Advertisement
ಅವರು ಮಣಿಪಾಲದ ಡಾ| ಟಿಎಂಎ ಪೈ ಸಭಾಂಗಣದಲ್ಲಿ ಶುಕ್ರವಾರ ಉದಯವಾಣಿಯ ಮಾಧ್ಯಮ ಪಾಲುದಾರಿಕೆಯಲ್ಲಿ ಮಾಹೆಯ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ (ಎಂಐಸಿ) ವತಿಯಿಂದ ಆಯೋಜಿಸಲಾದ ಸಂಸ್ಥೆಯ ಸ್ಥಾಪಕ ಗೌರವ ನಿರ್ದೇಶಕ ಡಾ| ಎಂ.ವಿ. ಕಾಮತ್ ಸ್ಮರಣಾರ್ಥ ದತ್ತಿ ಉಪನ್ಯಾಸವನ್ನು “ಪತ್ರಿಕಾ ರಂಗ: ನಿನ್ನೆ, ಇಂದು ಮತ್ತು ಮುಂದೆ’ ವಿಷಯದ ಕುರಿತು ವರ್ಚುವಲ್ ವಿಧಾನದಲ್ಲಿ ನಡೆಸಿಕೊಟ್ಟರು.
Related Articles
ಮಾಧ್ಯಮ ಮಿತ್ರರು ಸುದ್ದಿ ಮತ್ತು ಅಭಿಪ್ರಾಯಗಳ (ನ್ಯೂಸ್‌ಮತ್ತು ವ್ಯೂಸ್) ನಡುವೆ ಲಕ್ಷ್ಮಣ ರೇಖೆಯನ್ನು ಹಾಕಿಕೊಂಡಿರ ಬೇಕು. ದಿ| ಎಂ.ವಿ. ಕಾಮತ್ ಅವರೂ ಈ ಅಂತರ ಕಾಯ್ದು ಕೊಂಡಿದ್ದರು. ತಮ್ಮ ನೀತಿ ಮತ್ತು ಜೀವನ ಶೈಲಿಯಿಂದಾಗಿ ದೇಶ ಮತ್ತು ವಿದೇಶಗಳಲ್ಲೂ ಅವರು ಗೌರವಕ್ಕೆ ಪಾತ್ರರಾಗಿದ್ದರು ಎಂದು ನಾಯ್ಡು ಬಣ್ಣಿಸಿದರು.
Advertisement
ಜಂಕ್ ಫುಡ್‌ಗೆ ಬರೆ, ಯೋಗಕ್ಕೆ ಕರೆಪ್ರಕೃತಿ ಮತ್ತು ಸಂಸ್ಕೃತಿ, ಮೌಲ್ಯ ಮತ್ತು ನೈತಿಕತೆಯನ್ನು ಪೋಷಿಸಬೇಕು. ದೈಹಿಕ ಕ್ಷಮತೆಗಾಗಿ ನಿತ್ಯ ಯೋಗ ಮಾಡಬೇಕು. ಜಂಕ್-ಇನ್‌ಸ್ಟಂಟ್ ಫುಡ್‌ಗಳನ್ನು ತ್ಯಜಿಸಿ ಉತ್ತಮ ಆಹಾರ ಸ್ವೀಕರಿಸಬೇಕು ಎಂದರು. ಸಾಮಾಜಿಕ ಮಾಧ್ಯಮಗಳ ಆದಾಯದಲ್ಲಿ ಮುದ್ರಣಕ್ಕೂ ಪಾಲಿರಲಿ
ವೃತ್ತಪತ್ರಿಕೆಗಳಂತಹ ಸಾಂಪ್ರದಾಯಿಕ ಮಾಧ್ಯಮಗಳ ಆದಾಯವನ್ನು ಸಾಮಾಜಿಕ ಮಾಧ್ಯಮಗಳ ಕಂಪೆನಿಗಳು ಕಿತ್ತುಕೊಳ್ಳುತ್ತಿವೆ. ಹಾಗಾಗಿ ಕೆಲವು ರಾಷ್ಟ್ರಗಳಲ್ಲಿ ಇರುವಂತೆ ಸಾಮಾಜಿಕ ಮಾಧ್ಯಮಗಳ ಆದಾಯದಲ್ಲಿ ಮುದ್ರಣ ಮಾಧ್ಯಮಗಳಿಗೂ ಪಾಲು ದೊರಕುವಂಥ ನಿಯಮವನ್ನು ನಮ್ಮಲ್ಲೂ ಜಾರಿತರಬೇಕೆಂದು ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟರು. ಕಾಫಿ ಇಲ್ಲದೆ ಪತ್ರಿಕೆ ಓದುತ್ತೇನೆ!
ಇಂಟರ್‌ನೆಟ್‌ನ ಈ ಕಾಲಘಟ್ಟದಲ್ಲಿಯೂ ಕಾಫಿಯ ಸೇವನೆ ಜತೆ ವೃತ್ತಪತ್ರಿಕೆ ಓದನ್ನು ಲಕ್ಷಾಂತರ ಜನರು ಮುಂದುವರಿಸುತ್ತಿದ್ದಾರೆ. “ನಾನೂ ಕೂಡ ಮುಂಜಾನೆ ಪತ್ರಿಕೆಗಳನ್ನು ಓದುತ್ತೇನೆ, ಆದರೆ ಕಾಫಿ ಇಲ್ಲದೆ’ ಎಂದು ನಾಯ್ಡು ಹೇಳಿದರು.