಲ್ಲ ಹಾಗೂ ಭೇಟಿ ಮಾಡಿ ತುಂಬಾ ದಿನಗಳಾ ಗಿದ್ದವು” ಎಂದು ಜಾರಿಕೊಳ್ಳುತ್ತಿದ್ದು, ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚು ವುದು ಸವಾಲಾಗಿ ಪರಿಣಮಿಸಿದೆ.

Advertisement

ಇಬ್ಬರು ಅಧಿಕಾರಿಗಳು ಸ್ವಯಂ ಪ್ರೇರಿತ ಕ್ವಾರಂಟೈನ್‌: ಇಮ್ರಾನ್‌ ಷಾಷಾ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಪಾಲಿಕೆಯ ಕೇಂದ್ರ ಕಚೇರಿಯ ಇಬ್ಬರು ಅಧಿಕಾರಿಗಳು ಹಾಗೂ ಒಬ್ಬರು ಗುತ್ತಿಗೆದಾರರು ಸ್ವಯಂ ಪ್ರೇರಿತವಾಗಿ ಕ್ವಾರಂಟೈನ್‌  ಆಗಿದ್ದಾರೆ. ಇವರು ಇಮ್ರಾನ್‌ಪಾಷಾ ಅವರೊಂದಿಗೆ ಹೆಚ್ಚು ಸಂಪರ್ಕದಲ್ಲಿದ್ದರು ಎನ್ನಲಾಗಿದ್ದು, ಸ್ವಯಂ ಪ್ರೇರಿತವಾಗಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next