Advertisement

ಕೊನೆಗೂ ತಲುಪಿದ ಪುಸ್ತಕ

06:47 PM Jun 17, 2019 | mahesh |

ಲೈಬ್ರರಿಯಿಂದ ಪುಸ್ತಕ ತಂದಿರುತ್ತಾರೆ. ವಾಪಸ್‌ ಕೊಡುವುದು ಮರೆತೇ ಹೋಗಿರುತ್ತದೆ. ಬುಕ್‌ ಶೆಲ್ಫ್ನಲ್ಲಿ ಬಿದ್ದಿರುವ ಆ ಪುಸ್ತಕ ಇನ್ಯಾವಾಗಲೋ ಕಣ್ಣಿಗೆ ಬಿದ್ದರೂ, ಫೈನ್‌ ಕಟ್ಟಬೇಕೆಂಬ ಕಾರಣಕ್ಕೆ ಅದನ್ನು ವಾಪಸ್‌ ಮಾಡುವುದೇ ಇಲ್ಲ. ಲೈಬ್ರರಿಯನ್‌ ಕೇಳುತ್ತಾರೆಂದು ಲೈಬ್ರರಿ ಕಡೆಗೆ ಹೋಗುವುದನ್ನೂ ನಿಲ್ಲಿಸಿ ಬಿಡುತ್ತಾರೆ. ಲೈಬ್ರರಿಯನ್‌ಗಳೂ ಇಂಥ ಅನೇಕರನ್ನು ನೋಡಿರುತ್ತಾರೆ. ಇನ್ನೊಮ್ಮೆ ಈ ಕಡೆ ಬಂದರೆ, ಅವರಿಂದ ಫೈನ್‌ ಕಟ್ಟಿಸಿಕೊಳ್ಳಲೇಬೇಕು ಅಂತ ಕಾಯುತ್ತಿರುತ್ತಾರೆ. ಆದರೆ, ಲಂಡನ್‌ ಬಳಿಯ ಲೋಯೆಸ್ಟಾಫ್ಟ್ ಎಂಬಲ್ಲಿನ ಗ್ರಂಥಾಲಯದಲ್ಲಿ ವ್ಯತಿರಿಕ್ತವಾದ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬರು ತಾವು 52 ವರ್ಷಗಳ ಹಿಂದೆ ತೆಗೆದುಕೊಂಡು ಹೋಗಿದ್ದ ಪುಸ್ತಕವೊಂದನ್ನು ವಾಪಸ್‌ ಮಾಡಿದ್ದಾರೆ, ಅದೂ ಫೈನ್‌ ಸಮೇತ!

Advertisement

1967ರಲ್ಲಿ ಲೈಬ್ರರಿಯಿಂದ ತೆಗೆದುಕೊಂಡು ಹೋಗಿದ್ದ “ದಿ ಮೆಟಾಫಿಸಿಕಲ್‌ ಪೊಯಟ್ಸ್‌’ ಪುಸ್ತಕವನ್ನು ಅಂಚೆ ಮೂಲಕ ಗ್ರಂಥಾಲಯಕ್ಕೆ ಕಳಿಸಿರುವ ಆ ವ್ಯಕ್ತಿ, ಜೊತೆಗೆ 100 ಪೌಂಡ್‌ ಚೆಕ್‌ ಕೂಡಾ ಇಟ್ಟಿದ್ದಾರೆ. “ಲೋಯೆಸ್ಟಾಫ್ಟ್ನಲ್ಲಿ ತಾವು ವಾಸವಾಗಿದ್ದಾಗ ಈ ಪುಸ್ತಕವನ್ನು ಕೊಂಡೊಯ್ದಿದ್ದು, ಕಾರಣಾಂತರಗಳಿಂದ ವಾಪಸ್‌ ಮಾಡಲಾಗಿರಲಿಲ್ಲ. ಆ ಬಗ್ಗೆ ವಿಷಾದಿಸುತ್ತೇನೆ’ ಎಂದು ಪತ್ರವನ್ನೂ ಬರೆದಿದ್ದಾರೆ. ಅಂಚೆ ತೆರೆದು ನೋಡಿದ ಲೈಬ್ರರಿಯನ್‌ಗೆ “ಈಗಿನ ಕಾಲದಲ್ಲಿ ಇಂಥವರೂ ಇದ್ದಾರ?’ ಎಂದು ಅಚ್ಚರಿಯಾಯ್ತಂತೆ.

Advertisement

Udayavani is now on Telegram. Click here to join our channel and stay updated with the latest news.

Next